For Quick Alerts
ALLOW NOTIFICATIONS  
For Daily Alerts

ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!

|

ಬೇಸಿಗೆಯ ಬಿಸಿಯನ್ನು ಶಮನಗೊಳಿಸುವ ಲಸ್ಸಿಯನ್ನು ಭಾರತದಾದ್ಯಂತ ಹೆಚ್ಚಾಗಿ ತಯಾರಿಸುತ್ತಾರೆ. ಲಸ್ಸಿಯು ದೇಹದ ಉಷ್ಣವನ್ನು ನಿವಾರಿಸಿ ತಂಪನ್ನು ನೀಡುತ್ತದೆ. ಮನೆಯಲ್ಲೇ ತಯಾರಿಸಬಹುದಾದ ಹಲವಾರು ವಿಧದ ಲಸ್ಸಿ ಪ್ರಕಾರಗಳಿವೆ.

ಸಾಂಪ್ರದಾಯಿಕ ಲಸ್ಸಿಯಿಂದ ಹಿಡಿದು ಸುವಾಸನೆಯುಕ್ತ ಲಸ್ಸಿಯನ್ನು ನಿಮಗೆ ಮನೆಯಲ್ಲೇ ತಯಾರಿಸಬಹುದು. ಮಾವು, ಚಾಕಲೇಟ್, ಲಿಟ್ಚಿ, ಬಾಳೆಹಣ್ಣು ಮೊದಲಾದ ಹಣ್ಣುಗಳನ್ನು ಸೇರಿಸಿ ಬೇಸಿಗೆ ಸೀಸನ್‌ನ ರುಚಿಯಾದ ಲಸ್ಸಿಯನ್ನು ನಿಮಗೆ ಮಾಡಿಕೊಳ್ಳಬಹುದು.

Chilled Matka Lassi Recipe

ಕೇವಲ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ಲಸ್ಸಿ ರೆಸಿಪಿ ಬೇಸಿಗೆಯಲ್ಲಿ ತಂಪನ್ನು ನೀಡುವುದರೊಂದಿಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಮಡಿಕೆಯಲ್ಲಿ ಲಸ್ಸಿ ತಯಾರಿಸಿ ಸರಬರಾಜು ಮಾಡುವುದು ವಾಡಿಕೆ. ಇದುವೇ ಮಟ್ಕಾ ಲಸ್ಸಿ.

ಮಟ್ಕಾ ಲಸ್ಸಿಯಂತೂ ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದು ವಿಶೇಸವಾಗಿ ರಾಜಸ್ತಾನ, ದೆಹಲಿ ಮತ್ತು ಪಂಜಾಬ್‌ನಲ್ಲಿ ಮಟ್ಕಾ ಲಸ್ಸಿಗೆ ಉತ್ತಮ ಬೇಡಿಕೆ ಇದೆ. ಇಂದಿನ ಲೇಖನ ಮಟ್ಕಾ ಲಸ್ಸಿಯ ತಯಾರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಬೇಸಿಗೆಯ ಬೇಗೆಯನ್ನು ನಿವಾರಿಸುವ ಮಟ್ಕಾ ಲಸ್ಸಿಯನ್ನು ತಯಾರಿಸಿ ಆಸ್ವಾದಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು

ಪ್ರಮಾಣ: 2
ಸಿದ್ಧತಾ ಸಮಯ : 10 ನಿಮಿಷಗಳು
ಸಾಮಾಗ್ರಿಗಳು
1. ಮೊಸರು - 1 ಕಪ್
2.ಸಕ್ಕರೆ - 3 ಸ್ಪೂನ್
3.ರೋಸ್‌ವಾಟರ್ - 2 ಹನಿಗಳು
4.ಏಲಕ್ಕಿ ಹುಡಿ - ಸ್ವಲ್ಪ
5.ಕೇಸರಿ - ಕೆಲವು ಬೇರುಗಳು
6.ತಾಜಾ ದಪ್ಪನೆಯ ಕ್ರೀಂ - 1 ಸ್ಪೂನ್
7. ನೀರು - 1/2 ಕಪ್
8.ಐಸ್ ತುಂಡುಗಳು - 3-4

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತಂಪಾದ ಲಸ್ಸಿಯ ಆರೋಗ್ಯಕಾರಿ ಪ್ರಯೋಜನಗಳು

ಮಾಡುವ ವಿಧಾನ:
1.ಮೊಸರನ್ನು ಒಂದು ಪಾತ್ರೆಗೆ ಹಾಕಿ ಅದನ್ನು ಚೆನ್ನಾಗಿ ಕಲಸಿ ಕ್ರೀಮಿಯನ್ನಾಗಿ ಮಾಡಿ. ಮೊಸರನ್ನು ಅರಿಸಿಕೊಳ್ಳಿ. ಚೆನ್ನಾಗಿ ಹಿಂಡಿ ಅರಿಸಿದ ಮೊಸರನ್ನು ಪಾತ್ರೆಗೆ ಹಾಕಿ.

2.ನೀರು ಮತ್ತು ರೋಸ್ ವಾಟರ್ ಬೆರೆಸಿ. ಮಿಶ್ರ ಮಾಡಿಕೊಂಡು ಸಕ್ಕರೆ ಹಾಕಿ.

3.ಸಕ್ಕರೆ ಕರಗುವವರೆಗೆ ಚೆನ್ನಾಗಿ ಕಲಸುತ್ತಿರಿ. ನೀವು ಅವಸರದಲ್ಲಿದ್ದರೆ ನೀರು ಹಾಗೂ ಸಕ್ಕರೆ ಬೆರೆಸಿ ಅರಿಸಿಕೊಂಡ ಮೊಸರನ್ನು ಮಿಕ್ಸಿಯಲ್ಲಿ ಕಡೆಯಿರಿ.

4.ಇದೀಗ ಲಸ್ಸಿಯನ್ನು ಚೆನ್ನಾಗಿ ಕಲಸಿ. ನಂತರ ಅದನ್ನು ಮಡಿಕೆಗೆ ವರ್ಗಾಯಿಸಿ.

ಮಟ್ಕಾ ಲಸ್ಸಿ ಸವಿಯಲು ಸಿದ್ಧವಾಗಿದೆ. ಏಲಕ್ಕಿ ಹುಡಿ, ಬಾದಾಮಿ ಮತ್ತು ಕೇಸರಿ ದಳಗಳಿಂದ ಅಲಂಕರಿಸಿ. ನಿಮಗೆ ಬೇಕಿದ್ದಲ್ಲಿ ಕೇಸರಿ ದಳಗಳನ್ನು ಹಾಲಿನಲ್ಲಿ 10 -15 ನಿಮಿಷಗಳ ಕಾಲ ನೆನೆಸಿ ಮೊಸರನ್ನು ಮಿಕ್ಸಿಯಲ್ಲಿ ಕಡೆಯುವಾಗ ಸೇರಿಸಿಕೊಳ್ಳಬಹುದು.

English summary

Chilled Matka Lassi Recipe

Lassi is one of the most common Indian summer drinks which is prepared in almost every household. Drinking lassi during summers is healthy for the body. Lassi prevents body heat and helps in cooling oneself.
Story first published: Saturday, April 5, 2014, 13:17 [IST]
X
Desktop Bottom Promotion