For Quick Alerts
ALLOW NOTIFICATIONS  
For Daily Alerts

ನಿಮ್ಮ ಉಪಹಾರಕ್ಕಾಗಿ ಐದು ಆರೋಗ್ಯಕರವಾದ ಮಿಲ್ಕ್‌ಶೇಕ್‍ಗಳು

By Super
|

ನಿಮ್ಮ ಉಪಹಾರದ ಜೊತೆಗೆ ಒಂದು ರುಚಿಕರವಾದ ಪಾನೀಯವನ್ನು ಸವಿಯುವುದು ಯಾವತ್ತಿಗೂ ಒಳ್ಳೆಯದೇ. ಬೆಳ್ಳಂಬೆಳಗ್ಗೆಯೇ ಹಬೆಯಾಡುವ ಕಾಫಿ ಮತ್ತು ಟೀಯನ್ನು ಸವಿಯಲು ನಿಮಗೆ ಇಷ್ಟವಾಗದಿದ್ದಲ್ಲಿ, ಮಿಲ್ಕ್‌ಶೇಕ್ ನಿಮಗೆ ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ. ನಮ್ಮ ದಿನ ಚೆನ್ನಾಗಿರಬೇಕಾದಲ್ಲಿ, ನಮ್ಮ ಉಪಾಹಾರವು ಅಷ್ಟೇ ಚೆನ್ನಾಗಿರಬೇಕು. ಉಪಾಹಾರವು ನಮ್ಮ ಆರೋಗ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಬೆಳಗಿನ ಉಪಹಾರದ ಜೊತೆಯಲ್ಲಿ ಸೇವಿಸಲು ಮಿಲ್ಕ್‌ಶೇಕ್‍ಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ. ಹಣ್ಣಿನ ಶೇಖ್‍ಗಳಿಂದ ಹಿಡಿದು ತರಕಾರಿಗಳ ಶೇಖ್‍ಗಳವರೆಗೆ ಹಲವಾರು ಮಿಲ್ಕ್‌ಶೇಕ್‍ಗಳನ್ನು ನಾವು ಸೇವಿಸಬಹುದು. ನಿಮ್ಮ ಊಟದ ಜೊತೆಗೆ ಸೇವಿಸಲು ಹಲವಾರು ಪಾನೀಯಗಳು ದೊರೆಯುತ್ತವೆ. ಆದರೆ ಈ ಬಗೆಯ ಮಿಲ್ಕ್‌ಶೇಕ್‍ಗಳು ನಿಮ್ಮ ನಾಲಿಗೆಗೆ ಮತ್ತು ದೇಹಕ್ಕೆ ಹಬ್ಬದ ಅನುಭವವನ್ನು ನೀಡುತ್ತವೆ.

/pregnancy-parenting/kids/2014/top-6-healthy-milkshake-recipes-children-008786.html

ರೋಸ್ ಮಿಲ್ಕ್‌ಶೇಕ್
ರೋಸ್ ಮಿಲ್ಕ್ ಈ ಚಳಿಗಾಲದ ಋತುವಿಗೆ ಹೇಳಿ ಮಾಡಿಸಿದಂತಹ ಮಿಲ್ಕ್‌ಶೇಕ್ ಆಗಿದೆ. ಇದಕ್ಕಾಗಿ ನಿಮಗೆ ತಂಪಾಗಿ ಕೊರೆಯುವ ಹಾಲು, ರೋಸ್ ಮಿಲ್ಕ್ ಸ್ವಾದ, ಸಕ್ಕರೆ, ಬಾದಾಮಿ, ಗೋಡಂಬಿ ಬೇಕಾಗುತ್ತದೆ. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ರುಬ್ಬಿ, ರುಚಿ ರುಚಿಯಾದ ಮಿಲ್ಕ್ ಶೇಕ್ ತಯಾರಿಸಿಕೊಂಡು ಉಪಹಾರದ ಜೊತೆಗೆ ಸವಿಯಿರಿ.

ಬಾಳೆಹಣ್ಣಿನ ಮಿಲ್ಕ್‌ಶೇಕ್
ಇದೊಂದು ಅತ್ಯಂತ ರುಚಿಕರವಾದ ಮಿಲ್ಕ್‌ಶೇಕ್ ಆಗಿದ್ದು, ಇದನ್ನು ನಿಮ್ಮ ಬೆಳಗಿನ ಉಪಹಾರದ ಜೊತೆಗೆ ಸೇವಿಸಬಹುದು. ಇದಕ್ಕೆ ಮೊದಲು ಈ ಹಣ್ಣುಗಳನ್ನು ನೀವು ತೊಳೆದು, ಸಿಪ್ಪೆ ಸುಲಿದು, ಬೀಜಗಳಿಂದ ಮುಕ್ತಗೊಳಿಸಬೇಕಾಗುತ್ತದೆ. ಆ ನಂತರ ಇದನ್ನು ರುಬ್ಬಿಕೊಂಡು ಒಂದು ರುಚಿಕರವಾದ ಮಿಲ್ಕ್‌ಶೇಕ್ ಮಾಡಿಕೊಳ್ಳಬಹುದು. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

ಅವೊಕ್ಯಾಡೊ ಮಿಲ್ಕ್‌ಶೇಕ್
ಅವೊಕ್ಯಾಡೊ ಮಿಲ್ಕ್‌ಶೇಕ್ ನಿಮ್ಮ ಉಪಹಾರಕ್ಕೆ ಮತ್ತೊಂದು ಸೇರ್ಪಡೆಯಾಗಿರುತ್ತದೆ. ಒಂದು ಸ್ವಲ್ಪ ಹಾಲಿನ ಜೊತೆಗೆ ಸಕ್ಕರೆ ಬೆರೆಸಿ ರುಬ್ಬಿಕೊಳ್ಳಿ. ಇದಕ್ಕೆ ಅವೊಕ್ಯಾಡೊಗಳನ್ನು ಸೇರಿಸಿ ಸ್ವಲ್ಪ ಗಟ್ಟಿಯಾದ ಜ್ಯೂಸ್ ರೀತಿ ಮಾಡಿಕೊಳ್ಳಿ. ನಿಮಗೆ ಅಗತ್ಯವಿದ್ದಲ್ಲಿ, ಸಕ್ಕರೆಗೆ ಬದಲಾಗಿ ಜೇನು ತುಪ್ಪವನ್ನು ಸಹ ಹಾಕಿಕೊಳ್ಳಬಹುದು.

ಚಾಕೊಲೆಟ್ ಮಿಲ್ಕ್‌ಶೇಕ್
ಈ ರುಚಿಕರವಾದ ಮಿಲ್ಕ್‌ಶೇಕ್‍ ತಯಾರಿಸಲು ನಿಮಗೆ ಹಾಲು, ವೆನಿಲಾ, ಐಸ್‌ಕ್ರೀಮ್, ಚಾಕೊಲೆಟ್ ಸಿರಪ್ ಮತ್ತು ಬಿಸ್ಕೆಟ್ ಬೇಕಾಗುತ್ತದೆ. ಬಿಸ್ಕೆಟ್‌ಗಳನ್ನು ಹೊರತುಪಡಿಸಿ ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಹಾಕಿ ನೊರೆ ರೂಪಕ್ಕೆ ಬರುವವರೆಗು ರುಬ್ಬಿಕೊಳ್ಳಿ. ನಂತರ ಇದಕ್ಕೆ ಬಿಸ್ಕೆಟ್‌ಗಳನ್ನು ಹಾಕಿ ಮತ್ತು ಒಂದು ನಿಮಿಷ ಕಾಲ ಚೆನ್ನಾಗಿ ರುಬ್ಬಿ. ಹಾಲಿನ ಕ್ರೀಮ್ ಅನ್ನು ಇದರೆ ಮೇಲೆ ಬೇಕಾದರು ಹಾಕಬಹುದು.

ಕಲ್ಲಂಗಡಿ ಮಿಲ್ಕ್‌ಶೇಕ್
ಇದು ಹೇಳಿ ಕೇಳಿ ಕಲ್ಲಂಗಡಿಯ ಕಾಲ, ಮಿಲ್ಕ್‌ಶೇಕ್ ಮಾಡಲು ಈ ಹಣ್ಣು ಸಹ ಒಂದು ಒಳ್ಳೆಯ ಆಯ್ಕೆಯಾಗಿರುತ್ತದೆ. ಆದ್ದರಿಂದ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು. ಚೌಕಾಕಾರವಾಗಿ ಕತ್ತರಿಸಿ ಫ್ರೀಜರಿನಲ್ಲಿಟ್ಟಿರುವ ಕಲ್ಲಂಗಡಿ ಹೋಳುಗಳು, ಹಾಲು, ವೆನಿಲಾ ಸಾರ ಮತ್ತು ಸಕ್ಕರೆಗಳನ್ನು ಹದವಾಗಿ ರುಬ್ಬಿ ಸ್ವಲ್ಪ ಗಟ್ಟಿಯಾದ ಮಿಲ್ಕ್‌ಶೇಕ್ ಮಾಡಿಕೊಳ್ಳಿ. ಒಂದು ವೇಳೆ ಕಲ್ಲಂಗಡಿ ಸಿಹಿಯಾಗಿದ್ದಲ್ಲಿ, ಸಕ್ಕರೆಯ ಅವಶ್ಯಕತೆಯಿರುವುದಿಲ್ಲ.

English summary

Five Healthy Milkshakes For Breakfast

It is always nice to have a beverage along with your yummy breakfast. If you are not the one who prefers a cup of brewing coffee or tea, then milkshake should be on the list. Breakfast is the most important meal of the day and having a table laid like a king is best to complete your meal.
X
Desktop Bottom Promotion