For Quick Alerts
ALLOW NOTIFICATIONS  
For Daily Alerts

ತಂಪಾದ ಜೀರಾ ಮಾವಿನಕಾಯಿ ಪಾನಕ

|
Jeera Raw Mango drinks Recipe
ಮಾವಿನ ಹಣ್ಣಿನಿಂದ ಜ್ಯೂಸ್, ಮಿಲ್ಕ್ ಶೇಕ್ ತಯಾರಿಸುವುದು ಸಾಮಾನ್ಯ. ಆದರೆ ಮಾವಿನ ಕಾಯಿಯನ್ನು ಕತ್ತರಿಸಿ ಉಪ್ಪು ಖಾರ ಹಾಕಿ ತಿನ್ನುತ್ತೇವೆ ಮತ್ತು ಉಪ್ಪಿನಕಾಯಿ ಹಾಕುತ್ತೇವೆ. ಆದರೆ ಇದರಿಂದ ರುಚಿಕರವಾದ ಪಾನಕ ತಯಾರಿಸಬಹುದು. ಬೇಸಿಗೆಯಲ್ಲಿ ಸುಸ್ತಾಗಿ ಬಂದಾಗ ಈ ಪಾನಕ ಕುಡಿದರೆ ಸ್ವರ್ಗ ಅನಿಸುವುದು. ಈ ರುಚಿಕರವಾದ ಪಾನಕ ಮಾಡುವ ಸರಳ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
1. ಒಂದು ಹಸಿ ಮಾವಿನ ಕಾಯಿ
2. ಜೀರಿಗೆ ಪುಡಿ 2 ಚಮಚ
3. ಸಕ್ಕರೆ 6 ಚಮಚ
4. ಉಪ್ಪು
5. ಕೆಂಪು ಮೆಣಸಿನ ಪುಡಿ 1/2 ಚಮಚ
6. ಪುದೀನಾ ಸೊಪ್ಪು

ತಯಾರಿಸುವ ವಿಧಾನ:

1. ಮಾವಿನ ಕಾಯಿಯನ್ನು ಬೇಯಿಸಿ ನಂತರ ಅದನ್ನು ತೆಗೆದು ಆರಲು ತಣ್ಣೀರಿನಲ್ಲಿ ಇಡಬೇಕು. ನಂತರ ಅದರ ತಿರುಳನ್ನು ತೆಗೆದು ಬಟ್ಟಲಿನಲ್ಲಿ ಹಾಕಬೇಕು.

2. ಈಗ ತಿರುಳನ್ನು ಶುದ್ಧವಾದ 2 ಲೋಟ ನೀರಿನಲ್ಲಿ ಹಾಕಬೇಕು. ತಿರುಳು ಅದರಲ್ಲಿ ಕರಗಿಸಿ.

3. ಈಗ ಉಪ್ಪು, ಸಕ್ಕರೆ, ಜೀರಿಗೆ ಮತ್ತು ಮೆಣಸಿನ ಪುಡಿಯನ್ನು ಮಾವಿನ ತಿರುಳು ಹಾಕಿರುವ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

4. ನಂತರ ಇದನ್ನು ಸೋಸಿ ಫ್ರಿಜ್ ನಲ್ಲಿಟ್ಟು ಒಂದು ಗಂಟೆಯ ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿದರೆ ರುಚಿಯಾದ ಮಾವಿನ ಕಾಯಿ ಪಾನಕ ರೆಡಿ. ಇದನ್ನು ಪುದೀನಾದಿಂದ ಅಲಂಕರಿಸಿ.

English summary

Jeera Raw Mango drinks Recipe | Variety In Mango juice Recipe | ಜೀರಾ ಮಾವಿನಕಾಯಿ ಪಾನಕ ರೆಸಿಪಿ | ಮಾವಿನ ಹಣ್ಣಿನಿಂದ ನಾನಾ ಬಗೆಯ ಪಾನಕಗಳ ರೆಸಿಪಿ

Usually we use raw mango for eating with salt, spicy powder and to prepare pickle. But most of the people don't know that it will be very tasty if you prepare drinks from raw mango.
Story first published: Monday, March 12, 2012, 15:51 [IST]
X
Desktop Bottom Promotion