For Quick Alerts
ALLOW NOTIFICATIONS  
For Daily Alerts

ಬೇಯಿಸಿದ ಮಸಾಲೆ ಮೊಟ್ಟೆ ತಯಾರಿಸುವುದು ಹೇಗೆ?

|

ಡೆವಿಲ್ ಎಗ್ ಎಂದಾದರೂ ಟೇಸ್ಟ್ ಮಾಡಿದ್ದೀರಾ? ಇದನ್ನು ಕನ್ನಡದಲ್ಲಿ ಬೇಯಿಸಿದ ಮಸಾಲೆ ಮೊಟ್ಟೆ ಎಂದು ಕೂಡ ಕರೆಯಬಹುದು. ಈ ಮಸಾಲೆ ಮೊಟ್ಟೆ ಮಾಡುವಾಗ ಮೊಟ್ಟೆಯನ್ನು ಬೇಯಿಸಿ, ಅದರ ಹಳದಿ ಭಾಗವನ್ನು ತೆಗೆದು ಅದಕ್ಕೆ ಮಸಾಲೆ ಸಾಮಾಗ್ರಿಗಳನ್ನು ಹಾಕಿ ನಂತರ ಅದನ್ನು ಮೊಟ್ಟೆಯ ಬಿಳಿಗೆ ತುಂಬಲಾಗುವುದು. ಈ ರೀತಿ ಮಾಡಿದ ಮೊಟ್ಟೆಯ ರುಚಿಯನ್ನು ಒಮ್ಮೆ ಸವಿದರೆ ಮತ್ತೆ-ಮತ್ತೆ ತಿನ್ನಬೇಕೆನಿಸುವಷ್ಟು ರುಚಿಕರವಾಗಿರುತ್ತದೆ.

ಸಲಹೆ: ಮಾಂಸ ತಿನ್ನುವವರಾದರೆ ಒಣ ಮಾಂಸಸ ಚೂರುಗಳನ್ನು, ಮುಳ್ಳಿಲ್ಲದ ಮೀನಿನ ತುಂಡುಗಳನ್ನು ಮಸಾಲೆ ಮೊಟ್ಟೆಯ ಮೇಲೆಟ್ಟು ಸವಿಯಬಹುದು.

ಮಸಾಲೆ ಮೊಟ್ಟೆ ಅಥವಾ ಡೆವಿಲ್ ಮೊಟ್ಟೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

How to Make Deviled Eggs

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ 4
1/4 ಕಪ್ ಮಯೋನೈಸ್
1 ಚಮಚ ಬಿಳಿ ವಿನಿಗರ್ ಮತ್ತು ಅರ್ಧ ಚಮಚ ಸಾಸಿವೆ ಪುಡಿ
ರುಚಿಗೆ ತಕ್ಕ ಉಪ್ಪು
ಕರಿ ಮೆಣಸಿನ ಪುಡಿ

ತಯಾರಿಸುವ ವಿಧಾನ:

* ಮೊಟ್ಟೆಯನ್ನು ಬೇಯಿಸಿ, ನಂತರ ಅದನ್ನು ತಣ್ಣೀರಿನಲ್ಲಿ ಹಾಕಿ, ಆಗ ಸಿಪ್ಪೆ ಸುಲಿಯಲು ಸುಲಭವಾಗುತ್ತದೆ. ನಂತರ ಮೊಟ್ಟೆಯನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ. ಅದರ ಒಳಗಿನ ಹಳದಿ ಭಾಗವನ್ನು ತೆಗೆಯಿರಿ.

* ಈಗ ಮೊಟ್ಟೆಯ ಹಳದಿಯನ್ನು ಸ್ಪೂನ್ ನಿಂದ ಚೆನ್ನಾಗಿ ಮುಡಿ ಮಾಡಿ, ಮಯೋನೈಸ್ ಹಾಕಿ, ವಿನಿಗರ್, ಸಾಸಿವೆ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ.

* ನಂತರ ಮೊಟ್ಟೆಯ ಹಳದಿಯನ್ನು ಸ್ಪೂನ್ ನಲ್ಲಿ ತೆಗೆದು ಮೊಟ್ಟೆಯ ಬಿಳಿಗೆ ತುಂಬಿ, ನಂತರ ಕರಿ ಮೆಣಸಿನ ಪುಡಿ ಉದುರಿಸಿದರೆ ಡೆವಿಲ್ ಎಗ್ ರೆಡಿ.

ಹೀಗೆ ಮಾಡಿ ಇದಕ್ಕೆ ಬೇಕಾದರೆ ಒಣ ಮಾಂಸದ ಚೂರುಗಳು ಅಥವಾ ಫ್ರೈ ಮಾಡಿದ ಮೂಳೆಯಿಲ್ಲದ ಮೀನಿನ ಚೂರುಗಳನ್ನು ಹಳದಿಯ ಮೇಲೆಟ್ಟು ತಿನ್ನಬಹುದು.

English summary

How to Make Deviled Eggs | Variety Of Egg Recipe |ಬೇಯಿಸಿದ ಮಸಾಲೆ ಮೊಟ್ಟೆ ತಯಾರಿಸುವುದು ಹೇಗೆ? | ಅನೇಕ ಬಗೆಯ ಮೊಟ್ಟೆಯ ರೆಸಿಪಿ

The eggs can be topped with your favorite toppings including bacon, salmon and anchovies. If you gently move the eggs around while they are boiling, the yolks will end up cooked in the middle of the white, rather than to one side.
X
Desktop Bottom Promotion