For Quick Alerts
ALLOW NOTIFICATIONS  
For Daily Alerts

ಸ್ವಾತಂತ್ರೋತ್ಸವಕ್ಕೆ ತ್ರಿವರ್ಣ ಬಣ್ಣದ ಜ್ಯೂಸ್

By Neha Mathur
|

ನಾಳೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳಾದವು. ಪರಕೀಯರ ಆಳ್ವಿಕೆಯಿಂದ ಮುಕ್ತಿಯನ್ನು ಪಡೆದರೂ ಸಂಪೂರ್ಣ ಸ್ವಾತಂತ್ರ್ಯದ ಸಿಹಿಯನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅನ್ನುವುದೇ ವಿಷಾದನೀಯ. ರೇಪ್, ಲೂಟಿ, ನಮ್ಮವರಿಂದಲೇ ದಬ್ಬಾಳಿಕ್ಕೆ, ಬಾಲ ಕಾರ್ಮಿಕ ಪದ್ಧತಿ, ಕುಟುಂಬ ರಾಜಕೀಯ, ಜನರ ಹಿತಕ್ಕಿಂತ ತಮ್ಮ ಸ್ವಾರ್ಥಕ್ಕಾಗಿ ಬಡಿದಾಡುತ್ತಿರುವ ರಾಜಕಾರಣಿಗಳು ಹೀಗೆ ನಮ್ಮ ಸ್ವಾತಂತ್ರ್ಯಕ್ಕೆ ಕಪ್ಪು ಚುಕ್ಕಿಯಾಗಿರುವ ಅನೇಕ ವಿಷಯಗಳಿಂದ ಮುಕ್ತಿ ಹೊಂದರೆ ಮಾತ್ರ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರೋತ್ಸವದ ಸಿಹಿಯನ್ನು ಸವಿಯಲು ಸಾಧ್ಯ. ಆ ನಿಟ್ಟಿನತ್ತ ನಾವೂ ಕೈ ಜೋಡಿಸೋಣ.

ಸ್ವಾತಂತ್ರ್ಯ ದಿನಾಚರಣೆಯಂದು ದೇಶ ಪ್ರೇಮವನ್ನು ಸಾರುವ ಏನಾದರೂ ಅಡುಗೆ ಅಥವಾ ಜ್ಯೂಸ್ ಮಾಡಬೇಕೆಂದು ಬಯಸುವುದಾದರೆ ಈ ತ್ರಿವರ್ಣ ಬಣ್ಣದ ಜ್ಯೂಸ್ ಮಾಡಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

ಹಸಿರು ಬಣ್ಣಕ್ಕೆ:

ಕಿವಿ ಹಣ್ಣು ಅರ್ಧ ಕಪ್

ನೀರು ಒಂದೂವರೆ ಕಪ್

ಜೆಲೆಟಿನ್ (Gelatin)2 ಚಮಚ

ಬಿಳಿ ಬಣ್ಣಕ್ಕೆ:

ಮಂದವಾದ ಕ್ರೀಮ್ 2 ಕಪ್

ಸಕ್ಕರೆ ರುಚಿಗೆ ತಕ್ಕಷ್ಟು

ಜೆಲೆಟಿನ್ 2 ಚಮಚ

ಕೇಸರಿ ಬಣ್ಣಕ್ಕೆ:

ಮಂದವಾದ ವೈಪ್ಪಿಂಗ್ ಕ್ರೀಮ್ 1 ಕಪ್(Heavy whipping cream)

ಸ್ವಲ್ಪ ಸಕ್ಕರೆ

ಮಾವಿನ ಹಣ್ಣಿನ ಹೋಳು 1 ಕಪ್

ತಯಾರಿಸುವ ವಿಧಾನ:ಹಸಿರು ಬಣ್ಣ

ತಯಾರಿಸುವ ವಿಧಾನ:ಹಸಿರು ಬಣ್ಣ

* ಜೆಲೆಟಿನ್ ಅನ್ನು 1/4 ಕಪ್ ನೀರಿನಲ್ಲಿ ಮಿಕ್ಸ್ ಮಾಡಿ ಒಂದು ಬದಿಯಲ್ಲಿಡಿ.

* ಕಿವಿಹಣ್ಣಿಗೆ ಅರ್ಧ ಕಪ್ ನೀರು ಹಾಕಿ ಬೇಯಿಸಿ.

* ನಂತರ ಉರಿಯಿಂದ ಇಳಿಸಿ, ನೀರು ಬಿಸಿಯಾಗಿರುವಾಗಲೇ ಜೆಲೆಟಿನ್ ಸೇರಿಸಿ. ಚೆನ್ನಾಗಿ ಸೌಟ್ ನಿಂದ ಹಿಸುಕಿ ಅದನ್ನು ಜಾರ್ ನಲ್ಲಿ ಹಾಕಿ 6 ಗಂಟೆ ಫ್ರಿಜ್ ನಲ್ಲಿಡಿ.

ಬಿಳಿ ಬಣ್ಣ ತಯಾರಿಸುವ ವಿಧಾನ

ಬಿಳಿ ಬಣ್ಣ ತಯಾರಿಸುವ ವಿಧಾನ

* ಜೆಲೆಟಿನ್ ಅನ್ನು 1/4 ಕಪ್ ನೀರಿನಲ್ಲಿ ಮಿಕ್ಸ್ ಮಾಡಿ ಒಂದು ಬದಿಯಲ್ಲಿಡಿ.

* ಕ್ರೀಮ್ ಮತ್ತು ಸಕ್ಕರೆಯನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ, ನಂತರ ಉರಿಯಿಂದ ತೆಗೆದು ಜೆಲೆಟಿನ್ ಮಿಕ್ಸ್ ಮಾಡಿ. ಫ್ರಿಜ್ ನಲ್ಲಿ 6 ಗಂಟೆ ಇಡಿ

ಕೇಸರಿ ಬಣ್ಣಕ್ಕೆ ತಯಾರಿಸುವ ವಿಧಾನ

ಕೇಸರಿ ಬಣ್ಣಕ್ಕೆ ತಯಾರಿಸುವ ವಿಧಾನ

* ಇಲ್ಲಿಯೂ ಜೆಲೆಟಿನ್ ಅನ್ನು 1/4 ಕಪ್ ನೀರಿನಲ್ಲಿ ಮಿಕ್ಸ್ ಮಾಡಿ ಒಂದು ಬದಿಯಲ್ಲಿಡಿ.

* ಕ್ರೀಮ್ ಮತ್ತು ಸಕ್ಕರೆಯನ್ನು ಬಿಸಿ ಮಾಡಿ ಅದನ್ನು ಉರಿಯಿಂದ ಇಳಿಸಿ, ನಂತರ ಜೆಲೆಟಿನ್ ನೀರು ಸೇರಿಸಿ ಪೇಸ್ಟ್ ರೀತಿ ಮಾಡಿದ ಮಾವಿನ ಹಣ್ಣನ್ನು ಹಾಕಿ ಮಿಕ್ಸ್ ಮಾಡಿ 3 ಗಂಟೆಗಳ ಫ್ರಿಜ್ ನಲ್ಲಿ ಇಡಿ.

 ಸ್ವಾತಂತ್ರೋತ್ಸವಕ್ಕೆ ಸ್ಪೆಷಲ್ ಜ್ಯೂಸ್

ಸ್ವಾತಂತ್ರೋತ್ಸವಕ್ಕೆ ಸ್ಪೆಷಲ್ ಜ್ಯೂಸ್

ನಾಳೆ ಬೆಳಗ್ಗೆ ಮಂದವಾದ ಈ ಜ್ಯೂಸ್ ಗಳನ್ನು ಕ್ರಮಬದ್ಧವಾಗಿ ಮೊದಲು ಹಸಿರು, ನಂತರ ಬಿಳಿ, ನಂತರ ಕೇಸರಿಯಂತೆ ಲೋಟಕ್ಕೆ ಸುರಿದು ಮಕ್ಕಳಿಗೆ ಕುಡಿಯಲು ಕುಡಿಯಿರಿ.

English summary

Independence Day Special Recipe

This year while India celebrates its 67th Independence Day, we dedicate this tri-colour recipe to give our readers. 
X
Desktop Bottom Promotion