For Quick Alerts
ALLOW NOTIFICATIONS  
For Daily Alerts

ಕಬ್ಬಿನ ಜ್ಯೂಸ್ ಅನ್ನು ಈ ಎರಡು ವಿಧಾನಗಳಲ್ಲಿ ಮಾಡಿ

|

ದೇಶಾದ್ಯಂತ ಬಹಳ ಜನಪ್ರಿಯವಾಗಿರುವ ಹೋದಲ್ಲೆಲ್ಲಾ ನಮಗೆ ದೊರೆಯುವಂತಹ ಬಾಯಾರಿದಾಗ ದಣಿವು ನೀಗುವ ಒಂದು ನೈಸರ್ಗಿಕ ಪೇಯ ಕಬ್ಬಿನ ಜ್ಯೂಸ್ ಆಗಿದೆ. ಕಬ್ಬಿನ ಜ್ಯೂಸ್ ಮಾಡುವ ಹಲವಾರು ಅಂಗಡಿಗಳು ಗಲ್ಲಿ ಗಲ್ಲಿಯಲ್ಲಿದ್ದು ಕಬ್ಬಿನಿಂದ ಹಿಂಡಿ ತೆಗೆಯುವ ನೈಸರ್ಗಿಕ ಸಿಹಿ ಬೆರೆತ ಪ್ರೋಟೀನ್ ಅಧಿಕವಾಗುಳ್ಳ ಜ್ಯೂಸ್ ಆಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತೆ ಈ ಜ್ಯೂಸ್

ಕಬ್ಬಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಿವಿಧ ರೀತಿಯ ಕಬ್ಬು ಮತ್ತು ಮಣ್ಣನ್ನು ಆಧರಿಸಿ, ಕಬ್ಬಿನಿಂದ ಹಿಂಡಿ ತೆಗೆದ ರಸ ಪ್ರತ್ಯೇಕವಾಗಿರುತ್ತದೆ. ಕಬ್ಬಿನ ಜ್ಯೂಸ್‌ನಲ್ಲಿ ಪ್ರೋಟೀನ್ ವಿಟಮಿನ್ ಮತ್ತು ಉತ್ಕರ್ಷಣ ಅಂಶಗಳಿವೆ. ನೀವು ಈ ಜ್ಯೂಸ್ ಅನ್ನು ಎರಡು ನಿಮಿಷಗಳಲ್ಲಿ ತಯಾರಿಸಬಹುದಾಗಿದೆ.

ಕಬ್ಬಿನ ಸಿಪ್ಪೆ ತೆಗೆಯಲು ಪರಿಣಿತರ ಅಗತ್ಯವಿದೆ. ಆದ್ದರಿಂದ ಸಿಪ್ಪೆ ತೆಗೆದ ಕಬ್ಬನ್ನು ಖರೀದಿಸಿ ಜ್ಯೂಸ್ ಮಾಡುವುದು ಉತ್ತಮವಾಗಿದೆ. ತಾಜಾ ಹಾಗೂ ರುಚಿ ಭರಿತ ಕಬ್ಬಿನ ಜ್ಯೂಸ್ ಅನ್ನು ನಿಮಗೆ ಮನೆಯಲ್ಲೇ ತಯಾರಿಸಬಹುದು ಅದು ಹೇಗೆ ಎಂಬುದನ್ನು ಈ ವಿಧಾನದ ಮೂಲಕ ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್

Two Ways To Make Sugarcane Juice

ಕಬ್ಬಿನ ಜ್ಯೂಸ್/ಶರ್ಬತ್
.ಕಬ್ಬು - 3-4 ಕಪ್
.ಶುಂಠಿ - 1 ಇಂಚು (ಸಿಪ್ಪೆ ತೆಗೆದದ್ದು)
.ಲಿಂಬೆ - 1/2
.ಸಕ್ಕರೆ - 2ಟೇಸ್ಪೂನ್

ಮಾಡುವ ವಿಧಾನ
. ಒಂದು ಪಾತ್ರೆಯಲ್ಲಿ, ಎಲ್ಲಾ ಸಾಮಾಗ್ರಿಗಳನ್ನು ಸ್ಪೂನ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ. 5 ನಿಮಿಷ ಬಿಟ್ಟು ನಂತರ ಪುನಃ ಮಿಶ್ರ ಮಾಡಿಕೊಳ್ಳಿ. ಸಕ್ಕರೆ ಕರಗುತ್ತದೆ.
.3-4 ಗಂಟೆಗಳಿಗಾಗಿ ರೆಫ್ರಿಜರೇಟ್ ಮಾಡಿ. ಒಮ್ಮೆ ಆದ ನಂತರ, ಪಾತ್ರೆಯನ್ನು ಹೊರತೆಗೆದು ಸ್ವಲ್ಪ ನೀರು ತೆಗೆದುಕೊಂಡು ಬ್ಲೆಂಡ್ ಮಾಡಿ.
.ಚೆನ್ನಾಗಿ ಕಡೆದ ನಂತರ ಜ್ಯೂಸ್ ಅನ್ನು ಲೋಟಕ್ಕೆ ಹಾಕಿಕೊಳ್ಳಿ ಮತ್ತು ತಕ್ಷಣವೇ ಸರ್ವ್ ಮಾಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು

ದಾಳಿಂಬೆ ಕಬ್ಬು ಜ್ಯೂಸ್:

.ಕಬ್ಬು - 2 ಕಪ್
.ದಾಳಿಂಬೆ ಬೀಜಗಳು - 1 ಕಪ್
.ಲಿಂಬೆ ರಸ - 1ಟೇಸ್ಪೂನ್

ಮಾಡುವ ವಿಧಾನ
. ಸ್ವಲ್ಪ ನೀರಿನೊಂದಿಗೆ ಕಬ್ಬನ್ನು ಕಡೆದುಕೊಳ್ಳಿ
. ದಾಳಿಂಬೆ ಬೀಜಗಳನ್ನು ಸೇರಿಸಿ ಮತ್ತು ಪುನಃ ಕಡೆದುಕೊಳ್ಳಿ.
.ಲಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
.ಒಮ್ಮೆ ಆದ ನಂತರ, ಲೋಟಗಳಿಗೆ ಐಸ್ ಕ್ಯೂಬ್ ಅನ್ನು ಹಾಕಿ ಜ್ಯೂಸ್ ಹಾಕಿಕೊಳ್ಳಿ. ತಕ್ಷಣ ಸರ್ವ್ ಮಾಡಿ.

English summary

Two Ways To Make Sugarcane Juice

Sugarcane juice is found across the country. Every day you can find a number of stalls that sell sugarcane juice. In India, sugarcane juice is one of the cheapest juices which is extracted from the tall grass.
X
Desktop Bottom Promotion