For Quick Alerts
ALLOW NOTIFICATIONS  
For Daily Alerts

ವಾವ್! ಕಲ್ಲಂಗಡಿ ಐಸ್ ಕ್ಯಾಂಡಿ ಸೋ ಕೂಲ್

By Super
|

ಐಸ್ ಕ್ಯಾಂಡಿ ಕಂಡರೆ ಸಾಕು ಅದನ್ನು ತೆಗೆದುಕೊಡುವವರೆಗೆ ಮಕ್ಕಳು ಐಸ್ ಕ್ಯಾಂಡಿ ಗಾಡಿ ಅಥವಾ ಪಾರ್ಲರ್ ಮುಂದೆ ಮುಷ್ಕರ ಕೂತು ಬಿಡುತ್ತಾರೆ. ಅವರನ್ನು ಕರೆದರೂ, ಬೈಯ್ದರೂ ಬರುವುದಿಲ್ಲ, ಐಸ್ ಕ್ಯಾಂಡಿನಲ್ಲಿ ಕೃತಕ ಬಣ್ಣ ಹಾಕಿರುವುದರಿಂದ ಅದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಿಮಗೆ ಗೊತ್ತಿರುತ್ತದೆ. ಆದರೆ ನಿಮ್ಮ ಮಕ್ಕಳಿಗೆ ಗೊತ್ತಿರುವುದಿಲ್ಲ.

Watermelon Ice Candy Recipe

ಆದ್ದರಿಂದ ಮಕ್ಕಳಿಗೆ ಖುಷಿ ನೀಡುವ ಮತ್ತು ಆರೋಗ್ಯಕರ ಕ್ಯಾಂಡಿ ನೀವೆ ಏಕೆ ತಯಾರಿಸಬಾರದು? ಕಲ್ಲಂಗಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಗೊತ್ತಿರುವ ವಿಷಯ. ಇದರಿಂದ ಕ್ಯಾಂಡಿ ತಯಾರಿಸುವ ಸುಲಭ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
1. ಬೀಜ ತೆಗೆದ ಕಲ್ಲಂಗಡಿ ಹಣ್ಣು 1
2. 1/2 ಕಪ್ ಸ್ಟ್ರಾಬರಿ (ಅದನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು)
3. 1/2 ಕಪ್ ಸಕ್ಕರೆ
4. ನಾಲ್ಕು ಚಮಚ ನಿಂಬೆ ರಸ
5. ಕಡ್ಡಿಗಳು
6. ಪಾಪ್ ಮೌಲ್ಡ್ಸ್, ಅದು ಇಲ್ಲದಿದ್ದರೆ ಲೋಟಗಳು ಆದರೂ ಆದೀತು.

ತಯಾರಿಸುವ ವಿಧಾನ:

1. ಕಲ್ಲಂಗಡಿ ಮತ್ತು ಸ್ಟ್ರಾಬರಿಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಆಡಿಸಿ, ಸಕ್ಕರೆ ಹಾಕಿ, ನಿಂಬೆರಸ ಹಾಕಿ ಮಿಶ್ರ ಮಾಡಬೇಕು.

2. ಈಗ ಮಿಶ್ರಣವನ್ನು ಪಾಪ್ ಮೌಲ್ಡ್ಸ್ ಅಥವಾ ಲೋಟಕ್ಕೆ ಹಾಕಿ ಕಡ್ಡಿ ಹಾಕಿ ಫ್ರಿಜ್‌ನಲ್ಲಿ 4-5 ಗಂಟೆ ಇಟ್ಟರೆ ಐಸ್ ಕ್ಯಾಂಡಿ ರೆಡಿ.

English summary

Watermelon Ice Candy Recipe | Fruit Ice Candy Recipe | ಕಲ್ಲಂಗಡಿ ಐಸ್ ಕ್ಯಾಂಡಿ ರೆಸಿಪಿ | ಹಣ್ಣುಗಳ ಐಸ್ ಕ್ಯಾಂಡಿ ರೆಸಿಪಿ

In this summer season having watermelon is good for health. Then you don't you try to prepare watermelon ice candy. It is very healthy and children also get so much happy if you prepare this candy.
X
Desktop Bottom Promotion