For Quick Alerts
ALLOW NOTIFICATIONS  
For Daily Alerts

ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು

|

ನಿಂಬೆ ಜ್ಯೂಸ್ ಮಾಡುವಾಗ ಸಾಮಾನ್ಯವಾಗಿ ಸಕ್ಕರೆ ಹಾಕಿ ಕಲೆಸಿ ಕುಡಿಯುತ್ತೇವೆ. ಕೆಲವರು ಸ್ವಲ್ಪ ಉಪ್ಪು ಕೂಡ ಸೇರಿಸುತ್ತಾರೆ. ಆದರೆ ಈ ಸಾಮಾಗ್ರಿಗಳ ಜೊತೆ ಜೀರಿಗೆ, ಪುದೀನಾ ಈ ಎರಡು ಸಾಮಾಗ್ರಿಗಳನ್ನು ಅಧಿಕ ಹಾಕಿದರೆ ಮಾಮೂಲಿ ನಿಂಬೆ ಪಾನೀಯಕ್ಕಿಂತ ರುಚಿಕರವಾದ ಜ್ಯೂಸ್ ನ ಸವಿ ನೋಡಬಹುದು, ಏನಂತೀರಿ?

ಈ ಜ್ಯೂಸ್ ಇದುವರೆಗೆ ಮಾಡದಿದ್ದರೆ ಇಂದೇ ಟ್ರೈ ಮಾಡಲು ಮರೆಯದಿರಿ.

Indian lemonade Recipe

ಬೇಕಾಗುವ ಸಾಮಾಗ್ರಿಗಳು
1 ನಿಂಬೆ ಹಣ್ಣು
2 ಗ್ಲಾಸ್ ನೀರು
ಸಕ್ಕರೆ(ಸಿಹಿಗೆ ತಕ್ಕಷ್ಟು)
1 ಚಮಚ ಜೀರಿಗೆ ಪುಡಿ
ಬ್ಲ್ಯಾಕ್ ಸಾಲ್ಟ್ (ರುಚಿಗೆ ತಕ್ಕಷ್ಟು)
4-5 ಪುದೀನಾ ಎಲೆ
ಸ್ವಲ್ಪ ಐಸ್ ಕ್ಯೂಬ್ಸ್

ತಯಾರಿಸುವ ವಿಧಾನ:
* ನಿಂಬೆ ರಸವನ್ನು ನೀರಿಗೆ ಹಿಂಡಿ, ರುಚಿಗೆ ತಕ್ಕ ಉಪ್ಪು ಮತ್ತು ಸಕ್ಕರೆ ಹಾಕಿ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ. ನಂತರ ಐಸ್ ಕ್ಯೂಬ್ಸ್ ಹಾಕಿ ಪುದೀನಾ ಎಲೆಯಿಂದ ಅಲಂಕರಿಸಿ ತಕ್ಷಣ ಸರ್ವ್ ಮಾಡಿ.

English summary

Indian lemonade Recipe | Variety Juice Recipe | ನಿಂಬೆ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು| ಅನೇಕ ಬಗೆಯ ಜ್ಯೂಸ್ ನ ರೆಸಿಪಿ

It is so refreshing, plus you get loads of vitamin c in one drink. it is so hot now. So better to drink lots of juice today. Exclude cool drinks, include this soothing drinks.
X
Desktop Bottom Promotion