For Quick Alerts
ALLOW NOTIFICATIONS  
For Daily Alerts

ಕೇಸರಿ ಪಿಸ್ತಾ ಮಿಲ್ಕ್ ಶೇಕ್- ಸೂಪರ್ ಕಾಂಬಿನೇಷನ್!

By Jaya subramanya
|

ಬೇಸಿಗೆಯ ಧಗೆ ನಮ್ಮ ದೇಹವನ್ನು ಹೀರುತ್ತಿದ್ದಾಗ ಬಾಯಾರಿಕೆ ಬಹಳವಾಗಿ ಉಂಟಾಗುತ್ತದೆ. ಈ ಸಮಯದಲ್ಲಿ ತಂಪು ಪಾನೀಯದತ್ತ ಮನಸ್ಸು ವಾಲುವುದು ಸಹಜವೇ. ನಮ್ಮ ದೇಹಕ್ಕೆ ಸಾಕಷ್ಟು ದ್ರವವನ್ನು ಒದಗಿಸುವುದರ ಮೂಲಕ ಬೇಸಿಗೆಯ ಧಗೆಯನ್ನು ಕಡಿಮೆ ಮಾಡಬೇಕಾಗುತ್ತದೆ. ನೀರು ಆದಷ್ಟು ಕುಡಿಯುತ್ತಾ ಬಾಯಿ ಒಣಗದಂತೆ ನೋಡಿಕೊಳ್ಳಬೇಕಾಗುತ್ತದೆ. ಬರಿಯ ನೀರು ಎಂದರೆ ಒಂದು ರೀತಿಯ ಬೇಜಾರು ಉಂಟಾಗುವುದು ಆಗ ಬಾಯಿ ಕೊಂಚ ರುಚಿಯಾಗಿರುವುದನ್ನು ಬಯಸುತ್ತದೆ.

ಅದೂ ಅಲ್ಲದೆ ಮಕ್ಕಳಿಗೆ ಬೇಸಿಗೆಯ ರಜೆ. ಅವರು ಕೂಡ ವಿಶೇಷವಾದ ರೆಸಿಪಿಯನ್ನು ನಿಮ್ಮಿಂದ ಬಯಸುತ್ತಿರುತ್ತಾರೆ. ಹಾಗಿದ್ದರೆ ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ವಿಶೇಷ ರೆಸಿಪಿಯೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಕೇಸರಿ ಮತ್ತು ಪಿಸ್ತಾ ಹಾಕಿದ ಮಿಲ್ಕ್ ಶೇಕ್ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಕೇಸರಿ ಮತ್ತು ಪಿಸ್ತಾ ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....

ಕೇಸರಿಯು ಗರ್ಭಿಣಿ ಸ್ತ್ರೀಯರಿಗೆ ಉತ್ತಮವಾಗಿರುವುದರಿಂದ ಐದು ತಿಂಗಳನ್ನು ಪೂರೈಸಿದ ತಾಯಿಗೆ ಆಗಾಗ್ಗೆ ಕೇಸರಿ ಮಿಶ್ರಿತ ಹಾಲನ್ನು ನೀಡಲಾಗುತ್ತದೆ. ಮತ್ತು ಏಳನೇ ತಿಂಗಳಿನಲ್ಲಿ, ಹಾಲಿನೊಂದಿಗೆ ಕೇಸರಿಯನ್ನು ಮಿಶ್ರ ಮಾಡಿ ಗರ್ಭಿಣಿಗೆ ನೀಡಲಾಗುತ್ತದೆ. ಪ್ರಸೂತಿಯವರೆಗೆ ಈ ಹಾಲನ್ನು ನೀಡಲಾಗುತ್ತದೆ. ಇನ್ನು ಪಿಸ್ತಾ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಿ ದೇಹದ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ. ಹಾಗಿದ್ದರೆ ಇನ್ನೇಕೆ ತಡ ಬೇಸಿಗೆಯ ಧಗೆಯನ್ನು ಕಡಿಮೆ ಮಾಡಲು ಇಲ್ಲಿದೆ ಕೇಸರಿ ಪಿಸ್ತಾ ರೆಸಿಪಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.

Healthy Kesar Pista Milkshake Recipe

ಪ್ರಮಾಣ - 4
ಅಡುಗೆಗೆ ಬೇಕಾದ ಸಮಯ - 15 ನಿಮಿಷಗಳು
ಸಿದ್ಧತಾ ಸಮಯ - 10 ನಿಮಿಷಗಳು

ಸಾಮಾಗ್ರಿಗಳು
*ಪಿಸ್ತಾ - 1 ಕಪ್
*ಕೇಸರಿ - 4 ರಿಂದ 5 ದಳ
*ಬಾದಾಮಿ - 1/2 ಕಪ್
*ಸಕ್ಕರೆ - ಒಂದೂವರೆ ಕಪ್
*ಏಲಕ್ಕಿ - 4 ರಿಂದ 5
*ಹಾಲು - 1 ಲೀಟರ್

ಮಾಡುವ ವಿಧಾನ:
1. ಮೊದಲಿಗೆ, ಬೇರೆ ಬೇರೆ ಪಾತ್ರೆಗಳಲ್ಲಿ ಆರು ಗಂಟೆಗಳ ಕಾಲ ಬಾದಾಮಿ ಮತ್ತು ಪಿಸ್ತಾವನ್ನು ನೆನೆಸಿಕೊಳ್ಳಿ.
2. ಈ ಸಮಯದಲ್ಲಿ ಹಾಲನ್ನು ಬಿಸಿ ಮಾಡಿಕೊಳ್ಳಿ.
3. ಸಣ್ಣ ಉರಿಯಲ್ಲಿ ಹಾಲು ಬಿಸಿ ಮಾಡಿ ಸ್ವಲ್ಪ ಕಾಲ ಇದು ಕುದಿಯಲಿ
4. ಇದೀಗ, ಮಿಕ್ಸಿ ಜಾರ್ ತೆಗೆದುಕೊಂಡು ನೆನೆಸಿದ ಬಾದಾಮಿ, ಪಿಸ್ತಾ ಮತ್ತು ಏಲಕ್ಕಿಯನ್ನು ನುಣ್ಣಗೆ ಪೇಸ್ಟ್‎ನಂತೆ ರುಬ್ಬಿ.
5.ಕುದಿಯುತ್ತಿರುವ ಹಾಲಿಗೆ ಈ ಪೇಸ್ಟ್ ಅನ್ನು ಸೇರಿಸಿ.
6. ಹಾಲಿಗೆ ಸಕ್ಕರೆಯನ್ನು ಹಾಕಿ, ನಂತರ ಕೇಸರಿ ದಳವನ್ನು ಸೇರಿಸಿ ಅಲಂಕಾರ ಮಾಡಿ.
7. ಹಾಲು ಸಣ್ಣ ಉರಿಯಲ್ಲಿ ಕುದಿಯುತ್ತಿದೆ ಎಂಬುದನ್ನು ಖಾತ್ರಿಪಡಿಸಿ.
8.ಹಾಲು ಒಮ್ಮೆ ಚೆನ್ನಾಗಿ ಕುದಿದ ನಂತರ, ಸ್ಟವ್ ಆಫ್ ಮಾಡಿ ಮತ್ತು ಕೊಠಡಿಯ ತಾಪಮಾನಕ್ಕೆ ಹಾಲು ತಣಿಯಲು ಬಿಡಿ. ಇದೇ ಹಾಲನ್ನು ಕುಡಿಯಲು ನೀಡಬಹುದು ಅಥವಾ ಫ್ರಿಡ್ಜ್‎ನಲ್ಲಿ ಇರಿಸಿ ತಂಪು ಹಾಲನ್ನು ಸವಿಯಲು ನೀಡಬಹುದು. ಹಾಗಿದ್ದರೆ ಈ ಬೇಸಿಗೆಯಲ್ಲಿ ಈ ಪಾನೀಯವನ್ನು ಮಾಡಲು ಮರೆಯದಿರಿ.

English summary

Healthy Kesar Pista Milkshake Recipe

In this hot summer month, we always feel like drinking something cool, so that our body is hydrated enough to beat the heat. So, to reduce your thirst level and to keep yourself hydrated well and healthy, today we have a special recipe for you.
Story first published: Wednesday, April 20, 2016, 17:54 [IST]
X
Desktop Bottom Promotion