For Quick Alerts
ALLOW NOTIFICATIONS  
For Daily Alerts

ಬೇಗೆ ತಣಿಸುವ ಕರಬೂಜ ಹಣ್ಣಿನ ಸೀಕರಣೆ

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Muskmelon fruit salad
ಕರ್ನಾಟಕದಲ್ಲಿ ಎಲ್ಲೆಲ್ಲೂ ಬಿಸಿಲಿನ ಝಳ, ಬೆವರಿನ ಜಳಕ, ಇಳೆ ತಣಿಸುವ ಮಳೆಯ ಸೊಲ್ಲೇ ಇಲ್ಲ. ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗಿದೆಯಾದರೂ, ಆ ಮಳೆಯಿಂದಾಗಿ ಬೇಗೆ ಇನ್ನಷ್ಟು ಜಾಸ್ತಿಯಾಗುತ್ತಿದೆ. ಇದು ಹೀಗೇ ಮುಂದುವರಿದರೆ ತಾಪಮಾನ ಎಲ್ಲಾ ರೆಕಾರ್ಡುಗಳನ್ನು ಬ್ರೇಕ್ ಮಾಡಿದರೂ ಮಾಡಬಹುದು.

ಅಷ್ಟಕ್ಕೂ ಹುಷಾರಾಗಿರಿ. ತಣ್ಣಗಾಗಲು ಕಂಡಕಂಡಲ್ಲಿ ಕಂಡಕಂಡಿದ್ದನ್ನು ಕುಡಿಯಬೇಡಿ, ತಿನ್ನಬೇಡಿ. ಕಾಲರಾ, ಹೊಟ್ಟೆಬೇನೆ ಬಂದೀತು. ಮಾರುಕಟ್ಟೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಸಿಗುವ ಬೇಸಿಗೆ ಹಣ್ಣು ಕರಬೂಜವನ್ನು ಮನೆಗೇ ತಂದು ಮಜಬೂತಾಗಿ ಸೀಕರಣೆ ಮಾಡಿ ಜಮಾಯಿಸಿ. ಬೇಕಿದ್ದರೆ ಕರಬೂಜ ಹಣ್ಣಿನ ಜ್ಯೂಸ್ ಮಾಡಿಯೂ ಕುಡಿಯಬಹುದು. ಹೀಗಿದೆ ನೋಡಿ ಕರಬೂಜ ಹಣ್ಣಿನ ಸೀಕರಣೆ ಮಾಡುವ ವಿಧಾನ.

ಬೇಕಾಗುವ ಸಾಮಗ್ರಿಗಳು

ಕರಬೂಜ ಹಣ್ಣು
ಬೆಲ್ಲದಪುಡಿ ರುಚಿಗೆ
ಅವಲಕ್ಕಿ -2 ಟೇಬಲ್ ಚಮಚ
ಹಾಲು - 1/2 ಕಪ್
ತೆಂಗಿನಹಾಲು -1/2 ಕಪ್
ಏಲಕ್ಕಿಪುಡಿ - ಸ್ವಲ್ಪ
ಜೇನುತುಪ್ಪ - 2 ಟೇಬಲ್ ಚಮಚ

ತಯಾರಿಸುವ ವಿಧಾನ

ಕರಬೂಜ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಅವಲಕ್ಕಿ, ಬೆಲ್ಲದಪುಡಿ, ತೆಂಗಿನ ಗಟ್ಟಿಹಾಲು, ಹಾಲು, ಏಲಕ್ಕಿಪುಡಿ ಮತ್ತು ಜೇನುತುಪ್ಪವನ್ನು ಹಾಕಿ, ಚೆನ್ನಾಗಿ ಬೆರೆಸಿ, ಸರ್ವ್ ಮಾಡಿ. ತಣ್ಣಗೆ ಇಷ್ಟಪಡುವವರು ಫ್ರಿಡ್ಜ್ ನಲ್ಲಿಟ್ಟು ತಿನ್ನಬಹುದು. ಸ್ವಲ್ಪೇ ಸ್ವಲ್ಪ ಐಸ್ ಕ್ರೀಂ ಹಾಕಿಕೊಂಡರೆ ರುಚಿ ಇನ್ನೂ ಜಾಸ್ತಿಯಾಗುತ್ತದೆ. [ಕೃಪೆ : ಅಡಿಗೆ ಸವಿರುಚಿ]

English summary

Summer fruit salad ideas | Muskmelon fruit salad | Karabuj seekarane recipe | ಕರಬೂಜ ಹಣ್ಣಿನ ಸೀಕರಣೆ | ಬೇಸಿಗೆ ಹಣ್ಣಗಳು

Summer fruit salad ideas : Muskmelon fruit salad or Karabuj seekarane recipe to cool down during summer by Kumuda Shankar, Saudi Arabia.
X
Desktop Bottom Promotion