For Quick Alerts
ALLOW NOTIFICATIONS  
For Daily Alerts

ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ

By * ಚಂದನ, ತುಮಕೂರು
|
Low calory Cabbage soup to reduce weight
ಪ್ರೀತಿ ಏಕೆ ಭೂಮಿ ಮೇಲಿದೆಯಂಥ ದುಂಡಗಿನ ಆಕೃತಿಯುಳ್ಳವರು ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಬೇಕೆಂದರೆ ಇಲ್ಲಿದೆ ಸಖತ್ ಉಪಾಯ. ಕಡಿಮೆ ಕ್ಯಾಲೋರಿಯುಳ್ಳ ಎಲೆಕೋಸಿನ ಸೂಪ್ ಅಥವಾ ಕ್ಯಾಬೇಜ್ ಸೂಪ್ ಪ್ರತಿದಿನ ಹೀರಿದರೆ ವಾರಕ್ಕೆ ಹದಿನೈದು ಕೇಜಿಯಷ್ಟು ತೂಕವನ್ನು ಇಳಿಸಿಕೊಳ್ಳಬಹುದು.

ಡಯಟ್ ಮಾಡುವ ಯೋಚನೆಯುಳ್ಳವರು ಯಾವುದೇ ಕಾಲದಲ್ಲಿ ಸಿಗಬಹುದಾದ ಕ್ಯಾಬಿಜ್ ಸೂಪನ್ನು ಮನೆಯಲ್ಲೇ ತಯಾರಿಸಿ ನಿಯಮಿತವಾಗಿ ತೆಗೆದುಕೊಂಡರೆ ತೂಕವಿಳಿಸಿಕೊಂಡು ಅಂದದ ಆಕಾರ ಪಡೆದುಕೊಳ್ಳಬಹುದು ಮತ್ತು ಆರೋಗ್ಯವಂತರಾಗಿ ಕಾಣಬಹುದು. ಬನ್ನಿ ತಯಾರಿಸೋಣ ಎಲೆಕೋಸು ಸೂಪ್.

ಬೇಕಾಗುವ ಪದಾರ್ಥಗಳು

ಎಲೆಕೋಸು ಸಣ್ಣ ಗಾತ್ರದ್ದು | ಹಸಿ ಶುಂಠಿ ಹೆಬ್ಬೆರಳಿನಷ್ಟು | ಬೆಳ್ಳುಳ್ಳಿ ಮೂರು ಎಸಳು | ಕಾರ್ನ್ ಫ್ಲೋರ್ ಐದಾರು ಚಮಚ | ಈರುಳ್ಳಿ 1 | ಸೋಯಾ ಸಾಸ್ | ಚಿಲ್ಲಿ ಸಾಸ್ | ಮೆಣಸಿನ ಪುಡಿ | ಎಣ್ಣೆ | ಉಪ್ಪು

ತಯಾರಿಸುವ ವಿಧಾನ

ಎಲೆಕೋಸಿನ ಎಲೆಗಳನ್ನು ಬಿಡಿಸಿಟ್ಟುಕೊಂಡು ಸಣ್ಣದಾಗಿ ಹೆಚ್ಚಿಟ್ಟುಕೊಂಡು ನೀರಿನಲ್ಲಿ ನೆನೆಸಿಡಿ, ಬೇಕಿದ್ದರೆ ಚಿಟಿಕೆ ಅರಿಷಿಣ ಪುಡಿ ಹಾಕಿಡಿ. ತೊಳೆದ ಹಸಿ ಶುಂಠಿ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇವೆರಡು ಮತ್ತು ಸುಲಿದಿಟ್ಟ ಬೆಳ್ಳುಳ್ಳಿಯನ್ನು ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಹುರಿದಿಟ್ಟುಕೊಳ್ಳಿ.

ನೆನೆಸಿಟ್ಟ ನೀರನ್ನು ತೆಗೆದು ಎಲೆಕೋಸನ್ನು ಮತ್ತೊಂದು ಪಾತ್ರೆಯಲ್ಲಿ ಮೂರು ಲೋಟ ನೀರು ಹಾಕಿ ಹದಿನೈದು ನಿಮಿಷ ಕುದಿಸಿರಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಒಗ್ಗರಣೆ, ಸೋಯಾ ಸಾಸ್, ಚಿಲ್ಲಿ ಸಾಸ್, ಮೆಣಿಸಿನ ಪುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಮತ್ತೆ ಐದು ನಿಮಿಷ ಕುದಿಸಿರಿ.

ಮತ್ತೊಂದೆಡೆ ಒಂದು ಪಾತ್ರೆಯಲ್ಲಿ ನೀರು ಮತ್ತು ಕಾರ್ನಫ್ಲೋರ್ ಸೇರಿಸಿ ನೀರು ಪೇಸ್ಟಿನಂತೆ ತಯಾರಿಸಿ. ಇದನ್ನು ಕುದಿಯುತ್ತಿರುವ ಎಲೆಕೋಸಿನ ಪಾತ್ರೆಗೆ ಸೇರಿಸಿ ಒಂದೆರಡು ನಿಮಿಷ ಕುದಿಸಿ. ಕ್ಯಾಬೇಜ್ ಸೂಪನ್ನು ಬಿಸಿಯಿರುವಾಗಲೇ ಊಟಕ್ಕೆ ಮೊದಲು ಕುಡಿಯಲು ನೀಡಿ. ಇದನ್ನು ದಿನಕ್ಕೆ ಎರಡು ಬಾರಿಯಂತೆ ಏಳು ದಿನ ಕುಡಿದರೆ ಎಂಬತ್ತಿರೋರು ನೋಡನೋಡುತ್ತಲೆ ಅರವತ್ತೈದಕ್ಕಿಳಿದಿರುತ್ತೀರಿ.

Story first published: Wednesday, May 26, 2010, 14:14 [IST]
X
Desktop Bottom Promotion