For Quick Alerts
ALLOW NOTIFICATIONS  
For Daily Alerts

ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ

|

ಬೇಸಿಗೆಯಲ್ಲಿ ಜ್ಯೂಸ್, ಐಸ್ ಕ್ರೀಮ್ ,ಕಸ್ಟರ್ಡ್ ಹೀಗೆ ತಂಪಾದ ವಸ್ತುಗಳನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತೇವೆ. ಸುಡುವ ಬಿಸಿಲಿನಲ್ಲಿ ಸುತ್ತಾಡುವಾಗ ಕಾಫಿ ಕುಡಿಯಬೇಕೆಂದು ಅನಿಸುವುದು ಕಮ್ಮಿ, ಆ ಸಮಯದಲ್ಲಿ ನಮ್ಮ ಕಣ್ಣು ಐಸ್ ಕ್ರೀಮ್ ಪಾರ್ಲರ್, ಜ್ಯೂಸ್ ಅಂಗಡಿಯನ್ನು ಹುಡುಕುತ್ತದೆ.

ಮನೆಗೆ ಯಾರಾದರೂ ಬಂದರೂ ಅಷ್ಟೇ ಈ ಸಮಯದಲ್ಲಿ ಕಾಫಿ, ಟೀಗಿಂತ ಜ್ಯೂಸ್ , ಮಿಲ್ಕ್ ಶೇಕ್, ಐಸ್ ಕ್ರೀಮ್ ಇಂತಹ ವಸ್ತುಗಳನ್ನು ಕೊಡುವುದೇ ಸೂಕ್ತ. ಆದ್ದರಿಂದ ಇಲ್ಲಿ ನಾವು ತುಂಬಾ ಸರಳವಾದ, ಅತ್ಯಂತ ರುಚಿಕರವಾದ ವೆನಿಲ್ಲಾ ಕ್ಲಸ್ಟರ್ಡ್ ರೆಸಿಪಿ ನೀಡಿದ್ದೇವೆ ನೋಡಿ:

Frozen Vanilla Custard

ಬೇಕಾಗುವ ಸಾಮಾಗ್ರಿಗಳು
ಹಾಲು 1 ಕಪ್
ಸಕ್ಕರೆ 2-3 ಕಪ್
whipped ಕ್ರೀಮ್ 1 ಕಪ್
ಬ್ರೆಡ್ 5-6 ಪೀಸ್
ಮೊಟ್ಟೆ 2
ವೆನಿಲ್ಲಾ ಎಸೆನ್ಸ್ 1 ಚಮಚ
ಕಸ್ಟರ್ಡ್ ಪುಡಿ 4 ಚಮಚ( ಕಸ್ಟರ್ಡ್ ಪುಡಿ ವೆನಿಲ್ಲಾ ಫ್ಲೇವರ್ ನಲ್ಲಿ ಇದ್ದರೆ ಎಸೆನ್ಸ್ ಅಗತ್ಯವಿಲ್ಲ)

ತಯಾರಿಸುವ ವಿಧಾನ:

* ಒಂದು ಪಾತ್ರೆಯಲ್ಲಿ ಹಾಲು ಹಾಕಿ ಅದಕ್ಕೆ ಸಕ್ಕರೆ ಮತ್ತು ಕ್ರೀಮ್ ಹಾಕಿ ಮಿಕ್ಸ್ ಮಾಡಿ.

* ಬ್ರೆಡ್ ನ ಕೊನೆಯ ಭಾಗವನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಹಾಲಿನ ಜೊತೆ ಮಿಕ್ಸ್ ಮಾಡಿ.

* ಈಗ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಿ.

* ಈಗ ಇದನ್ನು ಉರಿ ಮೇಲೆ ಇಟ್ಟು ಮೊಟ್ಟೆಯ ಹಸಿ ವಾಸನೆ ಹೋಗುವಷ್ಟು ಹೊತ್ತು ಬಿಸಿ ಮಾಡಿ. ಹೀಗೆ ಬಿಸಿ ಮಾಡುವಾಗ ಸೌಟ್ ನಿಂದ ತಿರುಗಿಸುತ್ತಾ ಇರಿ.

* ಈಗ ಕಸ್ಟರ್ಡ್ ಪುಡಿ ಸೇರಿಸಿ ಮತ್ತೆ 2 ನಿಮಿಷ ಬಿಸಿ ಮಾಡಿ. ಈಗ ವೆನಿಲ್ಲಾ ಎಸೆನ್ಸ್ ಸೇರಿಸಿ. ಈಗ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಒಂದು ರಾತ್ರಿ ಫ್ರಿಜ್ ನಲ್ಲಿಡಿ.

* ಮಾರನೇಯ ದಿನಕ್ಕೆ ವೆನಿಲ್ಲಾ ಕಸ್ಟರ್ಡ್ ಸರ್ವ್ ಮಾಡಲು ರೆಡಿ.

English summary

Frozen Vanilla Custard | Food For Summer | ಯಮ್ಮೀ...ವೆನಿಲ್ಲಾ ಕಸ್ಟರ್ಡ್ | ಬೇಸಿಗೆಗೆ ಸೂಕ್ತವಾದ ಕೆಲ ಆಹಾರಗಳು

Custards are very easy to make and highly relished by all age groups. Flavour your near ones mouth with vanilla custard this monsoon.Here is a very simple recipe of vanilla custard.
X
Desktop Bottom Promotion