ಬಿಸಿಬಿಸಿಯಾಗಿ ಸವಿಯಲು ಚೆನ್ನ ಈ ಸೂಪ್

By:
Subscribe to Boldsky

Green Gram Soup Recipe
ಸೂಪ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು, ಅದರಲ್ಲೂ ಮೊಳಕೆ ಬರಿಸಿದ ಕಾಳಿನ ಸೂಪ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಂಪಿನ ಹವಾಮಾನದಲ್ಲಿ ಬಿಸಿಬಿಸಿ ಸೂಪ್ ಕುಡಿಯಲು ತುಂಬಾ ಇಷ್ಟವಾಗುವುದು. ಇವತ್ತು ನಾವು ಹೆಸರುಕಾಳಿನ ಸೂಪ್ ಮಾಡುವ ವಿಧಾನ ತಿಳಿಯೋಣ. ಕುಡಿಯಲು ರುಚಿಕರವಾದ ಈ ಸೂಪ್ ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಒಂದು ಕಪ್ ಮೊಳಕೆ ಬರಿಸಿದ ಹೆಸರು ಕಾಳು
* 2 ಚಮಚ ಬೆಣ್ಣೆ
* 1 ಚಮಚ ಸಕ್ಕರೆ
* ಕಾಳು ಮೆಣಸಿನ ಪುಡಿ 1 ಚಮಚ
* ನಿಂಬೆ ರಸ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಹೆಸರು ಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ನಂತರ ಬೆಂದ ಹೆಸರು ಕಾಳನ್ನು ಕೈಯಿಂದ ಹಿಸುಕಿ ತರಿತರಿ ಪೇಸ್ಟ್ ಮಾಡಬೇಕು.

2. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ,ಅದರಲ್ಲಿ ತರಿತರಿಯಾದ ಪೇಸ್ಟ್ ರೀತಿ ಮಾಡಿರುವ ಹೆಸರುಕಾಳನ್ನು ಹಾಕಿ 3-4 ನಿಮಿಷ ಹುರಿಯಬೇಕು.


3. ನಂತರ 3 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಉಪ್ಪು, ಸಕ್ಕರೆ, ಮೆಣಸಿನ ಕಾಳಿನ ಪುಡಿಯನ್ನು ಸೇರಿಸಿ 5 ನಿಮಿಷ ಕುದಿಸಬೇಕು.

4. ನಂತರ ಪಾತ್ರೆಯನ್ನು ಉರಿಯಿಂದ ತೆಗೆದು ಒಂದು ನಿಂಬೆ ಹಣ್ಣಿನ ರಸ ಸೇರಿಸಬೇಕು.

5. ಬಡಿಸುವ ಸಮಯದಲ್ಲಿ ತಾಜಾ ಹಾಲಿನ ಕೆನೆ ಸೇರಿಸಿ, ಚೆನ್ನಾಗಿ ಕಲೆಸಿದರೆ ಈ ಸೂಪ್ ಕುಡಿಯಲು ತುಂಬಾ ರುಚಿಯಾಗಿರುತ್ತದೆ.

Story first published: Thursday, July 12, 2012, 17:26 [IST]
English summary

Green Gram Soup Recipe | Variety Of Soup Recipe | ಹೆಸರುಕಾಳಿನ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ

Soup Is healthy for body. In rainy season we feel to have some thing spicy and hot drinks. So soup is a correct choice to have this season. Here is a green gram recipe. Take a look.
Please Wait while comments are loading...
Subscribe Newsletter