For Quick Alerts
ALLOW NOTIFICATIONS  
For Daily Alerts

ನೀವು ಟ್ರೈ ಮಾಡಲೇಬೇಕಾದ 10 ಚಿಕನ್ ರೆಸಿಪಿಗಳು!

|

ಭಾರತೀಯರು ಎಲ್ಲಾ ಋತುಮಾನಗಳಲ್ಲೂ ಖಾರ ತಿಂಡಿಗಳನ್ನು ಇಷ್ಟಪಡುತ್ತಾರೆ. ಅದು ಸಸ್ಯಾಹಾರವಾಗಿರಲಿ ಮಾಂಸಾಹಾರವಾಗಿರಲಿ ಸ್ಪೈಸಿ ಆಗಿರುವ ಫುಡ್ ಅಂದರೆ ಅವರಿಗೆ ಪಂಚಪ್ರಾಣ. ಮಾಂಸಹಾರದಲ್ಲಿ ಸಸ್ಯಾಹಾರಕ್ಕಿಂತಲೂ ಸ್ಪೈಸಿ ಕಾಂಬಿನೇಶನ್ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು.

ಚಿಕನ್ ಬಳಸಿ ಮಾಡುವ ಪ್ರತಿಯೊಂದು ಮಾಂಸಾಹಾರಿ ಡಿಶ್ ಕೂಡ ಅತ್ಯವಶ್ಯಕ ಖಾರವನ್ನು ಬೆರೆತುಕೊಂಡಿರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ನಾಲಗೆಯನ್ನು ಹಾಟ್‌ಗೊಳಿಸಲು ನಾವು ತಂದಿದ್ದೇವೆ 10 ಚಿಕನ್ ರೆಸಿಪಿಗಳನ್ನು. ಇದನ್ನು ನೀವು ಮನೆಯಲ್ಲೇ ತಯಾರಿಸಿ ಚಿಕನ್‌ನ ಅದ್ಭುತ ರುಚಿಯನ್ನು ನಿಮ್ಮ ನಾಲಗೆಯಲ್ಲಿ ತಾಜಾ ಆಗಿ ಇಟ್ಟುಕೊಳ್ಳಬಹುದು.

ಕ್ರಿಸ್ಪಿ ಮತ್ತು ಒಳಗೆ ಮೆದು ಮಾಂಸವನ್ನು ಒಳಗೊಂಡಿರುವ ಈ ಫ್ರೈ ಮಾಡಿದ ಚಿಕನ್ ರೆಸಿಪಿ ನಿಮ್ಮ ಬಾಯಲ್ಲಿ ಇದರ ರುಚಿಯನ್ನು ಹಸಿಯಾಗಿರಿಸುತ್ತದೆ. ಹಾಗಿದ್ದರೆ ಈ ರುಚಿಯನ್ನು ನಿಮ್ಮದಾಗಿಸಿಕೊಳ್ಳಲು ತಯಾರಾಗಿ.

ಚಿಕನ್ ಪ್ರಿಯರ ಮನತಣಿಸುವ ಚಾಪ್ಲಿ ಕಬಾಬ್ ಸವಿದಿರುವಿರಾ?

ಸ್ಪೈಸಿಯಾಗಿ ಫ್ರೈ ಮಾಡಿದ ಚಿಕನ್ ಲೆಗ್:

ಸ್ಪೈಸಿಯಾಗಿ ಫ್ರೈ ಮಾಡಿದ ಚಿಕನ್ ಲೆಗ್:

ಈ ಡಿಶ್ ಮಾಡಲು ಸುಲಭ ಮತ್ತು ರುಚಿಕರವಾಗಿದೆ. ನಿಮ್ಮ ಕುಟುಂಬಕ್ಕೊಂದು ಉತ್ತಮ ಸ್ವಾದವಾದ ವ್ಯಂಜನವನ್ನು ಈ ರೆಸಿಪಿ ಉಣಬಡಿಸುತ್ತದೆ. ಸ್ಪೈಸಿಯಾಗಿ ಫ್ರೈ ಮಾಡಿದ ಚಿಕನ್ ಲೆಗ್ ರೆಸಿಪಿ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ:

ಸಂಜೆಯ ತಾಜಾ ಸ್ನ್ಯಾಕ್ಸ್ ಮಸಾಲಾ ಚಿಕನ್ ಲೆಗ್!

ಕ್ರಿಸ್ಪಿ ಫ್ರೈಡ್ ಚಿಕನ್ ಲೆಗ್ ರೆಸಿಪಿ:

ಕ್ರಿಸ್ಪಿ ಫ್ರೈಡ್ ಚಿಕನ್ ಲೆಗ್ ರೆಸಿಪಿ:

ಕ್ರಿಸ್ಪಿ ಫ್ರೈಡ್ ಚಿಕನ್ ಲೆಗ್ ರೆಸಿಪಿ ಪ್ರಸಿದ್ಧವಾದ ಡಿಶ್ ಆಗಿದೆ. ಆದರೆ ಇದನ್ನು ಇನ್ನಷ್ಟು ಸುಲಭ ವಿಧಾನದಲ್ಲಿ ನಿಮಗೆ ಈ ಲೇಖನದಲ್ಲಿ ನಾವು ಉಣಬಡಿಸಲಿದ್ದೇವೆ. ಕ್ರಿಸ್ಪಿ ಫ್ರೈಡ್ ಚಿಕನ್ ಲೆಗ್ ರೆಸಿಪಿ ಮಾಡುವ ವಿಧಾನಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ:

ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್-ರಂಜಾನ್ ಸ್ಪೆಷಲ್

ಕೂರ್ಗಿ ಫ್ರೈಡ್ ಚಿಕನ್

ಕೂರ್ಗಿ ಫ್ರೈಡ್ ಚಿಕನ್

ಕೂರ್ಗಿ ಸಿಜ್ವನ್ ತನ್ನದೇ ಆದ ಪರಿಮಳವನ್ನು ತನ್ನಲ್ಲಿ ಬೆರೆಸಿಕೊಂಡಿದೆ. ಕೂರ್ಗಿ ಗರಂ ಮಸಾಲಾವನ್ನು ಬಳಸಿಕೊಂಡು ತಯಾರಿಸಲಾದ ಈ ಚಿಕನ್ ಫ್ರೈ ತಿನ್ನಲು ಬಹಳ ರುಚಿಯಾಗಿದೆ. ದಾಲ್ ಮತ್ತು ಅನ್ನದೊಂದಿಗೂ ಈ ಫ್ರೈಡ್ ಚಿಕನ್ ಉತ್ತಮ ಕಾಂಬಿನೇಶನ್ ಆಗಿದೆ.

ಟೇಸ್ಟ್ ಮಾಡಿ ಕೂರ್ಗಿಗಳ ಸ್ಪೆಶಲ್ ಫ್ರೈ ಚಿಕನ್!

ಸ್ಪೈಸಿ ಚಿಕನ್ ಫ್ರೈ:

ಸ್ಪೈಸಿ ಚಿಕನ್ ಫ್ರೈ:

ಸ್ಪೈಸಿ ಚಿಕನ್ ಫ್ರೈ ಒಂದು ಸಾಮಾನ್ಯವಾದ ರೆಸಿಪಿಯಾಗಿದೆ. ಈ ರೆಸಿಪಿ ವೀಡಿಯೋವನ್ನು ಒಳಗೊಂಡಿದ್ದು ನಿಮ್ಮ ತಯಾರಿ ವಿಧಾನವನ್ನು ಇನ್ನಷ್ಟು ಸುಲಭಗೊಳಿಸಲಿದೆ.

ರುಚಿ ರುಚಿಯಾದ ಸ್ಪೈಸಿ ಚಿಕನ್ ಫ್ರೈ ರೆಸಿಪಿ!

ಚಿಕನ್ ಪೆಪ್ಪರ್ ಫ್ರೈ:

ಚಿಕನ್ ಪೆಪ್ಪರ್ ಫ್ರೈ:

ಇದೊಂದು ಖಾರವಾಗಿರುವ ಭಾರತೀಯ ರೆಸಿಪಿಯಾಗಿದ್ದು ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇದೊಂದು ಸರಳವಾಗಿರುವ ಮತ್ತು ಕೆಲವು ನಿಮಿಷಗಳಲ್ಲಿ ತಯಾರಿಸಬಹುದಾದ ಖಾದ್ಯವಾಗಿದೆ.

ರುಚಿರುಚಿಯಾದ ಖಾರ ಚಿಕನ್ ಪೆಪ್ಪರ್ ಫ್ರೈ

ಮಸಾಲಾ ಫ್ರೈ ಚಿಕನ್:

ಮಸಾಲಾ ಫ್ರೈ ಚಿಕನ್:

ರಸ್ತೆ ಬದಿಗಳಲ್ಲಿ ತುಂಬಾ ಹೆಸರುವಾಸಿಯಾಗಿರುವ ಈ ಚಿಕನ್ ಖಾದ್ಯವನ್ನು ನಿಮ್ಮ ಅಡುಗೆಮನೆಯಲ್ಲೂ ನಿಮಗೆ ಸುಲಭವಾಗಿ ತಯಾರಿಸಬಹುದು.

ಚಿಕನ್ ಪಕೋಡಾ:

ಚಿಕನ್ ಪಕೋಡಾ:

ಚಿಕನ್ ಮತ್ತು ನೀರುಳ್ಳಿ ಬೆರೆಸಿ ತಯಾರಿಸಬಹುದಾದ ರುಚಿ ರುಚಿ ಚಿಕನ್ ಪಕೋಡಾ ಕೂಡ ನಮ್ಮಲ್ಲಿ ಫೇಮಸ್. ಹಸಿಮೆಣಸು ವಿಶೇಷ ಕಬಾಬ್ ಮಸಾಲಾವನ್ನು ಬಳಸಿ ತಯಾರಿಸಬಹುದಾದ ಈ ಚಿಕನ್ ಪಕೋಡಾ ರೆಸಿಪಿ ನಿಮ್ಮ ಸ್ವಾದವನ್ನು ಇಮ್ಮಡಿಗೊಳಿಸುತ್ತದೆ.

ಸಂಜೆಯ ಸ್ನ್ಯಾಕ್ಸ್ ರೆಸಿಪಿ: ಚಿಕನ್ ಈರುಳ್ಳಿ ಪಕೋಡಾ!

ಕರಾಹಿ ಚಿಕನ್:

ಕರಾಹಿ ಚಿಕನ್:

ಪಾಕಿಸ್ತಾನಿ ಶೈಲಿಯಲ್ಲಿ ನೀವು ಚಿಕನ್ ಟೇಸ್ಟ್ ಮಾಡಬೇಕೆಂದಿದ್ದಲ್ಲಿ ಕರಾಹಿ ಚಿಕನ್ ನಿಮಗೆ ಒಳ್ಳೆಯ ರೆಸಿಪಿಯಾಗಿದೆ. ಇದು ಪಾಕಿಸ್ತಾನಿ ಚಿಕನ್ ಶೈಲಿಯಲ್ಲೇ ಅತಿ ಸರಳವಾದ ಖಾದ್ಯವಾಗಿದೆ.

ಚಿಕನ್ 65

ಚಿಕನ್ 65

ಚಿಕನ್ 65 ಅನ್ನು ಪ್ರಪ್ರಥಮ ಬಾರಿಗೆ 1965 ರಲ್ಲಿ ಚೆನ್ನೈನಲ್ಲಿ ಪ್ರಸ್ತುತಪಡಿಸಲಾಯಿತು. ರೆಸ್ಟೋರೆಂಟ್‌ಗಳಲ್ಲಿ ಇದು 65 ನೇ ಐಟಂ ಆಗಿದೆ.

ರುಚಿಕರವಾದ ಚಿಕನ್ 65 ರೆಸಿಪಿ

ಬ್ರಾಂಡಿ ಚಿಕನ್:

ಬ್ರಾಂಡಿ ಚಿಕನ್:

ನಿಮಗೆ ತಯಾರಿಸಲು ಅತಿ ಸುಲಭವಾಗಿರುವ ಚಿಕನ್ ಖಾದ್ಯವಾಗಿದೆ ಬ್ರಾಂಡಿ ಚಿಕನ್. ನಿಮಗೆ ಇದನ್ನು ತಯಾರಿಸಲು ಬೇಕಾಗಿರುವುದು ಬ್ರಾಂಡಿ ಮತ್ತು ಚಿಕನ್ ಆಗಿದೆ.

English summary

10 Fried Chicken Recipes

Indians are known for eating hot and spicy food irrespective of the season. No matter how hot it is outside, the thought of biting into spicy chicken fry always tempts us. So, if you are bored of making same old chicken recipes every weekend, then try these 10 fried chicken recipe which is sure to please everyone at home.
X
Desktop Bottom Promotion