For Quick Alerts
ALLOW NOTIFICATIONS  
For Daily Alerts

ಸಾಬುದಾನ ತಾಲಿಪಟ್ -ವ್ರತ ರೆಸಿಪಿ

By Neha Mathur
|

ನವರಾತ್ರಿ ಸಮಯದಲ್ಲಿ ಮತ್ತು ಇತರ ಹಬ್ಬ, ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಈ ತಾಲಿಪಟ್ ರೆಸಿಪಿ ನೀಡಲಾಗಿದೆ. ನೀವು ಕೂಡ ನವರಾತ್ರಿ ಉಪವಾಸ ಸಮಯದಲ್ಲಿ ಮಾಡಬಹುದಾದ ಅಡುಗೆಯ ರೆಸಿಪಿ ಹುಡುಕಾಟದಲ್ಲಿದ್ದರೆ, ಈ ಲೇಖನದತ್ತ ಕಣ್ಣಾಡಿಸಿ.

ಇದನ್ನು ಮಾಡುವ ವಿಧಾನ ಸರಳವಾಗಿದ್ದು ಮಾಡುವುದು ಹೇಗೆಂದು ನೋಡೋಣವೇ?

Sabudana Thalipeeth For Navaratri

ಬೇಕಾಗುವ ಸಾಮಾಗ್ರಿಗಳು
ಸಾಬುದಾನ 1 ಕಪ್
ಆಲೂಗಡ್ಡೆ ಅರ್ಧ ಕಪ್ (ಬೇಯಿಸಿ, ತುರಿದ ಆಲೂಗಡ್ಡೆ)
ಕೊತ್ತಂಬರಿ 2 ಚಮಚ(ಕತ್ತರಿಸಿದ್ದು)
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 1
ರೋಸ್ಟ್ ಮಾಡಿದ ನೆಲಗಡಲೆ ಅರ್ಧ ಕಪ್
ನಿಂಬೆ ರಸ 1 ಚಮಚ
ಗೋಧಿ ಹಿಟ್ಟು ಅರ್ಧ ಕಪ್
ಎಣ್ಣೆ

ತಯಾರಿಸುವ ವಿಧಾನ:

* ಸಾಬುದಾನವನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ(8 ಗಂಟೆಗಳ ನೆನೆ ಹಾಕಿ).

* ಗೋಧಿ ಹಿಟ್ಟು ಬಿಟ್ಟು ಈಗ ಸಾಬುದಾನ ಮತ್ತು ಉಳಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.

* ನಂತರ ಅದನ್ನು ಕಡಲೆ ಹಿಟ್ಟಿನ ಜೊತೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕೆಲೆಸಿ(ಹಿಟ್ಟು ತುಂಬಾ ನೀರಾಗಬಾರದು, ಗಟ್ಟಿಯಾಗಿಯೂ ಇರಬಾರದು). ನಂತರ ಮೀಡಿಯಂ ಗಾತ್ರದಲ್ಲಿ ಉಂಡೆ ಕಟ್ಟಿ.

* ಈಗ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ ಅದರಲ್ಲಿ ಸ್ವಲ್ಪ ಉಂಡೆ ಕಟ್ಟಿದ ಹಿಟ್ಟು ಹಾಕಿ ಕೈಯಿಂದ ವೃತ್ತಾಕಾರವಾಗಿ ತಟ್ಟಿ.

* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ, ನಂತರ ತಟ್ಟಿದ ಹಿಟ್ಟನ್ನು ಹಾಕಿ ಅದರ ಮೇಲೆ ಎಣ್ಣೆ ಸವರಿ 1 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಬೇಯಿಸಿ. ತಾಲಿಪಟ್ ಬೆಂದ ನಂತರ ತೆಗೆಯಿರಿ.

ರೆಡಿಯಾದ ತಾಲಿಪಟ್ ಅಥವಾ ತಾಲಿಪಿಟ್ಟು ಅನ್ನು ಕೊತ್ತಂಬರಿ ಚಟ್ನಿ ಜೊತೆ ಸವಿಯಿರಿ.

English summary

Sabudana Thalipeeth For Navaratri

Sabudana thalipeeth is a very common recipe for fasting . The dough is similar to that of sabudana vada but the end result is very different. This can be made with very less oil on a non stick pan. Here is the recipe.
X
Desktop Bottom Promotion