For Quick Alerts
ALLOW NOTIFICATIONS  
For Daily Alerts

ಅಸದಳ ರುಚಿ ನೀಡುವ ಗೋಬಿ ಬಟರ್ ಮಸಾಲ ಗ್ರೇವಿ

|

ನಾವು ನಿಮಗಾಗಿ ಇಂದು ಒಂದು ವಿಶೇಷವಾದ ಅಡುಗೆಯನ್ನು ಮಾಡುವುದನ್ನು ತಿಳಿಸಿಕೊಡುತ್ತೇವೆ. ಗೋಬಿಯನ್ನು ಇಷ್ಟಪಡುವವರಿಗಾಗಿ ಈ ಸುಲಭವಾದ ರೆಸಿಪಿ ಖಂಡಿತವಾಗಿಯೂ ಇಷ್ಟವಾಗಲಿದೆ. ಇದನ್ನು ರುಚಿ ನೋಡಿದರೆ ಮತ್ತಷ್ಟು ಬೇಕು ಎಂದು ನೀವು ಖಂಡಿತ ಕೇಳುತ್ತೀರಿ. ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಗೋಬಿ ಬಟರ್ ಮಸಾಲ ರೆಸಿಪಿಯನ್ನು ಹಂಚಿಕೊಳ್ಳುತ್ತಿದೆ. ಈ ಗೋಬಿ ರೆಸಿಪಿಯ ಹೈಲೈಟ್ ಎಂದರೆ ಇದನ್ನು ಅನ್ನ, ಪಲಾವ್ ಮತ್ತು ರೋಟಿಯ ಜೊತೆಗು ಸಹ ಸೇವಿಸಬಹುದು.

ಈ ಸರಳ ಗೋಬಿ ಬಟರ್ ಮಸಾಲದ ರುಚಿಯು ಅನನ್ಯವಾದುದು. ಇದಕ್ಕೆ ಸೇರಿಸುವ ಬೆಣ್ಣೆಯು ಈ ಖಾದ್ಯದ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ಜೊತೆಗೆ ಇದಕ್ಕೆ ಹಾಕುವ ಮಸಾಲೆಯು ಸಹ ನಿಮ್ಮ ಬಾಯಿಯಲ್ಲಿ ನೀರೂರಿಸುತ್ತದೆ. ಈ ಗೋಬಿ ಮಸಾಲೆಯ ಮತ್ತೊಂದು ಹೈಲೈಟ್ ಎಂದರೆ ಇದು ಒಂದು ಟೊಮೇಟೊ ಗ್ರೇವಿಯಾಗಿರುತ್ತದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಟೊಮೇಟೊವನ್ನು ಆರಿಸಿಕೊಳ್ಳಲು ಮರೆಯಬೇಡಿ.

Delicious Gobi Butter Masala Gravy

ಹಣ್ಣಾಗದ ಟೊಮೇಟೊವನ್ನು ಆರಿಸಿಕೊಂಡರೆ ನೀವು ಇಡೀ ಖಾದ್ಯದ ರುಚಿಯನ್ನು ಹಾಳು ಮಾಡಿ ಬಿಡುತ್ತೀರಿ. ಮತ್ತೊಂದು ವಿಚಾರವೆಂದರೆ ಈ ಖಾದ್ಯಕ್ಕೆ ನೀವು ಗೋಬಿಯನ್ನು ಬಳಸುವುದರಿಂದ ಅದು ಗ್ರೇವಿಯ ಬಹುಪಾಲನ್ನು ಹೀರಿಕೊಳ್ಳುತ್ತದೆ ಎಂಬುದನ್ನು ಮರೆಯಬೇಡಿ. ಬನ್ನಿ ಗೋಬಿ ಬಟರ್ ಮಸಾಲ ಹೇಗೆ ತಯಾರಿಸುವುದು ಎಂಬುದನ್ನು ಒಮ್ಮೆ ತಿಳಿದುಕೊಂಡು ಬರೋಣ.

ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 15 ನಿಮಿಷಗಳು ಮನೆಯಲ್ಲಿಯೆ ಆನಂದಿಸಿ ಗೋಬಿ ಮಂಚೂರಿ ರುಚಿ

ನಿಮಗೆ ಅಗತ್ಯವಾದ ಪದಾರ್ಥಗಳು
*ಬೆಣ್ಣೆ - 1 ಕಪ್ ( ಕರಗಿದಂತಹುದು)
*ಮಸಾಲೆ - ಹಿಡಿಯಷ್ಟು (ಲವಂಗ, ಚಕ್ಕೆ, ಏಲಕ್ಕಿ, ಕರಿಬೇವು- ಇವುಗಳನ್ನೆಲ್ಲ ಒಂದು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿಡಿ)
*ಈರುಳ್ಳಿ - 2 ( ಕತ್ತರಿಸಿದಂತಹುದು)
*ಗೋಡಂಬಿ- 1 ಬಟ್ಟಲು
*ಶುಂಠಿ ಬೆಳ್ಳುಳ್ಳಿ - 1 ಟೀ.ಚಮಚ (ಪೇಸ್ಟ್)
*ರುಚಿಗೆ ತಕ್ಕಷ್ಟು ಉಪ್ಪು
*ಹಸಿ ಮೆಣಸಿನಕಾಯಿ - 6 (ನಿಮ್ಮ ರುಚಿಗೆ ತಕ್ಕಷ್ಟು)
*ಒಣ ಕೆಂಪು ಮೆಣಸಿನಕಾಯಿ- 5 (ನಿಮ್ಮ ರುಚಿಗೆ ತಕ್ಕಷ್ಟು)


*ಟೊಮೇಟೊ - 4 (ಕತ್ತರಿಸಿದಂತಹುದು)
*ಸಕ್ಕರೆ - 1 ಟೀ.ಚಮಚ
*ಕಸ್ತೂರಿ ಮೇಥಿ - 1 ಟೀ.ಚಮಚ
*ಕಾರ್ನ್ ಫ್ಲೋರ್ - 1 ಟೀ.ಚಮಚ
*ಆಲ್ ಪರ್ಪೋಸ್ ಫ್ಲೋರ್ - 1 ಟೀ.ಚಮಚ
*ಕೊತ್ತೊಂಬರಿ ಪುಡಿ - 1 ಟೀ.ಚಮಚ
*ತಾಜಾ ಕೆನೆ- 3 ಟೀ.ಚಮಚ

ವಿಧಾನ
*ಒಂದು ಪ್ರೆಶ್ಶರ್ ಕುಕ್ಕರಿನಲ್ಲಿ ಕರಗಿಸಿದ ಬೆಣ್ಣೆಯನ್ನು ಹಾಕಿಕೊಳ್ಳಿ. ಅದು ಸ್ವಲ್ಪ ಬಿಸಿಯಾಗುವವರೆಗು ಕಾಯಿರಿ. ನಂತರ ಅದಕ್ಕೆ ಮಸ್ಲಿನ್ ಬಟ್ಟೆಯಲ್ಲಿರುವ ಮಸಾಲೆಗಳನ್ನು ಹಾಕಿ. ಈಗ ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಗೋಡಂಬಿಗಳನ್ನು ಹಾಕಿ. ಈ ಪದಾರ್ಥಗಳನ್ನು ಚೆನ್ನಾಗಿ ತಿರುವಿಕೊಡಿ. ಈರುಳ್ಳಿಯು ಹೊಂಬಣ್ಣಕ್ಕೆ ಬರುವವರೆಗೆ ಈ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ತಿರುವಿಕೊಡಿ.
*ಈಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿಕೊಡಿ. ಇದರ ಮೇಲೆ ಹಸಿ ಮೆಣಸಿನಕಾಯಿಯನ್ನು ಹಾಕಿ. ನಂತರ ಅದಕ್ಕೆ ಕೆಂಪು ಮೆಣಸಿನಕಾಯಿಯನ್ನು ಬೆರೆಸಿ ಸ್ವಲ್ಪ ಕಲೆಸಿಕೊಡಿ. ಈಗ ಇದಕ್ಕೆ ಟೊಮೇಟೊಗಳನ್ನು ಹಾಕಿ,ಕುಕ್ಕರಿನ ಮುಚ್ಚಳವನ್ನು ಮುಚ್ಚಿ. ಮೂರು ವಿಷಲ್ ಬರುವವರೆಗೆ ಇದನ್ನು ಬೇಯಿಸಿ.
*ಈ ಎಲ್ಲಾ ಪದಾರ್ಥಗಳು ಬೆಂದ ಮೇಲೆ ಆ ಪದಾರ್ಥಗಳ ರಸವನ್ನು ಶೋಧಿಸಿಕೊಳ್ಳಿ. ಉಳಿದ ಪದಾರ್ಥಗಳನ್ನು ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಇನ್ನು ಈ ಪೇಸ್ಟನ್ನು ಒಂದು ಬಾಣಲೆಗೆ ಹಾಕಿಕೊಳ್ಳಿ. ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿ. ಪೇಸ್ಟನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಇದಕ್ಕೆ ಸ್ವಲ್ಪ ಕಸ್ತೂರಿ ಮೇಥಿಯನ್ನು ಹಾಕಿ ಮತ್ತು ಚೆನ್ನಾಗಿ ಕಲೆಸಿಕೊಡಿ.


*ತದನಂತರ ಒಂದು ಪ್ಲೇಟ್ ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಕಾರ್ನ್ ಫ್ಲೋರ್, ಆಲ್ ಪರ್ಪೊಸ್ ಫ್ಲೋರ್, ಪುಡಿ ಮಾಡಿದ ಮೆಣಸು, ಕೊತ್ತೊಂಬರಿ ಪುಡಿ ಮತ್ತು ಉಪ್ಪನ್ನು ಹಾಕಿ. ಈ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟನ್ನು ಗೋಬಿಗೆ ಲೇಪಿಸಿ.
*ಇನ್ನು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಳ್ಳಿ, ಅದು ಬಿಸಿಯಾದ ಮೇಲೆ ಅದಕ್ಕೆ ಗೋಬಿಯನ್ನು ಹಾಕಿ. ಹಾಗೂ ಇದನ್ನು ಚೆನ್ನಾಗಿ ಫ್ರೈ ಮಾಡಿ.
*ಇದು ಮುಗಿದ ಮೇಲೆ ಗೋಬಿಯನ್ನು ಒಂದು ತಟ್ಟೆಯಲ್ಲಿ ತೆಗೆದುಕೊಳ್ಳಿ. ಅದೇ ಬಾಣಲೆಯಲ್ಲಿ ಉಳಿದ ಎಣ್ಣೆಯಲ್ಲಿ ರುಬ್ಬಿದ ಗ್ರೇವಿಯನ್ನು ಹಾಕಿ. ಅದರ ಮೇಲೆ ಬೆಣ್ಣೆಯನ್ನು ಹಾಕಿ. ಮೂರು ನಿಮಿಷದ ನಂತರ ಅದಕ್ಕೆ ಗೋಬಿಯ ತುಂಡುಗಳನ್ನು ಹಾಕಿ. ಮುಚ್ಚಳವನ್ನು ಬಾಣಲೆಯ ಮೇಲೆ ಮುಚ್ಚಿ. ಇದು ಮುಗಿದ ಮೇಲೆ ಇದಕ್ಕೆ ತಾಜಾ ಕೆನೆಯನ್ನು ಹಾಕಿ ಮತ್ತು ಚೆನ್ನಾಗಿ ಕಲೆಸಿಕೊಡಿ. ಇದನ್ನು ಬಿಸಿಯಾಗಿರುವಾಗಲೆ ಬಡಿಸಿ.

ಪೋಷಕಾಂಶದ ಸಲಹೆ
ಗೋಬಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಫಾಸ್ಫರಸ್ ಮತ್ತು ಪೊಟಾಶಿಯಂ ಒಳಗೊಂಡಿರುತ್ತದೆ. ನಿಮ್ಮ ಮನಸ್ಸಿನ ಒತ್ತಡವನ್ನು ನಿವಾರಿಸಲು ಗೋಬಿ ಅತ್ಯಾವಶ್ಯಕ.

ಸಲಹೆ
ಅಡುಗೆ ಮಾಡುವ ಮೊದಲು ಗೋಬಿಯನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ. ಇದನ್ನು ಬಿಸಿ ನೀರಿನಲ್ಲಿ ನೆನೆಸಿ. ಜೊತೆಗೆ ಆ ನೀರಿಗೆ ಅರಿಶಿನ ಹಾಕಿರಿ, ಇದರಿಂದ ಗೋಬಿಯಲ್ಲಿರುವ ಹುಳುಗಳು ಸಾಯುತ್ತವೆ.

English summary

Delicious Gobi Butter Masala Gravy

This afternoon we have a special treat. For those who love gobi, this simple recipe will leave you wanting for more. Boldsky shares with you an easy gobi butter masala recipe. The highlight of this gobi recipe is you can eat it with rice, pulav and even roti.
Story first published: Thursday, March 5, 2015, 17:34 [IST]
X
Desktop Bottom Promotion