For Quick Alerts
ALLOW NOTIFICATIONS  
For Daily Alerts

ಓಣಂ ಸ್ಪೆಷೆಲ್ ಅಡುಗೆ-ಕೂಟುಕರಿ

|
Kootu Curry Recipe
ಮಲಯಾಳಿಗಳ ಹಬ್ಬವಾದ ಓಣಂಗೆ ಅವೆಲ್, ಕೂಟುಕರಿ, ಎರಿಷೇರಿ ಈ ರೀತಿಯ ಅಡುಗೆಗಳನ್ನು ಮಾಡಿದರೆ ಮಾತ್ರ 'ಓಣಂ ಸದ್ಯ' ಅಂದರೆ ಓಣಂ ಸ್ಪೆಷೆಲ್ ಅಡುಗೆ ಎಂದು ಹೇಳಲು ಸಾಧ್ಯ. ಓಣಂಗೆ ತಯಾರಿಸುವ ಪ್ರಮುಖ ಅಡುಗೆಗಳಲ್ಲಿ ಒಂದಾದ ಕೂಟುಕರಿಯ ರುಚಿ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಕಡಲೆ 1/2 ಕಪ್
ತರಕಾರಿ ಒಂದು ಕಪ್
ತೆಂಗಿನ ತುರಿ 2 ಕಪ್
ಕೊತ್ತಂಬರಿ ಪುಡಿ ಒಂದು ಚಮಚ
ಮೆಂತೆ 1/4 ಚಮಚ
ಒಣ ಕೆಂಪು ಮೆಣಸು 5-6
ಸಾಸಿವೆ 1/4 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಜೀರಿಗೆ 1/4ಚಮಚ
ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

1. ಕಡಲೆಯನ್ನು ನೀರಿನಲ್ಲಿ ಒಂದು ರಾತ್ರಿ ನೆನೆ ಹಾಕಬೇಕು.

2. ನಂತರ ಕಡಲೆ ಮತ್ತು ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.

3. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ತೆಂಗಿನ ಕಾಯಿ ತುರಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅದು ಕಂದು ಬಣ್ಣ ಬರುವಾಗ ಒಂದು ಪಾತ್ರೆಯಲ್ಲಿ ಹಾಕಿಡಬೇಕು.

4. ನಂತರ ಅದೇ ಬಾಣಲೆಯಲ್ಲಿ ಕೊತ್ತಂಬರಿ ಪುಡಿ, ಮೆಂತೆ, ಒಣ ಕೆಂಪು ಮೆಣಸು, ಅರಿಶಿಣ ಪುಡಿ, ಜೀರಿಗೆ ಹಾಕಿ ಹುರಿಯಬೇಕು. ನಂತರ ಹುರಿದ ತೆಂಗಿನ ಕಾಯಿ ತುರಿ ಮತ್ತು ಮಸಾಲೆ ಮಿಶ್ರಣಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ನುಣ್ಣನೆ ಅರೆಯಬೇಕು.

5. ನಂತರ ಅರೆದ ಮಸಾಲೆ ಪದಾರ್ಥವನ್ನು ಬೇಯಿಸಿದ ತರಕಾರಿ ಜೊತೆ ಹಾಕಿ ಮಿಶ್ರಣ ಮಾಡಿ, ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು( ಮಿಶ್ರಣ ಗಟ್ಟಿಯಾಗಿರಬೇಕು).

6. ಈಗ ಒಗ್ಗರಣೆ ಪಾತ್ರೆಯನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆಯನ್ನು ಕೂಟು ಕರಿಗೆ ಹಾಕಿದರೆ ಸವೆಯಲು ರುಚಿಕರವಾದ ಕೂಟು ಕರಿ ರೆಡಿ.

English summary

Kootu Curry Recipe | Onam Special Recipe | ಕೂಟು ಕರಿ ರೆಸಿಪಿ | ಓಣಂ ಸ್ಪೆಷೆಲ್ ಅಡುಗೆ

Kootu curry is one of the special recipe for Onam. This curry is very easy to prepare and add more taste to Onam special food.
X
Desktop Bottom Promotion