For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಪನ್ನೀರ್ ಮಖಾನಿ ರೆಸಿಪಿ

|

ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಮನೆಯವರೆಲ್ಲಾ ಸೇರಿ ವಿಹಾರದ ಬಳಿಕ ಉತ್ತಮ ಹೋಟೆಲಿನಲ್ಲಿ ಊಟ ಮಾಡಿ ತೃಪ್ತಿಯಿಂದ ಮನೆಗೆ ಹಿಂದಿರುಗುವುದು ಒಂದು ಸಂತೋಷ ಕೊಡುವ ಸಂಗತಿ. ಅದರಲ್ಲೂ ಹೋಟೆಲಿನ ಊಟದ ರುಚಿಯನ್ನು ಹೊಗಳಿದ್ದೇ ಹೊಗಳಿದ್ದು. ವಿಶೇಷವೆಂದರೆ ಹೆಚ್ಚಿನ ಹೋಟೆಲುಗಳಲ್ಲಿ ಅತ್ಯಂತ ಹೆಚ್ಚು ಕೋರಲಾಗುವ ಖಾದ್ಯವೆಂದರೆ ಆಲು ಗೋಬಿ ಮತ್ತು ಪನ್ನೀರ್ ಮಖಾನಿ ಅದರಲ್ಲೂ ಸಸ್ಯಾಹಾರಿಗಳು ಪನ್ನೀರ್ ಖಾದ್ಯಗಳಿಗೆ ಹೆಚ್ಚು ಒಲವು ತೋರುತ್ತಾರೆ.

'ಯಾವಾಗಲೂ ಪನ್ನೀರ್ ಮಖಾನಿಯನ್ನೇ ಏಕೆ ಕೋರುತ್ತೀರಿ, ಬೇರೆ ಖಾದ್ಯ ಇಷ್ಟವಿಲ್ಲವೇ?' ಎಂದು ಕೇಳುವ ಪತ್ನಿಯರಿಗೆ ಪತಿಯರು ನೀಡುವ ಸಿದ್ಧ ಉತ್ತರ 'ಮನೆಯಲ್ಲಿ ಮಾಡಿದ ಪನ್ನೀರ್ ಮಖಾನಿಯಲ್ಲಿ ಇಲ್ಲಿನ ರುಚಿ ಬರುವುದಿಲ್ಲ!'. ಇದು ನಿಮಲ್ಲೊಂದು ಛಲ ಹುಟ್ಟಿಸಿದ್ದು ಮನೆಯಲ್ಲಿ ಪನ್ನೀರ್ ಮಖಾನಿ ಮಾಡಿದ ಪ್ರಯತ್ನ ವಿಫಲವಾಯಿತೇ? ಈಗ ನಿರಾತಂಕರಾಗಿರಿ. ಇಲ್ಲಿದೆ, ಹೋಟೆಲಿನ ಪನ್ನೀರ್ ಮಖಾನಿಯನ್ನೂ ಮೀರಿಸುವ ರುಚಿಯುಳ್ಳ ಖಾದ್ಯ ಮನೆಯಲ್ಲಿಯೇ ತಯಾರಿಸುವ ವಿಧಾನ. ಪನ್ನೀರ್ ಮಖಾನಿ-ಉತ್ತರ ಭಾರತದ ಶೈಲಿಯ ಅಡುಗೆ

Restaurant Style: Paneer Makhani Recipe

ಪನ್ನೀರ್ ಮಖಾನಿಯಲ್ಲಿ ಒಂದು ಬಾರಿ ಬಡಿಸಿದಾಗ ಇನ್ನೂರು ಕ್ಯಾಲೋರಿಯಷ್ಟು ಹೆಚ್ಚಿನ ಶಕ್ತಿ ದೊರಕುತ್ತದೆ. ವಿವಿಧ ಭಾರತೀಯ ಸಾಂಬಾರ ಪದಾರ್ಥಗಳನ್ನು ಸೇರಿಸಿರುವುದರಿಂದ ಆ ಎಲ್ಲಾ ಸಾಮಾಗ್ರಿಗಳ ಒಳ್ಳೆಯ ಗುಣಗಳು ಈ ಆಹಾರದ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಇನ್ನು ತಡವೇಕೆ? ಅತ್ಯಂತ ಪೌಷ್ಟಿಕವಾದ ಈ ಖಾದ್ಯವನ್ನು ತಯಾರಿಸಲು ಸಿದ್ಧರಾಗಿ. ಇದರಲ್ಲಿ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ತಿಂಗಳಿಗೆ ಒಂದೆರಡು ಬಾರಿ ಸೇವಿಸಿರಿ. ಹೆಚ್ಚಿನ ಸೇವನೆ ತೂಕ ಹೆಚ್ಚಿಸಲು ಕಾರಣವಾಗಬಹುದು.

ಪ್ರಮಾಣ: ಸುಮಾರು ಮೂವರಿಗೆ ಸಾಕಾಗುವಷ್ಟು.
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತೆರಡು ನಿಮಿಷಗಳು

ಬೇಕಾಗುವ ಸಾಮಾಗ್ರಿಗಳು:
*ಪನ್ನೀರ್ -250ಗ್ರಾಂ(ಚೌಕಾಕಾರದಲ್ಲಿ ಕತ್ತರಿಸಿದವು)
*ಈರುಳ್ಳಿ (ಮಧ್ಯಮ ಗಾತ್ರ) - 2 (ಮಿಕ್ಸಿಯಲ್ಲಿ ಕಡೆದು ನುಣುಪಾಗಿಸಿದ್ದು)


*ಮೊಸರು - 2 ದೊಡ್ಡ ಚಮಚ
*ಬೆಣ್ಣೆ (ಉಪ್ಪುರಹಿತ)- 2 ದೊಡ್ಡ ಚಮಚ
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1 ದೊಡ್ಡ ಚಮಚ
*ಉಪ್ಪು-ರುಚಿಗೆ ತಕ್ಕಷ್ಟು
*ಕೆಂಪು ಮೆಣಸಿನ ಪುಡಿ (ಕಾಶ್ಮೀರಿ ಚಿಲ್ಲಿ ಆದರೆ ಉತ್ತಮ) - 1 ಚಿಕ್ಕ ಚಮಚ
*ಕೊತ್ತಂಬರಿ ಪುಡಿ- 1 ಚಿಕ್ಕ ಚಮಚ
*ಜೀರಿಗೆ ಪುಡಿ - 1 ಚಿಕ್ಕ ಚಮಚ
*ಗರಂ ಮಸಾಲಾ ಪುಡಿ- ½ ಚಿಕ್ಕ ಚಮಚ
*ಅರಿಶಿನ ಪುಡಿ - ½ ಚಿಕ್ಕ ಚಮಚ
*ಟೊಮೇಟೊ ಪ್ಯೂರಿ - 1 ಬಟ್ಟಲು (ಸಿದ್ಧ ಪ್ಯಾಕೆಟ್ ಕೂಡಾ ಉಪಯೋಗಿಸಬಹುದು)
*ಮೆಂತೆ ಸೊಪ್ಪು- 1 ಚಿಕ್ಕ ಚಮಚ
*ತಾಜಾ ಕ್ರೀಂ - 1 ಚಿಕ್ಕ ಚಮಚ
*ನೀರು - ½ ಕಪ್
*ಗೋಡಂಬಿ - ½ ಬಟ್ಟಲು (ಮಿಕ್ಸಿಯಲ್ಲಿ ನೀರಿನೊಂದಿಗೆ ಕಡೆದದ್ದು)
*ಕಡೆಯಲ್ಲಿ ಸಿಂಗರಿಸಲು ಕೊತ್ತಂಬರಿ ಸೊಪ್ಪು - ಒಂದು ಕಟ್ಟು

ಅಡುಗೆಯ ವಿಧಾನ:
*ಒಂದು ದಪ್ಪ ತಳದ ಬಾಣಲೆಯನ್ನು ಮಧ್ಯಮ ಗಾತ್ರದ ಉರಿಯ ಮೇಲಿರಿಸಿ ಬಿಸಿಯಾಗಲು ಬಿಡಿ. ಸ್ವಲ್ಪ ಬಿಸಿಯಾದ ಬಳಿಕ ನಡುವಿನಲ್ಲಿ ಬೆಣ್ಣೆ ಸುರಿದು ಪೂರ್ತಿಯಾಗಿ ಕರಗಲು ಬಿಡಿ. ಇದಕ್ಕೆ ಈರುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಸ್ವಲ್ಪ ಕಂದು ಬಣ್ಣ ಬರುತ್ತಿದ್ದಂತೆಯೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುವಿರಿ. ಬಳಿಕ ಉಪ್ಪು ಹಾಕಿ ಈರುಳ್ಳಿಯಿಂದ ಎಣ್ಣೆ ಹೊರಬರುವವರೆಗೆ ತಿರುವುತ್ತಾ ಇರಿ.
*ತದನಂತರ ಮೆಣಸಿನ ಪುಡಿ, ಕೊತ್ತೊಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ ಮತ್ತು ಅರಿಶಿನ ಪುಡಿಗಳನ್ನು ಹಾಕಿ ತಿರುವುದನ್ನು ಮುಂದುವರೆಸಿ.
*ಇನ್ನೂ ಎಲ್ಲಾ ಮಸಾಲೆಗಳು ಮಿಶ್ರಣವಾದ ಬಳಿಕ ನೀರು ಸುರಿದು ತಿರುವಿರಿ. ನೀರು ಕುದಿದು ಗುಳ್ಳೆಗಳು ಮೇಲೆ ಬಂದ ಬಳಿಕ ಟೊಮೇಟೊ ಪ್ಯೂರಿ, ಗೋಡಂಬಿ ಪೇಸ್ಟ್ ಸೇರಿಸಿ ತಿರುವಿ ಮಿಶ್ರಣ ಮಾಡಿ. ಈಗ ಬಾಣಲೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಆರು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಬೇಯಲು ಬಿಡಿ. ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ತಿರುವಿ. ಈಗ ಮೊಸರು ಹಾಕಿ ತಿರುವಿ.


*ಒಂದು ವೇಳೆ ನೀವು ಇಚ್ಛಿಸಿದರೆ ನಿಮ್ಮ ಆಯ್ಕೆಯ ಆಹಾರದ ಬಣ್ಣವನ್ನೂ ಸೇರಿಸಬಹುದು. ಈಗ ಮೆಂತೆ, ಕ್ರೀಂ ಹಾಕಿ ತಿರುವಿರಿ. ಸ್ವಲ್ಪ ನೀರು ಸೇರಿಸಿ ನಿಮಗೆ ಅಗತ್ಯವೆನಿಸಿದ ಹದಕ್ಕೆ ತನ್ನಿರಿ. ಇದು ತುಂಬಾ ನೀರು ನೀರಾಗಿಯೂ ಇರಬಾರದು, ಜೇನಿನಷ್ಟು ದಪ್ಪನಾಗಿಯೂ ಇರಬಾರದು ಅಷ್ಟು ಮಾತ್ರ ನೀರು ಸೇರಿಸಿ. ಈಗ ಪನ್ನೀರ್ ಸೇರಿಸಿ ಚಪ್ಪಟೆಯಾದ ದೋಸೆ ಮಗುಚುವ ಚಮಚ ಉಪಯೋಗಿಸಿ ಅಡ್ಡಡ್ಡವಾಗಿ ಪನ್ನೀರ್

ತುಂಡಾಗದಂತೆ ಎಚ್ಚರವಹಿಸಿ ತಿರುವಿ
*ಸ್ವಲ್ಪ ಹೊತ್ತಿನ ಬಳಿಕ ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಚಪಾತಿ, ನಾನ್ ಮತ್ತು ರೋಟಿಗಳೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ. ಇದನ್ನು ನಿಮ್ಮ ಮನೆಯವರಿಗೆ ಬಡಿಸುವ ಮೊದಲೇ ಮನೆಯಲ್ಲಿ ಮಾಡಿದ್ದು ಎಂದು ಹೇಳಬೇಡಿ. ತುಂಬಾ ಚೆನ್ನಾಗಿದೆ, ಯಾವ ಹೋಟೆಲಿನಿಂದ ತರಿಸಿದ್ದು ಎಂದು ಕೇಳಿದ ಬಳಿಕವೇ ಗುಟ್ಟು ರಟ್ಟು ಮಾಡಿ.

ಇತರ ವಿವರಗಳು
ಪನ್ನೀರ್ ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಕಾಟೇಜ್ ಚೀಸ್ ಸಹಾ ಉಪಯೋಗಿಸಿ ಈ ಖಾದ್ಯ ತಯಾರಿಸಬಹುದು. ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವುದರಿಂದ ಮಕ್ಕಳ ಮೂಳೆಗಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಹಲ್ಲುಗಳೂ ದೃಢಗೊಳ್ಳುತ್ತವೆ. ಯಾವುದೇ ಅಡ್ಡಪರಿಣಾಮಗಳಿರದಿರುವುದರಿಂದ ಹಿರಿಯರೂ, ವೃದ್ದರೂ ಸೇವಿಸಬಹುದು.

ವಹಿಸಬೇಕಾದ ಎಚ್ಚರಿಕೆ
* ಮಸಾಲೆ ಪುಡಿಗಳನ್ನೆಲ್ಲಾ ಸೇರಿಸಿದ ಬಳಿಕ ಚಿಕ್ಕ ಉರಿಯಲ್ಲಿ ಪೂರ್ಣವಾಗಿ ಬೇಯುವವರೆಗೆ ನಿಧಾನಕ್ಕೆ ತಿರುವುತ್ತಾ ಇರಿ. ಒಂದು ವೇಳೆ ಹೆಚ್ಚು ಬೆಂದರೆ ಮಸಾಲೆ ಸುಟ್ಟು ರುಚಿಯಲ್ಲಿ ವ್ಯತ್ಯಾಸವಾಗುತ್ತದೆ.
* ಟೊಮೇಟೊ ಪ್ಯೂರಿ ಸಿಗದೇ ಇದ್ದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಮೊದಲು ಬೀಜಗಳನ್ನು ಮತ್ತು ಸಿಪ್ಪೆಗಳನ್ನು ನಿವಾರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಉಪಯೋಗಿಸಿ.
* ಹುರಿದ ಗೋಡಂಬಿ ಅಥವಾ ಬಾದಾಮಿಯನ್ನು ಚಿಕ್ಕದಾಗಿ ಹೆಚ್ಚಿ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
* ಸ್ವಲ್ಪ ಹುಳಿಯಾದ ರುಚಿಗಾಗಿ ಸೀಸನಿಂಗ್ ಪೌಡರ್, ಕಸೂರಿ ಮೇಥಿ ಅನ್ನು ಕಟ್ಟಕಡೆಗೆ ಸ್ವಲ್ಪ ಪ್ರಮಾಣದಲ್ಲಿ ಸೇರಿಸಬಹುದು.

English summary

Restaurant Style: Paneer Makhani Recipe

Paneer Makhani is one of the yummiest treats you can lay on your dining table this afternoon for lunch. If you want to prepare this yummy dish just like the restaurant style, then here is the recipe for you to take a look at. Here is how you make this yummy paneer makhani restaurant style recipe.
Story first published: Monday, February 16, 2015, 11:34 [IST]
X
Desktop Bottom Promotion