For Quick Alerts
ALLOW NOTIFICATIONS  
For Daily Alerts

ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತೆ ಈ ಜ್ಯೂಸ್

|

ಕೆಲವೊಂದು ಜ್ಯೂಸ್ ಮನೆ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ. ಹಣ್ಣು-ತರಕಾರಿಗಳಿಂದ ತಯಾರಿಸಿದ ತಾಜಾ ಜ್ಯೂಸ್ ಬಾಯಿಯ ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೊಗ್ಯಕ್ಕೂ ತುಂಬಾ ಒಳ್ಳೆಯದು. ಈ ಜ್ಯೂಸ್ ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಜ್ಯೂಸ್ ಗಳನ್ನೂ ಅನೇಕ ವಿಧಗಳಾಗಿ ವಿಂಗಡಿಸಬಹುದು. ತ್ವಚೆಯ ಆರೋಗ್ಯ ಹೆಚ್ಚಿಸುವ ಜ್ಯೂಸ್, ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಜ್ಯೂಸ್, ಜೀರ್ಣಕ್ರಿಯೆಯನ್ನು ವೃದ್ಧಿಸುವ ಜ್ಯೂಸ್ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಇಲ್ಲಿ ನಾವು ಒಂದು ಡಿಟಾಕ್ಸ್ ಜ್ಯೂಸ್ ರೆಸಿಪಿ ನೀಡಿದ್ದೇವೆ. ದೇಹದಲ್ಲಿ ಕಲ್ಮಶವಿದ್ದರೆ ಮುಖದಲ್ಲಿ ಮೊಡವೆ, ಮುಂತಾದ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ ಜೀರ್ಣಕ್ರಿಯೆಗೆ ತೊಂದರೆ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡು ಬರುವುದು. ಆದ್ದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವುದು ಒಳ್ಳೆಯದು. ಈ ಡಿಟಾಕ್ಸ್ ಜ್ಯೂಸ್ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ:

Detox Juice Recipe

ಬೇಕಾಗುವ ಸಾಮಾಗ್ರಿಗಳು
ಚಿಕ್ಕ ತುಂಡು ಶುಂಠಿ
ಬೀಟ್ ರೂಟ್ 1
ಕ್ಯಾರೆಟ್ 1
ಆಪಲ್ 1

ತಯಾರಿಸುವ ವಿಧಾನ

* ಈ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿದರೆ ಜ್ಯೂಸ್ ರೆಡಿ.

ಈ ಡಿಟಾಕ್ಸ್ ಜ್ಯೂಸ್ ಕುಡಿದರೆ ದೊರೆಯುವ ಪ್ರಯೋಜನಗಳು

* ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

* ಕ್ಯಾರೆಟ್ ತ್ವಚೆ ಕಾಂತಿ ಹೆಚ್ಚಿಸುತ್ತದೆ.

* ಬೀಟ್ ರೂಟ್ ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

* ಆಪಲ್ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

English summary

Detox Juice Recipe | Variety Of Juice Recipe | ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವ ಜ್ಯೂಸ್ | ಅನೇಕ ಬಗೆಯ ಜ್ಯೂಸ್ ನ ರೆಸಿಪಿ

High-fiber root veggies and fruit keep things moving through the digestive tract, while ginger calms your stomach.
X
Desktop Bottom Promotion