For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಸ್ಪೆಷಲ್ ಫ್ರೂಟ್ ಸಲಾಡ್ ರೆಸಿಪಿ!

By Vani Nayak
|

ನೀವು ತೆಳ್ಳಗಾಗಬೇಕೆಂದು ದೃಢವಾಗಿ ನಿರ್ಧರಿಸಿದ್ದೀರ? ಹಾಗಿದ್ದಲ್ಲಿ ಆರೋಗ್ಯಕರವೂ ಹಾಗೂ ಕೊಬ್ಬುರಹಿತವಾದ ಪಥ್ಯೆಯನ್ನು ಮಾಡಬೇಕು. ಫ್ರೂಟ್ ಸಲಾಡ್ ಇದಕ್ಕೆ ಹೆಚ್ಚು ಸೂಕ್ತ. ಅದರಲ್ಲೂ ಒಂದೇ ಬಗೆಯ ಹಣ್ಣಿನ ಸೇವನೆ ನಿಮಗೆ ಬೇಸರ ತಂದಲ್ಲಿ ಒಂದು ಬೌಲ್ ತುಂಬಾ ಫ್ರೂಟ್ ಸಲಾಡ್ ತೆಗೆದುಕೊಳ್ಳುವುದು ಒಳ್ಳೆಯದು.

Fruit Salad Honey Chilli Recipe

ಈ ರೆಸಿಪಿಯನ್ನು ಮತ್ತಷ್ಟು ರುಚಿಕರಗೊಳಿಸಲು, ಈ ವಿಭಿನ್ನ ಬಗೆಯ ರೆಸಿಪಿಗೆ ಒಂದು ಟ್ವಿಸ್ಟ್ ಕೊಡಲಾಗಿದೆ. ಯಾವುದಿದು ಟ್ವಿಸ್ಟ್? ಎಂದು ನೀವು ಕೇಳಬಹುದು. ಆ ಟ್ವಿಸ್ಟ್ ಏನೆಂದರೆ, ಫ್ರೂಟ್ ಸಲಾಡ್‌ನ ಅಲಂಕಾರಕ್ಕಾಗಿ ಬಳಸುವ ಜೇನು ಮತ್ತು ಚಿಲ್ಲಿ. ಈಗ ಮತ್ತಷ್ಟು ರುಚಿಯೆನಿಸುತ್ತದೆ. ಇದಕ್ಕಾಗಿ ನೀವು ರೆಸಿಪಿಯ ಬಗ್ಗೆ ಕೊಟ್ಟಿರವ ವಿವರಣೆಯನ್ನು ಪೂರ್ಣವಾಗಿ ಓದಿ.... ಉಪವಾಸಕ್ಕೆ ಹೌ ಅಬೌಟ್ ಮಿಕ್ಸ್ಡ್ ಫ್ರೂಟ್ ಸಲಾಡ್!

ಪ್ರಮಾಣ - ಒಂದು ಬೌಲ್
ಸಿದ್ಧತಾ ಸಮಯ - 20 ನಿಮಿಷಗಳು

ಸಾಮಗ್ರಿಗಳು:
1. ಅನಾನಸ್ ಹಣ್ಣು- 1/2 (ಸಿಪ್ಪೆ ತೆಗೆದು ಹೆಚ್ಚಿರುವುದು)
2. ಕಿತ್ತಳೆ - 1 (ಮೀಡಿಯಮ್ ಗಾತ್ರದ್ದು)
3. ಮರಸೇಬು - (ಮೀಡಿಯಮ್ ಗಾತ್ರದ್ದು)
4. ವಾಲ್ ನಟ್ - 1/4 ಕಪ್ ಪುಡಿ ಮಾಡಿದ್ದು
5. ಲೊಲೊ ರೋಸ್ಸೊ ಲೆಟ್ಯೂಸ್ ಎಲೆಗಳು - 4
ಜೇನು ತುಪ್ಪ ಮತ್ತು ಚಿಲ್ಲಿ ಅಲಂಕಾರಕ್ಕಾಗಿ:
6. ಜೇನು - 2 ಟೇಬಲ್ ಚಮಚ


7. ನಿಂಬೆ ಜೆಸ್ಟ್ - 1 ಟೀ ಚಮಚ
8. ಕೆಂಪು ಮೆಣಸಿನಕಾಯಿ - 1
9. ನಿಂಬೆ ರಸ - 1 ಟೇಬಲ್ ಚಮಚ
10. ಬ್ಲಾಕ್ ಪೆಪ್ಪರೆ ಕಾರ್ನ್ಸ್ ರುಚಿಗೆ ತಕ್ಕಷ್ಟು
11. ರುಚಿಗೆ ತಕ್ಕಷ್ಟು ಉಪ್ಪು ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿ

ವಿಧಾನ:
1.ಒಂದು ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಂಡು ನಿಮ್ಮ ಕೈಗಳ ಮಧ್ಯೆ ಇಟ್ಟು ಉಜ್ಜಿರಿ. ಇದು ಒಳಗಿರುವ ಬೀಜಗಳನ್ನು ಸಡಿಲಗೊಳಿಸುತ್ತದೆ.
2. ಮೆಣಸಿನಕಾಯಿಯ ಒಂದು ಬದಿಯನ್ನು ಕತ್ತರಿಸಿ ಒಳಗಿನ ಬೀಜಗಳನ್ನು ತೆಗೆದು ಅದರ ಖಾರವನ್ನು ಕಡಿಮೆ ಮಾಡಿ.
3. ಅದನ್ನು ಸಣ್ಣಗೆ ಕತ್ತರಿಸಿ ಒಂದು ಬೌಲ್ ಗೆ ಹಾಕಿ ಜೇನುತುಪ್ಪವನ್ನು ಹಾಕಿರಿ.


4. ಅದಕ್ಕೆ ನಿಂಬೆ ಜೆಸ್ಟ್ ಹಾಗು ನಿಂಬೆ ರಸವನ್ನು ಹಾಕಿ, ಉಪ್ಪನ್ನು ಹಾಕಿ ಹಾಗು ಪುಡಿ ಮಾಡಿದ ಕರಿಮೆಣಸನ್ನು ಹಾಕಿರಿ.
5. ಈಗ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.
6. ಒಂದು ಪ್ಯಾನ್ ಅನ್ನು ಬಿಸಿ ಮಾಡಿ ವಾಲ್ ನಟ್ಸ್ ಅನ್ನು ಹುರಿಯಿರಿ. ನಂತರ ಒಲೆಯನ್ನು ಆರಿಸಿ.
7. ಈಗ, ಅನಾನಸ್ ಹಣ್ಣು, ಮರಸೇಬು, ಸೇಬು ಮತ್ತು ಕಿತ್ತಳೆಯನ್ನು ನಿಮಗೆ ಬೇಕಾದ ಹಾಗೆ ಸಣ್ಣದಾಗಿ ಕತ್ತರಿಸಿ.
8. ಎಲ್ಲಾ ಹಣ್ಣುಗಳನ್ನು ಒಂದು ದೊಡ್ಡ ಬೌಲ್ ಗೆ ಹಾಕಿ, ಮೊದಲೇ ತಯಾರಿಸಿದ ಡ್ರೆಸ್ಸಿಂಗ್ ಅನ್ನು ಹಾಕಿರಿ. ಎಲ್ಲವನ್ನೂ ಚೆನ್ನಾಗಿ ಟಾಸ್ ಮಾಡಿರಿ.
9. ಒಂದು ಸರ್ವಿಂಗ್ ಪ್ಲೇಟ್ ಅನ್ನು ತೆಗೆದುಕೊಂಡು ಲೆಟ್ಯೂಸ್ ಎಲೆಗಳನ್ನು ಚೆನ್ನಾಗಿ ಜೋಡಿಸಿ. ಅದರ ಮೇಲೆ ಹಣ್ಣುಗಳನ್ನು ಇಟ್ಟು ಹುರಿದ ವಾಲ್ ನಟ್ಗಳಿಂದ ಅಲಂಕರಿಸಿ.
10. ಈಗ ನಿಮ್ಮ ರುಚಿಕರವಾದ ಫ್ರೂಟ್ ಸಲಾಡ್ ಹನಿ ಹಾಗು ಚಿಲ್ಲಿ ಡ್ರೆಸ್ಸಿಂಗ್ ನೊಂದಿಗೆ ಸರ್ವ್ ಮಾಡಲು ಸಿದ್ಧ.
English summary

Awesome Fruit Salad Honey Chilli Recipe

Here is a fruit salad recipe with a twist that is not only yummy to taste but is also very healthy. Read to know more on how to bring in a twist, which is as mentioned in the recipe.
Story first published: Monday, November 14, 2016, 19:59 [IST]
X
Desktop Bottom Promotion