For Quick Alerts
ALLOW NOTIFICATIONS  
For Daily Alerts

ಬಾಯಾರಿಕೆ ನೀಗಿಸುವ 2 ಮೊಸರು ಸ್ಮೂತಿ ರೆಸಿಪಿ

|

ಜ್ಯೂಸ್, ಐಸ್ ಕ್ರೀಮ್ , ಸ್ಮೂತಿ ಈ ರೀತಿಯ ಆಹಾರಗಳಿಗೆ ಬೇಸಿಗೆ ಕಾಲದಲ್ಲಿ ತುಂಬಾ ಬೇಡಿಕೆ. ತುಂಬಾ ಬಾಯಾರಿಕೆಯಾದಾಗ ಈ ರೀತಿಯ ಜ್ಯೂಸ್ ಕುಡಿದರೆ ಹಾಯಾನಿಸುತ್ತದೆ.

ಇಲ್ಲಿ ನಾವು ಈ ಬೇಸಿಗೆಯಲ್ಲಿ ನಿಮ್ಮ ಬಾಯಾರಿಕೆಯನ್ನು ನೀಗಿಸಿ, ಆರೋಗ್ಯವನ್ನು ವೃದ್ಧಿಸುವ 2 ಸ್ಮೂತಿ ರೆಸಿಪಿ ನೀಡಿದ್ದೇವೆ ನೋಡಿ:

2 Tasty Yogurt Smoothie Recipes

ದ್ರಾಕ್ಷಿ ಬಾಳೆ ಹಣ್ಣಿನ ಸ್ಮೂತಿ
ಬೇಕಾಗುವ ಸಾಮಾಗ್ರಿಗಳು

ಮೊಸರು 1 ಕಪ್
ದ್ರಾಕ್ಷಿ 1 ಕಪ್
ಬಾಳೆ ಹಣ್ಣು 2-3
ಸಕ್ಕರೆ 4 ಚಮಚ
ಐಸ್ ಕ್ಯೂಬ್ಸ್ (ಬೇಕಿದ್ದರೆ)

ತಯಾರಿಸುವ ವಿಧಾನ:

* ಮೊಸರನ್ನು ಚೆನ್ನಾಗಿ ಕದಡಿ. ಈಗ ಮೊಸರಿಗೆ ದ್ರಾಕ್ಷಿ, ಬಾಳೆ ಹಣ್ಣು ಹಾಕಿ ಸಕ್ಕರೆ ಹಾಕಿ ರುಬ್ಬಿ.

* ನಂತರ ಸೋಸಿ, ಗ್ಲಾಸಿಗೆ ಹಾಕಿ ಬೇಕಿದ್ದರೆ ಐಸ್ ಕ್ಯೂಬ್ಸ್ ಹಾಕಿದರೆ ರುಚಿಕರವಾದ ದ್ರಾಕ್ಷಿ ಬಾಳೆ ಹಣ್ಣಿನ ಸ್ಮೂತಿ ರೆಡಿ.

ಕಿವಿ, ಮೊಸರು, ಸ್ಟ್ರಾಬೆರಿ ಸ್ಮೂತಿ
ಬೇಕಾಗುವ ಸಾಮಾಗ್ರಿಗಳು

1 ಕಪ್ ಮೊಸರು
ಕಿವಿ ಹಣ್ಣು 1
ಸ್ಟ್ರಾಬೆರಿ 1 ಕಪ್
ಸಕ್ಕರೆ 4 ಚಮಚ

ತಯಾರಿಸುವ ವಿಧಾನ:
* ಮೊಸರನ್ನು ಚೆನ್ನಾಗಿ ಕದಡಿ, ಅ್ವಲ್ಪ ನೀರು ಹಾಕಿ, ಸ್ಟ್ರಾಬೆರಿ, ಕಿವಿ ಹಣ್ಣಿನ ಪೀಸ್ ಹಾಗೂ ಸಕ್ಕರೆ ಹಾಕಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಸೋಸಿ ಗ್ಲಾಸಿಗೆ ಸುರಿದರೆ ರುಚಿಕರವಾದ ಸ್ಮೂತಿ ರೆಡಿ.

English summary

2 Tasty Yogurt Smoothie Recipes | Variety Of Drink Recipe | ರುಚಿಕರವಾದ 2 ಸ್ಮೂತಿ ರೆಸಿಪಿ | ಅನೇಕ ಬಗೆಯ ಪಾನೀಯಾಗಳ ರೆಸಿಪಿ

If you workout and want to boost your stamina, have a glass of smoothie. A glass of fruity smoothie can be a great treat to boost up a lazy morning! Here are two simple recipes to make yogurt smoothies using fresh fruits.
Story first published: Tuesday, April 2, 2013, 14:39 [IST]
X
Desktop Bottom Promotion