For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!

|

ಬೇಸಿಗೆ ಹಣ್ಣುಗಳ ರಾಜ ಮಾವು ತನ್ನ ರುಚಿಯನ್ನು ತೋರಿಸುವ ಕಾಲ. ಇನ್ನು ಮಾವಿನ ಹಣ್ಣಿನ ರುಚಿ ಮಾತ್ರ ಸವಿದರೆ ಸಾಕೆ? ಅದರ ಜೊತೆಗೆ ಆ ಹಣ್ಣಿನ ರಸವನ್ನು ಸೇವಿಸಿದಾಗ ತಾನೆ ಅದರ ರುಚಿ ನಮ್ಮ ರುಚಿ ಗ್ರಂಥಿಗಳಿಗೆ ಆಹ್ಲಾದವನ್ನುಂಟು ಮಾಡುವುದು.

ಮಾವಿನ ಹಣ್ಣಿನ ರಸವನ್ನು ಸೇವಿಸಬೇಕೆಂದು ಸಂಸ್ಕರಿಸಿದ ರಸ ಅಥವಾ ಜ್ಯೂಸ್ ಕಾರ್ನರ್‌ಗಳಲ್ಲಿ ಮಾವಿನ ಜ್ಯೂಸ್ ಸೇವಿಸುವ ಬದಲು, ನಿಮ್ಮ ಮನೆಯಲ್ಲಿಯೇ ಅದನ್ನು ತಯಾರಿಸಿಕೊಳ್ಳಿ. ಈ ಋತುವಿನಲ್ಲಿ ಮಾವಿನ ಹಣ್ಣಿನ ರಸವನ್ನು ಮನೆಯಲ್ಲಿಯೇ ಮಾಡುವುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ.

How to Make Fresh Mango Juice

ಅಗತ್ಯವಾದ ಪದಾರ್ಥಗಳು
*ನಾಲ್ಕು ಜನ ಸೇವಿಸಬಹುದು
*2 ಹಣ್ಣಾದ ಮಾವಿನಹಣ್ಣುಗಳು
*1 ಕಪ್ ನೀರು
*2 ಟೀ.ಚಮಚ ಸಕ್ಕರೆ
*ಒಂದಿಷ್ಟು ಐಸ್ ಕ್ಯೂಬ್‍ಗಳು

ಮಾಡುವ ವಿಧಾನ
*ಮಾವಿನ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ.
*ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
*ಮಾವು, ಐಸ್, ನೀರು ಮತ್ತು ಸಕ್ಕರೆ ಎಲ್ಲವನ್ನೂ ಮಿಕ್ಸಿನಲ್ಲಿ ಹಾಕಿ. ಚೆನ್ನಾಗಿ ರುಬ್ಬಿಕೊಳ್ಳಿ.
*ನಂತರ ಇದನ್ನು ಶೋಧಿಸಿಕೊಳ್ಳಿ.
*ಉಳಿದ ಸಿಪ್ಪೆಗಳನ್ನು ಮತ್ತು ನಾರನ್ನು ತೆಗೆದು ದೂರವಿಡಿ.
*ಈ ಜ್ಯೂಸನ್ನು ಗ್ಲಾಸುಗಳಲ್ಲಿ, ಅಲಂಕಾರಕ್ಕಾಗಿ ಒಂದು ತುಂಡು ಮಾವಿನ ಹಣ್ಣನ್ನು ಸಿಕ್ಕಿಸಿ ಸರ್ವ್ ಮಾಡಿ.

ಸಲಹೆಗಳು
*ಮಾವಿನಹಣ್ಣುಗಳಲ್ಲಿ ಉತ್ತಮವಾದ ಸ್ವಾದದ ಜೊತೆಗೆ, ಒಳ್ಳೆಯ ಸುವಾಸನೆ ಸಹ ಇರುತ್ತದೆ. ಮಾವಿನ ಹಣ್ಣಿನ ಜೊತೆಗೆ ಜಿಪುಣತನ ಮಾಡಬೇಡಿ. ಹೆಚ್ಚು ಮಾವಿನ ಹಣ್ಣು ಬಳಸಿದಷ್ಟು ನೀರನ್ನು ಹೆಚ್ಚು ಮಾಡಿ.
*ಜ್ಯೂಸ್ ಮಾಡಲು ರುಚಿಯಾದ ಮತ್ತು ಕಡಿಮೆ ನಾರಿನಂಶವಿರುವ ಮಾವಿನಹಣ್ಣುಗಳನ್ನು ಬಳಸಿ.
*ನೀರು ಬೆರೆಸಬೇಕೆಂದು ಹೆಚ್ಚು ಪ್ರಮಾಣದ ನೀರನ್ನು ಬೆರೆಸಬೇಡಿ. ಅದು ಮಾವಿನ ಹಣ್ಣಿನ ರುಚಿಯನ್ನು ಹಾಳು ಮಾಡಿ ಬಿಡುತ್ತದೆ.

English summary

How to Make Fresh Mango Juice

Summer is one of the only times when one can enjoy the true ecstasy of fresh mango juice. Usually bottled mango juices and drinks have a kind of uniform taste and flavor. But you can make 
 fresh mango juice at home with different types of mangoes, and enjoy different flavors in mango juice.
Story first published: Tuesday, April 14, 2015, 19:30 [IST]
X
Desktop Bottom Promotion