For Quick Alerts
ALLOW NOTIFICATIONS  
For Daily Alerts

ಬಿರು ಬೇಸಿಗೆಗೆ ತಂಪಾದ ಪುದೀನಾ-ಮಾವಿನಕಾಯಿ ಪಾನಕ

ಹೇಳಿಕೇಳಿ ಈಗ ಮಾವಿನ ಸೀಸನ್, ಮಾವು ತಿನ್ನಲು ರುಚಿ, ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮಾವಿನ ಸಿಪ್ಪೆ, ಮಾವಿನ ಉಪ್ಪಿನಕಾಯಿ, ಜ್ಯೂಸ್ ಎಲ್ಲವೂ ಆರೋಗ್ಯಕರವಾದುದು. ಬನ್ನಿ ಮಾವಿನ ಕಾಯಿ ಹಾಗೂ ಪುದೀನಾ ಸೊಪ್ಪು ಹಾಕಿ ಮಾಡಿದ ಜ್ಯೂಸ್ ಬಗ್ಗೆ ತಿಳಿಯೋಣ

Posted By: Jaya Subramanya
|

ಅಬ್ಬಾ ಬೇಸಿಗೆ ಬಂತೆಂದರೆ ಒಂದು ತರಹ ಯಮಯಾತನೆ. ಸುಡುವ ಬಿಸಿಲು, ನೀರಿನಂತೆ ದೇಹದಿಂದ ಹರಿದು ಹೋಗುವ ಬೆವರು, ದೇಹವನ್ನು ಹಿಂಡಿ ಹಿಪ್ಪೆ ಮಾಡುವ ಸುಸ್ತು, ಅತಿಯಾದ ಬಾಯಾರಿಕೆ ಇದೆಲ್ಲಾ ಸಮಸ್ಯೆಗಳು ಉಂಟಾಗುವುದೇ ಬೇಸಿಗೆಯಲ್ಲಿ. ನಿರ್ಜಲೀಕರಣದ ಸಮಸ್ಯೆ ಈ ಕಾಲದಲ್ಲಿ ಅತಿಯಾಗಿದ್ದು ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಕೂಡ ಬೇಸಿಗೆಯ ತಾಪದಿಂದ ಬಳಲಿ ಬೆಂಡಾಗುತ್ತವೆ.

ಈ ಬೇಸಿಗೆಯಲ್ಲಿ ಪಾನೀಯಗಳು ನಿಮ್ಮ ತನು ಮನವನ್ನು ತಣಿಸಲಿವೆ. ಐಸ್ ಕ್ಯೂಬ್ ಹಾಕಿ ತಯಾರಿಸಿದ ತಂಪಾದ ಪಾನೀಯಗಳು ನಿಮ್ಮ ಬೇಸಿಗೆಯ ದಾಹವನ್ನು ತಣಿಸುವುದರ ಜೊತೆಗೆ ನಿಮಗೂ ತಂಪಿನ ಅನುಭವವನ್ನು ಮಾಡಿಸಲಿದೆ. ಅದೇ ರೀತಿ ಹೆಚ್ಚು ತಂಪಿನ ಉತ್ಪನ್ನಗಳ ಸೇವನೆ ಕೂಡ ನೀವು ಮಾಡಬಾರದು ಎಂಬುದಾಗಿ ಕೂಡ ನಾವು ಸಲಹೆ ನೀಡುತ್ತಿದ್ದೇವೆ.

ಇಂದಿನ ಲೇಖನದಲ್ಲಿ ನಾವು ಸಲಹೆ ಮಾಡುತ್ತಿರುವ ಪಾನೀಯ ಹಸಿ ಮಾವಿನ ಕಾಯಿಯನ್ನು ಬೇಯಿಸಿ ಪುದೀನಾದೊಂದಿಗೆ ಮಿಶ್ರ ಮಾಡಿ ತಯಾರಿಸಲಾದ ಪಾನೀಯವಾಗಿದೆ. ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು ನಿಮ್ಮ ದೇಹಕ್ಕೆ ಪುದೀನಾ ತಂಪಿನ ಅನುಭವವನ್ನು ನೀಡಲಿದೆ ಮತ್ತು ಹಸಿ ಮಾವಿನ ಸೊಗಸು ನಿಮ್ಮ ನಾಲಗೆಯ ಸ್ವಾದಕ್ಕೆ ಹೇಳಿಮಾಡಿಸಿದ್ದಾಗಿದೆ. ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!

ಹಾಗಿದ್ದರೆ ಬನ್ನಿ ಈ ಸೊಗಸಾದ ಪಾನೀಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ಈ ಸಿರಪ್ ಅನ್ನು ನೀವು ತಯಾರಿಸಿ ಫ್ರಿಜ್‌ನಲ್ಲಿರಿಸಿಕೊಂಡು ಯಾವಾಗ ಬೇಕೋ ಆವಾಗ ಮಾಡಿ ಸೇವಿಸಬಹುದಾಗಿದೆ.

ಸಾಮಾಗ್ರಿಗಳು
*ಸಕ್ಕರೆ - 1/2 ಕಪ್
*ನೀರು - 2 ಕಪ್‌ಗಳು
*ಹಸಿ ಮಾವಿನಕಾಯಿ - 2 ಕಪ್‌ಗಳು
*ಪುದೀನಾ ಸೊಪ್ಪು - 1 ಕಟ್ಟು
*ಐಸ್ ಕ್ರಶ್ ಮಾಡಿರುವುದು - 1 ಕಪ್

ಮಾಡುವ ವಿಧಾನ
*ಮೊದಲಿಗೆ ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1/2 ಕಪ್ ಸಕ್ಕರೆ ಮತ್ತು 1/2 ಕಪ್ ನೀರು ಮಿಶ್ರ ಮಾಡಿ ಹಾಗೂ ಸಕ್ಕರೆ ಕರಗುವವರೆಗೆ ಮಿಶ್ರ ಮಾಡಿಕೊಳ್ಳಿ.

*ಸಕ್ಕರೆ ಕರಗಿದ ನಂತರ ಮಾವಿನ ಕಾಯಿಯನ್ನು ಕತ್ತರಿಸಿ ಇದಕ್ಕೆ ಹಾಕಿ.

*ಮಾವಿನ ಕಾಯಿ ಚೆನ್ನಾಗಿ ಬೇಯುವವರೆಗೆ 2 ರಿಂದ ಮೂರು ನಿಮಷಗಳ ಕಾಲ ಹಾಗೆಯೇ ಬಿಡಿ. ಸಕ್ಕರೆ ಮತ್ತು ಮಾವಿನ ಕಾಯಿ ಒಂದಕ್ಕೊಂದು ಚೆನ್ನಾಗಿ ಬೆರೆಯಲಿ.

*ಈ ಮಿಶ್ರಣ ತಣ್ಣಗಾದ ನಂತರ ಮಾವಿನಕಾಯಿಯ ಸಿಪ್ಪೆಯನ್ನು ಬೇರ್ಪಡಿಸಿ, ಅದರ ತಿರುಳನ್ನು ಮಾತ್ರ ಮಿಕ್ಸರ್‌ಗೆ ಹಾಕಿ. ಹಾಗೂ ಸ್ವಲ್ಪ ಪುದೀನಾ ಸೊಪ್ಪನ್ನು ಕತ್ತರಿಸಿ ಸೇರಿಸಿ ನಂತರ ನುಣ್ಣಗೆ ಮಿಶ್ರಣವನ್ನು ತಯಾರಿಸಿಕೊಳ್ಳಿ.

*ಮಿಕ್ಸರ್‌ನಿಂದ ಜ್ಯೂಸ್ ಅನ್ನು ಹೊರತೆಗೆಯಿರಿ.

*ಈ ಸಿರಪ್ ಅನ್ನು ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಬಹುದಾಗಿದೆ.

*ನೀರು ಮತ್ತು ಎರಡು ಚಮಚಗಳಷ್ಟು ಕ್ರಶ್ ಮಾಡಿದ ಐಸ್ ಅನ್ನು ಬೌಲ್‌ಗೆ ಹಾಕಿ ನಂತರ ಹ್ಯಾಂಡ್ ಬ್ಲೆಂಡರ್ ಸಹಾಯದಿಂದ ಬ್ಲೆಂಡ್ ಮಾಡಿಕೊಳ್ಳಿ.

*ಇದನ್ನು ಸರ್ವ್ ಮಾಡುವುದಕ್ಕಾಗಿ ಕಪ್‌ಗಳಲ್ಲಿ ಪಾನೀಯವನ್ನು ಹಾಕಿ ನಂತರ ಐಸ್ ಸೇರಿಸಿ.

*ತಂಪಾಗಿ ಇದನ್ನು ಸೇವಿಸಲು ನೀಡಿ ಮತ್ತು ನೀವು ತಯಾರಿಸಿ ಪ್ರತಿಕ್ರಿಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಮಾವಿನ ಹಣ್ಣಿನಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಶಕ್ತಿ

[ of 5 - Users]
X
Desktop Bottom Promotion