For Quick Alerts
ALLOW NOTIFICATIONS  
For Daily Alerts

ಪಿತೃ ಪಕ್ಷದಂದು ಮಾಡಬಹುದಾದ ಅಡುಗೆಗಳು

|

ಇವತ್ತು ಮಹಾಲಯ ಅಮಾವಾಸ್ಯೆ. ಹಿಂದೂ ಧರ್ಮದಲ್ಲಿ ಸ್ವರ್ಗಸ್ಥರಾದ ಹಿರಿಯರನ್ನು ನೆನೆಯಲು ಮಹಾಲಯ ಅಮಾವಾಸ್ಯೆಸಕಾಲ. ಇತರ ದಿನಗಳಲ್ಲಿ ಹಿರಿಯರು ಸತ್ತ ದಿನದಂದು ಶ್ರಾದ್ಧ ಮಾಡಿದ್ದರೂ, ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಮಾಡಿ ದಾನ ಧರ್ಮ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆಂದು ಪ್ರತೀತಿ. ಯಾವುದೇ ಜಾತಿಭೇದವಿಲ್ಲದೇ ಎಲ್ಲರೂ ತಮ್ಮ ಗತಿಸಿದ ಹಿರಿಯರಿಗೆ ಈ ದಿನದಂದು ಶ್ರಾದ್ಧ ಮಾಡುತ್ತಾರೆ.

ಬೇರೆ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲು ಆಗದಿದ್ದಿದ್ದರೆ ಮಹಾಲಯ ಅಮಾವಾಸ್ಯೆಯಂದು ಮಾಡಿ ಬಡಬಗ್ಗರಿಗೆ ಅನ್ನಸಂತರ್ಪಣೆ ಮತ್ತು ದಾನಗಳನ್ನು ಮಾಡಬಹುದು. ಈ ದಿನದಂದು ಸ್ವರ್ಗಸ್ಥರಾದ ಪಿತೃದೇವತೆಗಳು ಪರಲೋಕದಿಂದ ಇಹಲೋಕಕ್ಕೆ ತಮ್ಮ ವಂಶಸ್ಥರ ಮನೆಗಳಿಗೆ ಬರುತ್ತಾರೆಂಬ ನಂಬಿಕೆಯಿದೆ.

ಈ ದಿನ ಶ್ರಾದ್ಧ ಮಾಡುವವರು ಹಬ್ಬದ ಅಡುಗೆಗಳನ್ನು ತಯಾರಿಸುತ್ತಾರೆ. ಆದರೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಅಡುಗೆಗಳನ್ನು ಮಾಡಲಾಗುವುದು. ಅದಲ್ಲದೆ ಉದ್ದಿನ ವಡೆ, ಪಾಯಸ ಹಾಗೂ ತಮ್ಮ ಹಿರಿಯರಿಗೆ ಇಷ್ಟವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಈ ಅಡುಗೆಗಳನ್ನು ತಾಮ್ರದ ಪಾತ್ರೆಯಲ್ಲಿ ಮಾಡಿ, ಬಾಳೆ ಎಲೆಯಲ್ಲಿ ಬಡಿಸಲಾಗುವುದು.

ಇಲ್ಲಿ ನಾವು ಈ ದಿನ ಸುಲಭದಲ್ಲಿ ತಯಾರಿಸಬಹುದಾದ ಕೆಲವೊಂದು ರೆಸಿಪಿ ನೀಡಿದ್ದೇವೆ ನೋಡಿ:

ಉದ್ದಿನ ವಡೆ

ಉದ್ದಿನ ವಡೆ

ಉದ್ದಿನವಡೆ ಮಾಡುವುದಕ್ಕೆ ಜಾಸ್ತಿ ಪದಾರ್ಥಗಳ ಅವಶ್ಯಕತೆಯಿಲ್ಲ. ಸ್ವಲ್ಪ ಸಮಯ ಜಾಸ್ತಿ ಇದ್ದರೆ ವಡೆ ಮಾಡುವುದು ಬ್ರಹ್ಮವಿದ್ಯೆ ಅಲ್ಲ. ಒಟ್ಟು ಏಳು ಐಟಂ ಬೇಕು. ಇಷ್ಟು ಇದ್ದರೆ ಸವಿರುಚಿಯ ಉದ್ದಿನ ವಡೆ ರೆಡಿ.

ಸೌತೆಕಾಯಿ ಸಾರು

ಸೌತೆಕಾಯಿ ಸಾರು

ಸಾಮಾನ್ಯವಾಗಿ ಈ ದಿನ ಈರುಳ್ಳಿ ಹಾಕದ ರೆಸಿಪಿಗಳನ್ನು ಮಾಡಲಾಗುವುದು. ಈರುಳ್ಳಿ ಹಾಕದೆ ಸೌತೆಕಾಯಿ ಸಾರು ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಮಿಶ್ರ ಸೊಪ್ಪಿನ ಗ್ರೇವಿ

ಮಿಶ್ರ ಸೊಪ್ಪಿನ ಗ್ರೇವಿ

ಈರುಳ್ಳಿ ಹಾಕದೆ ಮಿಶ್ರ ಸೊಪ್ಪಿನ ಗ್ರೇವಿ ಮಾಡುವ ವಿಧಾನವನ್ನು ಇಲ್ಲಿ ಹೇಳಲಾಗಿದೆ ನೋಡಿ.

ಆಲೂಜೀರಾ ಡ್ರೈ

ಆಲೂಜೀರಾ ಡ್ರೈ

ಈರುಳ್ಳಿ ಹಾಕದೆ ಮಾಡುವ ಆಲೂ ಜೀರಾ ಪಲ್ಯದ ರೆಸಿಪಿ ನೋಡಿ ಇಲ್ಲಿದೆ.

ಅವಲಕ್ಕಿ ಪಾಯಸ

ಅವಲಕ್ಕಿ ಪಾಯಸ

ಈ ದಿನ ಶ್ರಾದ್ಧಕ್ಕೆ ಪಾಯಸ ತಪ್ಪದೇ ಇರುತ್ತದೆ. ಸಾಮಾನ್ಯವಾಗಿ ಖೀರ್ ಪಾಯಸ ಮಾಡಲಾಗುವುದು, ಬೇಕಾದರೆ ಈ ಅವಲಕ್ಕಿ ಪಾಯಸ ಬೇಕಾದರೆ ಟ್ರೈ ಮಾಡಹುದು.

ಸಿಹಿ ಕುಂಬಳಕಾಯಿ ಪಾಯಸ

ಸಿಹಿ ಕುಂಬಳಕಾಯಿ ಪಾಯಸ

ಈ ದಿನದ ಅಡುಗೆಯಲ್ಲಿ ಸಿಹಿ ಕುಂಬಳಕಾಯಿಂದ ಮಾಡಿದ ಖಾದ್ಯ ಕಡ್ಡಾಯ. ನೀವು ಬೇಕಾದರೆ ಸಿಹಿ ಕುಂಬಳಕಾಯಿಯ ಪಾಯಸ ಬೇಕಾದರೂ ಮಾಡಬಹುದು.

English summary

Recipes For Pitru Paksha

During Pitru Paksha The food offerings made to the ancestors are usually cooked in silver or copper vessels and typically placed on a banana leaf or cups made of dried leaves. The food must include Kheer,Uddina vada, rice, dal (lentils) and pumpkin. 
X
Desktop Bottom Promotion