For Quick Alerts
ALLOW NOTIFICATIONS  
For Daily Alerts

3 ಪಾನೀಯಗಳ ರೆಸಿಪಿ-ರಾಮನವಮಿ ಸ್ಪೆಷಲ್

|

ಶ್ರೀವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನ ಜನ್ಮಪ್ರಿತ್ಯರ್ಥವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ‘ಚೈತ್ರ ಶುಕ್ಲ ನವಮಿ'ಯನ್ನು ರಾಮನವಮಿ ಎನ್ನುತ್ತಾರೆ. ಅನೇಕ ರಾಮಮಂದಿರಗಳಲ್ಲಿ ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ಈ ಉತ್ಸವವು ಜರಗುತ್ತದೆ. ಇದೊಂದು ಸಡಗರ ಸಂಭ್ರಮದ ಹಬ್ಬವಾಗಿದೆ.

ನವಮಿಯಂದು ಮಧ್ಯಾಹ್ನ ರಾಮಜನ್ಮದ ಹರಿಕಥೆಯಾಗುತ್ತದೆ. ಮಧ್ಯಾಹ್ನ ಕುಂಚಿಗೆ ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದಕ್ಕೆ ಹೂಗಳನ್ನು ಅರ್ಪಿಸುತ್ತಾರೆ. ನಂತರ ರಾಮ ನವಮಿ ಸ್ಪೆಷೆಲ್ ಅಡುಗೆಗಳನ್ನು ಮಾಡಬಹುದು. ಇವತ್ತು ಕೋಸಂಬರಿ ಮತ್ತು ಕರ್ಬೂಜ ಪಾನೀಯಾ , ನೀರ್ ಮೂರ್, ಪಾನಾಗ್ರಾಂ ಮುಂತಾದ ಪಾನೀಯಾಗಳನ್ನು ತಯಾರಿಸಲಾಗುವುದು.

ಇಲ್ಲಿ ನಾವು ರಾಮನವಮಿಯೆಂದು ಹೆಚ್ಚಾಗಿ ಮಾಡುವ 3 ಸ್ಪೆಷೆಲ್ ಪಾನೀಯಾಗಳ ರೆಸಿಪಿ ನೀಡಿದ್ದೇವೆ ನೋಡಿ:

Refreshing 3 Rama Navami Recipe

ಕರ್ಬೂಜ ಪಾನೀಯಾ
1 ಕರ್ಬೂಜವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ಅದಕ್ಕೆ 2 ಗ್ಲಾಸ್ ನೀರು, 1 ಕಪ್ ಬೆಲ್ಲ, ಚಿಟಿಕೆಯಷ್ಟು ಏಲಕ್ಕಿ ಹಾಕಿ ಮಿಕ್ಸ್ ಮಾಡಿದರೆ ರಾಮನವಮಿ ಸ್ಪೆಷೆಲ್ ಕರ್ಬೂಜ ಪಾನೀಯಾ ರೆಡಿ.

ನೀರ್ ಮೂರ್
ಇದನ್ನು ಉತ್ತರದ ಭಾರತದ ಕಡೆ ಹೆಚ್ಚಾಗಿ ಮಾಡಲಾಗುವುದು
ಅರ್ಧ ಕಪ್ ಮೊಸರಿಗೆ 2 ಕಪ್ ನೀರು, ಚಿಕ್ಕದಾಗಿ ಕತ್ತರಿಸಿದ ಕರಿಬೇವಿನ ಎಲೆ(4-5 ಎಲೆ), ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ, ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಒಂದು ಗಂಟೆ ಇಟ್ಟರೆ ಕುಡಿಯಲು ತಂಪಾಗಿ ಇರುತ್ತದೆ. ಫ್ರಿಜ್ ನಲ್ಲೂ ಇಡಬಹುದು.

ಪಾನಾಗ್ರಾಂ
2 ಕಪ್ ನೀರಿಗೆ , 3 ಚಮಚ ಬೆಲ್ಲದ ಪುಡಿ ಹಾಕಿ, 1 ಏಲಕ್ಕಿ, 1 ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ ಫ್ರಿಜ್ ಅಥವಾ ಮಣ್ಣಿನ ಪಾತ್ರೆಯಲ್ಲಿ ಇಟ್ಟು ಸ್ವಲ್ಪ ಹೊತ್ತಿನ ಬಳಿಕ ಕುಡಿಯಿರಿ.

English summary

Refreshing 3 Rama Navami Recipe | Variety Of Juice Recipe | ಆಹ್ಲಾದಕರ 3 ರಾಮನವಮಿ ರೆಸಿಪಿ | ಅನೇಕ ಬಗೆಯ ಜ್ಯೂಸ್ ನ ರೆಸಿಪಿ

Summer is the season of Musk Melon and on the occasion Rama Navami (birth of lord Rama), we would want to share a special 3 summer drink for the season.
X
Desktop Bottom Promotion