For Quick Alerts
ALLOW NOTIFICATIONS  
For Daily Alerts

ದೇಹದ ತೂಕ ನಿಯಂತ್ರಿಸುವ ಡಯಟ್ ಸೂಪ್

By Manu
|

ತೂಕ ಕಳೆದುಕೊಳ್ಳಬೇಕೆಂದರೆ ಅನಿವಾರ್ಯವಾಗಿ ನಾಲಿಗೆ ಚಪಲವನ್ನು ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಆದರೆ ರುಚಿಯಾದ ಆಹಾರಗಳನ್ನು ಕಂಡಾಗ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಅತಿ ಕಷ್ಟಕರ ಎಂದು ಗೊತ್ತಾಗುತ್ತದೆ. ಆದರೆ ಇಂತಹವರಿಗಾಗಿ ಶುಭ ಸುದ್ದಿ ಬಂದಿದೆ. ಏನೆಂದರೆ ಈಗ ರುಚಿಯನ್ನೂ ಆಸ್ವಾದಿಸಿ ತೂಕವನ್ನೂ ಹೆಚ್ಚಿಸಿಕೊಳ್ಳದ ಸೂಪ್ ಒಂದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದು ಆರೋಗ್ಯಕರವೂ ರುಚಿಕರವೂ ಆಗಿರುವ ಜೊತೆಗೇ ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ. ದೇಹಕ್ಕೆ ಅತ್ಯವಶ್ಯಕ 7 ರೀತಿಯ ಸೂಪ್

ಕಾಳುಮೆಣಸು ಲಿಂಬೆ ಮತ್ತು ತರಕಾರಿ ಸೂಪ್ ಅನ್ನು ನಿಮ್ಮ ಆಯ್ಕೆಯ ತರಕಾರಿಗಳಿಗೆ ಅನುಗುಣವಾಗಿಯೇ ತಯಾರಿಸ ಬಹುದಾದುದರಿಂದ ಇದನ್ನು ಬೇಡ ಎನ್ನಲಿಕ್ಕೆ ಕಾರಣ ಉಳಿಯುವುದಿಲ್ಲ. ಹಿರಿಯರಿಗೂ ಮಕ್ಕಳಿಗೂ ಈ ಸೂಪ್ ಸೂಕ್ತವಾಗಿದ್ದು ಖಾರವನ್ನು ಇಷ್ಟಪಡುವ ಎಲ್ಲಾ ಮಕ್ಕಳಿಗೆ ಇದು ಇಷ್ಟವಾಗುತ್ತದೆ. ಅಷ್ಟೇ ಅಲ್ಲ, ಇದನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು. ಬನ್ನಿ, ಇದನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ಈಗ ನೋಡೋಣ:

Vegetable Pepper And Lemon: A Diet Soup Recipe

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಕ್ಯಾರೆಟ್ : 1 ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಈರುಳ್ಳಿ : 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ದೊಣ್ಣೆ ಮೆಣಸು : 1 ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಈರುಳ್ಳಿ ದಂಟು : 1 ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಎಲೆಕೋಸು: 1 ಕಪ್ (ಚಿಕ್ಕದಾಗಿ ತುಂಡರಿಸಿದ್ದು)
*ಬೆಳ್ಳುಳ್ಳಿ: 1/4 ಚಿಕ್ಕಚಮಚ
*ಹಸಿಶುಂಠಿ: 1/4 ಚಿಕ್ಕಚಮಚ (ಅತಿ ಚಿಕ್ಕದಾಗಿ ಹೆಚ್ಚಿದ್ದು)
*ಮೆಕ್ಕೆ ಜೋಳದ ಹಿಟ್ಟು (Corn Flour)- 3 ದೊಡ್ಡಚಮಚ
*ಕಾಳುಮೆಣಸು: 1/2 ಚಿಕ್ಕ ಚಮಚ
*ಲಿಂಬೆ ರಸ - 2 ಚಿಕ್ಕ ಚಮಚ
*ವೆಜಿಟೇಬಲ್ ಸ್ಟಾಕ್ - 2 ಕಪ್ (Vegetable Stalk)
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ
*ಉಪ್ಪು: ರುಚಿಗನುಸಾರ
*ಕೊತ್ತಂಬರಿ ಸೊಪ್ಪು: ಅಲಂಕರಿಸಲು ಅಗತ್ಯವಿದ್ದಷ್ಟು

ವಿಧಾನ
1) ಮೊದಲು ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಯಾದ ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಕೊಂಚ ಹುರಿಯಿರಿ.
2) ಬಳಿಕ ಈರುಳ್ಳಿ, ಕ್ಯಾರೆಟ್, ದೊಣ್ಣೆಮೆಣಸು, ಎಲೆಕೋಸು, ಈರುಳ್ಳಿ ದಂಟು ಸೇರಿಸಿ ಹುರಿಯಿರಿ.
3) ಎಲ್ಲವೂ ಚೆನ್ನಾಗಿ ಬೆಂದಿದೆ ಅನ್ನಿಸಿದಾಗ ವೆಜಿಟೇಬಲ್ ಸ್ಟಾಕ್ ಚೆನ್ನಾಗಿ ಬೆರೆಸಿದ ನೀರನ್ನು ಸುರಿಯಿರಿ. ಇದಕ್ಕೆ ಕಾಳುಮೆಣಸು, ಉಪ್ಪು ಸೇರಿಸಿ ನಿಧಾನವಾಗಿ ಕಲಕುತ್ತಿರಿ.
4) ಇನ್ನೊಂದು ಚಿಕ್ಕ ಬೋಗುಣಿಯಲ್ಲಿ ಮೆಕ್ಕೆ ಜೋಳದ ಹಿಟ್ಟು ಮತ್ತು ಕೊಂಚ ನೀರು ಸೇರಿಸಿ ದಪ್ಪನಾದ ಲೇಪನವಾಗುವಂತೆ ಮಾಡಿ.
5) ಈ ಲೇಪನವನ್ನು ಪಾತ್ರೆಗೆ ಹಾಕಿ ಮಿಶ್ರಣ ಮಾಡಿ.
6) ಬಳಿಕ ಲಿಂಬೆ ರಸ ಸೇರಿಸಿ ಮಧ್ಯಮ ಉರಿಯಲ್ಲಿ ಸುಮಾರು ಐದು ನಿಮಿಷಗಳವರೆಗೆ ನಿಧಾನವಾಗಿ ಕಲಕುತ್ತಿರಿ.
7) ಬಳಿಕ ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿ ಮೇಲೆ ಆವರಿಸುವಂತೆ ಮಾಡಿ.
8) ಬಿಸಿಬಿಸಿ ಇದ್ದಂತೆಯೇ ಸವಿಯಲು ನೀಡಿ, ಮೆಚ್ಚುಗೆಗಳಿಸಿ. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ಖಂಡಿತಾ ನಮಗೆ ತಿಳಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Vegetable Pepper And Lemon: A Diet Soup Recipe

If you are dieting and meanwhile finding it really hard to stay away from food, then we have good news for you.! For those who are on diet, the best option for them is to take a sip of the vegetable lemon and pepper soup. This soup not only tastes great but it is a very healthy soup.So, let's take a look at how to prepare this healthy vegetable lemon and pepper soup drink.
X
Desktop Bottom Promotion