For Quick Alerts
ALLOW NOTIFICATIONS  
For Daily Alerts

ಅದ್ಭುತ ಗುಣದ ಈ 12 ಬಗೆಯ ಟೀ ಟೇಸ್ಟ್ ಮಾಡಿರುವಿರಾ?

|

ನಮ್ಮಲ್ಲಿ ಹೆಚ್ಚಿನವರಿಗೆ ಟೀ ಕುಡಿಯುವ ಅಭ್ಯಾಸವಿರುತ್ತದೆ. ದಿನದಲ್ಲಿ 2 ಲೋಟ ಟೀ ಕುಡಿದರೆ ಟೀ ನಮ್ಮಲ್ಲಿ ಚೈತನ್ಯದಿಂದ ಇರುತ್ತೇವೆ. ಕೆಲವರಿಗೆ ಟೀ ಕುಡಿಯುವುದು ಚಟವಾಗಿರುತ್ತದೆ, ದಿನದಲ್ಲಿ ಕಮ್ಮಿಯೆಂದರೂ 7-8 ಲೋಟ ಟೀ ಕುಡಿಯುತ್ತಾರೆ. ಆದರೆ ಮಿತಿ ಮೀರಿ ಟೀ ಕುಡಿಯುವ ಚಟವಿದ್ದರೆ ಅದಕ್ಕೆ ಕಡಿವಾಣ ಹಾಕುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಈ ವಿಷಯದ ಬಗ್ಗೆ ಮತ್ತೊಮ್ಮೆ ಚರ್ಚಿಸೋಣ, ಇಲ್ಲಿ ನಾ ಹೇಳ ಹೊರಟಿರುವುದು ವಿವಿಧ ಬಗೆಯ ಟೀಗಳ ಬಗ್ಗೆ. ನಮ್ಮಲ್ಲಿ ಹೆಚ್ಚಿನವರಿಗೆ ಹಾಲು ಹಾಕಿ ಮಾಡುವ ಟೀ, ಬ್ಲ್ಯಾಕ್ ಟೀ, ಲೆಮನ್ ಟೀ, ಶುಂಠಿ ಟೀ, ಇನ್ನು ಕೆಲವರಿಗೆ ಗ್ರೀನ್ ಟೀ ಇವುಗಳ ಬಗ್ಗೆ ಗೊತ್ತಿರುತ್ತದೆ. ಇದಲ್ಲದೆ ಇನ್ನು ಅನೇಕ ಟೀಗಳಿವೆ, ಪ್ರತಿಯೊಂದು ಟೀ ತನ್ನದೇ ಆದ ಆರೋಗ್ಯಕರ ಗುಣವನ್ನು ಹೊಂದಿದೆ. ಆ ಟೀಗಳನ್ನು ಇದುವರೆಗೆ ಟೇಸ್ಟ್ ಮಾಡಿಲ್ಲವೆಂದರೆ ಒಮ್ಮೆ ಟೇಸ್ಟ್ ಮಾಡಿ ನೋಡಿ.

ಇಲ್ಲಿ ನಾವು ವಿವಿಧ ಬಗೆಯ ಟೀ ಬಗ್ಗೆ ಹೇಳಿದ್ದೇವೆ ನೋಡಿ:
ಸೂಚನೆ: ಇಲ್ಲಿರುವ ಟೀಯ ರೆಸಿಪಿಗಳನ್ನು ಸದ್ಯದಲ್ಲಿಯೇ ನಿಮಗೆ ನೀಡಲಿದ್ದೇವೆ.

ದೊಡ್ಡ ಪತ್ರೆ ಎಲೆಯ ಟೀ

ದೊಡ್ಡ ಪತ್ರೆ ಎಲೆಯ ಟೀ

ಇದು ತುಂಬಾ ಪ್ರಸಿದ್ಧವಾದ ಹರ್ಬಲ್ ಟೀಯಾಗಿದೆ. ಇದರಲ್ಲಿ ವಿಟಮಿನ್ ಕೆ ಇದ್ದು ಇನ್ನು ವಿಟಮಿನ್ ಕೆ ಕೊರತೆ ಇರುವವರು ಇದನ್ನು ಕುಡಿಯುವುದು ಒಳ್ಳೆಯದು.

 ರೆಡ್ ಕ್ಲವರ್ ಟೀ(red clover tea)

ರೆಡ್ ಕ್ಲವರ್ ಟೀ(red clover tea)

ಈ ಟೀ ಅಮೇರಿಕ್ದಲ್ಲಿ ಫೇಮಸ್. ಊಟದ ನಂತರ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ನೀವು ಅಮೇರಿಕದಲ್ಲಿದ್ದರೆ ಅಥವಾ ಅಮೇರಿಕಕ್ಕೆ ಹೋದಾಗ ಇದರ ಟೇಸ್ಟ್ ನೋಡಲು ಮರೆಯದಿರಿ.

ಹಣ್ಣು ಹಾಕಿ ಮಾಡುವ ಟೀ

ಹಣ್ಣು ಹಾಕಿ ಮಾಡುವ ಟೀ

ಈ ರೀತಿಯ ಟೀಯನ್ನು ಟ್ರೈ ಮಾಡಿಲ್ಲವೆಂದರೆ ಒಮ್ಮೆ ಮಾಡಿ ನೋಡಿ. ಈ ಫ್ರೂಟ್ ಮಿಕ್ಸ್ ಟೀಗೆ ಐಸ್ ಹಾಕಿ ಕುಡಿದರೆ ಮತ್ತಷ್ಟು ಆರೋಗ್ಯಕರವಾಗಿರುತ್ತದೆ.

ತುಳಸಿ ಟೀ

ತುಳಸಿ ಟೀ

ಉಸಿರಾಟದ ತೊಂದರೆ ಇರುವವರಿಗೆ ಈ ಟೀಯ ಆಯ್ಕೆ ಬೆಸ್ಟ್. ಇದು ಕಿವಿ, ಮೂಗು ಮತ್ತು ಗಂಟಲನ್ನು ಸೋಂಕಾಣುಗಳ ದಾಳಿಯಿಂದ ರಕ್ಷಿಸುತ್ತದೆ.

ಚಕ್ಕೆ ಟೀ

ಚಕ್ಕೆ ಟೀ

ತೂಕ ಕಮ್ಮಿ ಮಾಡುವಲ್ಲಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಈ ಟೀ ತುಂಬಾ ಪರಿಣಾಮಕಾರಿ.

 ದಾಸವಾಳ ಹೂವಿನ ಟೀ

ದಾಸವಾಳ ಹೂವಿನ ಟೀ

ಈಜಿಪ್ಟ್ ನ ಮದುವೆಗಳಲ್ಲಿ ಈ ಟೀ ಸರ್ವ್ ಮಾಡುತ್ತಾರಂತೆ. ಈ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 ಗಸೆಗಸೆ ಟೀ

ಗಸೆಗಸೆ ಟೀ

ಗಸೆಗಸೆ ಪಾಯಸದ ರುಚಿ ಎಲ್ಲರಿಗೆ ಗಪತ್ತಿರುತ್ತದೆ. ಆದರೆ ಗಸೆಗಸೆ ಟೀ ರುಚಿ ನೋಡಿದ್ದೀರಾ ಇಲ್ಲ ಅಂದರೆ ಒಮ್ಮೆ ಟ್ರೈ ಮಾಡಿ. ಹೊಟ್ಟೆ ಸಂಬಂಧಿ ಸಮಸ್ಯೆ ಹೋಗಲಾಡಿಸುವಲ್ಲಿ ಈ ಟೀ ತುಂಬಾ ಸಹಾಯಕಾರಿ.

ಮಸಾಲ ಟೀ

ಮಸಾಲ ಟೀ

ಶೀತ, ನೆಗಡಿ ಹೋಗಲಾಡಿಸಲು ಮಸಾಲ ಟೀ ಮಾಡಿ ಕುಡಿಯುವುದು ಬೆಸ್ಟ್. ಮಸಾಲೆ ಟೀಯನ್ನು ಶುಂಠಿ, ಚಕ್ಕೆ, ತುಳಸಿ ಇವುಗಳನ್ನು ಹಾಕಿ ತಯಾರಿಸಲಾಗುವುದು.

ಲಿಚಿ ಟೀ

ಲಿಚಿ ಟೀ

ಲಿಚಿ ಸೀಸನ್ ಹಣ್ಣಾಗಿದ್ದು ಇದರಿಂದ ಟೀ ತಯಾರಿಸಬಹುದು. ರೆಸಿಪಿಗೆ ಕ್ಲಿಕ್ ಮಾಡಿ.

ಕ್ಹಾವಾ ಟೀ(kahwa)

ಕ್ಹಾವಾ ಟೀ(kahwa)

ಇದು ಕಾಶ್ಮೀರಿ ಸ್ಪೆಷಲ್ ಟೀಯಾಗಿದ್ದು, ಬಾದಾಮಿ ಮತ್ತು ಕೇಸರಿ ಹಾಕಿ ಮಾಡುವ ಈ ಟೀಯ ಟೇಸ್ಟ್ ಮಾಡಿಲ್ಲವೆಂದರೆ ಒಮ್ಮೆ ಟ್ರೈ ಮಾಡಿ.

ಮಲೇಷ್ಯಾಯನ್ ವಿಂಟರ್ ಮೆಲನ್ ಟೀ

ಮಲೇಷ್ಯಾಯನ್ ವಿಂಟರ್ ಮೆಲನ್ ಟೀ

ಬೂದಿ ಕುಂಬಳಕಾಯಿ ಮತ್ತು ಏಲಕ್ಕಿ ಹಾಕಿ ಈ ಟೀ ಮಾಡಲಾಗುವುದು.

ಕಹಿ ಬೇವಿನ ಎಲೆ ಮತ್ತು ನಿಂಬೆ ರಸ ಹಾಕಿ ಮಾಡುವ ಟೀ

ಕಹಿ ಬೇವಿನ ಎಲೆ ಮತ್ತು ನಿಂಬೆ ರಸ ಹಾಕಿ ಮಾಡುವ ಟೀ

ಹೊಟ್ಟೆಯಲ್ಲಿರುವ ಜಂತು ಹುಳಗಳನ್ನು ಹೋಗಲಾಡಿಸಲು ಈ ಟೀ ಕುಡಿಯುವುದು ಬೆಸ್ಟ್.

Read more about: tea drinks ಟೀ ಪಾನೀಯಾ
English summary

Amazing Tea Recipes To Try Out!

Till now how many variety of tea you have tasted? 3-4? But here we have listed more than 10 variety of tea, that you can try out.
Story first published: Wednesday, September 25, 2013, 10:44 [IST]
X
Desktop Bottom Promotion