For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಸ್ಪೆಶಲ್ ಡ್ರಿಂಕ್: ಮಸಾಲಾ ಮಜ್ಜಿಗೆ

|

ಬೇಸಿಗೆಯಲ್ಲಿ ತಂಪು ತಂಪು ಪಾನೀಯಕ್ಕೆ ನಾವು ಮನಸೋಲುವುದು ಹೆಚ್ಚು. ಬಿಸಿ ಬಿಸಿ ಆಹಾರ ನಮಗೆ ಬೇಡ. ಬೇಸಿಗೆಯ ಬಿಸಿಯನ್ನು ತಂಪಾಗಿಸಲು ತಂಪು ಪಾನೀಯ ಹಿತಕಾರಿಯಾಗಿರುತ್ತದೆ. ಬಿಸಿಗೆ ಹೀಟ್ ಸ್ಟ್ರೋಕ್‌ನಿಂದ ತಂಪು ಪಾನೀಯ ನಮಗೆ ಪರಿಹಾರವನ್ನು ನೀಡುತ್ತದೆ.

ಹಾಗಿದ್ದರೆ ನಿಮಗೆ ನೈಸರ್ಗಿಕವಾಗಿ ದೇಹಕ್ಕೆ ತಂಪನ್ನೀಯುವ ಪಾನೀಯ ಮೊಸರಾಗಿದೆ. ಇದು ಬಿಸಿಯನ್ನು ನಿಯಂತ್ರಿಸಲು ಒಂದು ಸೂಪರ್ ಫುಡ್ ಆಗಿದೆ. ಇದರಿಂದ ತಯಾರಿಸುವ ಪೇಯ ಕೂಡ ದೇಹಕ್ಕೆ ಸ್ವಾಸ್ಥ್ಯವನ್ನು ಒದಗಿಸಲಿದ್ದು ಆರೋಗ್ಯವಂತ ಮೈ ಕಾಂತಿಯನ್ನು ನೀಡುತ್ತದೆ.

ಇಂದಿನ ಲೇಖನದಲ್ಲಿ ಸರಳವಾಗಿ ಮಾಡುವ ಮೊಸರು ಪೇಯವನ್ನು ಕೆಳಗೆ ನೀಡಲಾಗಿದ್ದು ನಿಮ್ಮ ಬೇಸಿಗೆ ಡ್ರಿಂಕ್ ಅನ್ನು ನಿಮಗೆ ಸುಲಭವಾಗಿ ತಯಾರಿಸಬಹುದು.

ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!

Mattha (Spiced Buttermilk): Summer Special Drink

ಪ್ರಮಾಣ:3
ಸಿದ್ಧತಾ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
*ಮೊಸರು - 1 ಕಪ್
*ನೀರು - 1 ಕಪ್
*ಕಲ್ಲುಪ್ಪು - 1/2 ಸ್ಪೂನ್
*ಶುಂಠಿ - 1 ಸ್ಪೂನ್
*ಹುರಿದ ಜೀರಿಗೆ - 1 1/2 ಸ್ಪೂನ್
*ಮೆಣಸಿನ ಹುಡಿ - ಸ್ವಲ್ಪ
*ಉಪ್ಪು - ರುಚಿಗೆ ತಕ್ಕಷ್ಟು
*ಕೊತ್ತಂಬರಿ ಸೊಪ್ಪು - 1 ಸ್ಪೂನ್ (ಕತ್ತರಿಸಿದ್ದು)

ಬಿಸಿಲಿನ ದಾಹವನ್ನು ತಣಿಸುವ ಕಲ್ಲಂಗಡಿ ಯೋಗರ್ಟ್ ರೆಸಿಪಿ!

ಮಾಡುವ ವಿಧಾನ:
1. ಮೊಸರನ್ನು ಒಂದು ಪಾತ್ರಗೆ ಹಾಕಿ ನೀರು ಬೆರೆಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಗಂಟುಗಳು ಬರದಂತೆ ಮಿಶ್ರ ಮಾಡಿಕೊಳ್ಳಿ.

2.ಈಗ ಜಜ್ಜಿದ ಶುಂಠಿ, ಹುರಿದ ಜೀರಿಗೆ, ಉಪ್ಪು, ಮೆಣಸಿನ ಹುಡಿ ಹಾಗೂ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಮಿಶ್ರ ಮಾಡಿಕೊಳ್ಳಿ.

3.ಈ ಪೇಯವನ್ನು ಲೋಟಕ್ಕೆ ಹಾಕಿ ತಂಪಾಗಿ ನೀಡಿ.

ನಿಮ್ಮ ಬೇಸಿಗೆ ಪೇಯ ಸವಿಯಲು ಸಿದ್ಧವಾಗಿದೆ. ದಿನದ ಯಾವ ಸಮಯದಲ್ಲಾದರೂ ಈ ತಾಜಾ ರಿಫ್ರೆಶ್ ಡ್ರಿಂಕ್ ಅನ್ನು ಸವಿಯಿರಿ.

Story first published: Monday, May 5, 2014, 10:58 [IST]
X
Desktop Bottom Promotion