For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ

By Super
|
To beat the cold prepare natural viagra at home
ಕರ್ನಾಟಕ ಹವಾಮಾನ ಇಲಾಖೆಯ ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಉಷ್ಣಾಂಶ ದಿನೇದಿನೇ ಪ್ರಪಾತಕ್ಕೆ ಇಳಿಯುತ್ತಿದೆ. ಸಂಜೆ ನಾಲಕ್ಕು ಗಂಟೆ ಆಗುತ್ತಿದ್ದಂತೆಯೇ ಭೂಮಿಯಿಂದ ಉಷ್ಣತೆ ಆವಿಯಾಗಿ ಚಳಿಚಳಿಚಳಿ ಆಗುತ್ತಿದೆ. ಇಂಥ ಪ್ರಕೃತಿಯ ವೈಪರೀತ್ಯಗಳನ್ನು ಮೆಟ್ಟಿನಿಲ್ಲಲು ನಮಗೆ ಲಭ್ಯವಿರುವ ಉಪಾಯಗಳಲ್ಲಿ ಮನೆಯಲ್ಲೇ ತಯಾರಿಸಬಹುದಾದ ನೈಸರ್ಗಿಕ 'ವಯಾಗ್ರ' ಕೂಡ ಒಂದು. ಇದನ್ನು ಸೇವಿಸಿದರೆ ಯಾವುದೇ ಬದಿ ಪರಿಣಾಮಗಳೂ ಇರುವುದಿಲ್ಲ. ಋತುವಿಲಾಸವನ್ನು ಸವಿಯುವ ಬಗೆಯನ್ನು ಆಹಾರ ಸಂಸ್ಕೃತಿಯ ಪದರಗಳಲ್ಲಿ ಇಲ್ಲಿ ತೆರೆದಿಡಲಾಗಿದೆ. ಓದಿ ಕಲಿಯಿರಿ, ಮಾಡಿ ತಿಳಿಯಿರಿ - ದಟ್ಸ್ ಕನ್ನಡ.

ಬೇಕಾಗಿರುವುದು:

ಕಲ್ಲಂಗಡಿ ಹಣ್ಣು - ಒಂದು
ನಿಂಬೆ ಹಣ್ಣು - ಎರಡು
ಚಾಕು - ಒಂದು
ಮಿಕ್ಸರ್ - ಒಂದು
ಪಾತ್ರೆ/ ಸಾಸ್ ಪ್ಯಾನ್ - ಒಂದು
ಒಲೆ - ಒಂದು
ಬೆಂಕಿ ಪೊಟ್ಟಣ, ಕಡ್ಡಿಗಳ ಸಮೇತ ಅಥವಾ ಲೈಟರ್ - ನಿಮ್ಮ ಕೆಪಾಸಿಟಿಗೆ ತಕ್ಕ ಹಾಗೆ.

ಕೆಲಸ:

ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ. ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಲೆಯನ್ನು ಹಚ್ಚಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿರಿ. ಎಲ್ಲಿಯವರೆಗೂ ಕುದಿಯಬೇಕೆಂದರೆ - ತೀರಾ ನೀರಾಗಿರುವ ಈ ದ್ರವವು ಸ್ವಲ್ಪ ಗಟ್ಟಿಯಾಗಿ ಪಾಕದಂತಾಗುವವರೆಗೂ. ಆರಿದ ಮೇಲೆ ಒಂದು ಸಣ್ಣ ಬಾಟಲಿಯಲ್ಲಿ ಶೇಖರಿಸಿಡಿ. ಯಾವಾಗ ಕುಡಿಯಬೇಕೋ ಆಗ ಕುಡಿಯಿರಿ. ಯಾವಾಗ ಕುಡಿಯಬೇಕೆಂಬ ಪ್ರಶ್ನೆಯಿದೆಯೆಂದಾರೆ ಮುಂದೋದಿ.

ಏನು ಫಲ? ಈ ಫಲ?

ರಾತ್ರಿಯ ಯಶಸ್ವಿ ಪ್ರಣಯಕ್ಕೆ ಪ್ರಕೃತಿ ಚಿಕಿತ್ಸಕರು ಸಲಹೆ ಮಾಡುವ ಒಂದು ಪಥ್ಯ ಇದು. ಇದನ್ನು ನೈಸರ್ಗಿಕ ವಯಾಗ್ರ ಎಂದೂ ಹಲವರು ಹೇಳುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಂಡು ದೇಹವನ್ನು ಕೆಮಿಕಲ್ ಗುಡಾಣ ಮಾಡಿಕೊಳ್ಳುವುದಕ್ಕಿಂತ ಇದು ಸಾವಿರಪಾಲು ಮೇಲು.

ರಹಸ್ಯ?

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೀನ್ ಮತ್ತು ಲೈಸೊಪೀನ್ ಎಂಬ ಎರಡು ರಾಸಾಯನಿಕ ವಸ್ತುಗಳಿವೆ. ಇವುಗಳು ದೇಹದ ಎನ್‍ಜೈಮುಗಳ ಜೊತೆ ಬೆರತು ಹಿಂದೆ ಹೇಳಿದ್ದೆನಲ್ಲಾ, FSH ಮತ್ತು LH, ಇವುಗಳ ಉತ್ಪತ್ತಿಯನ್ನು ಸಾರಾಸಗಟಾಗಿ ಮಾಡುತ್ತವೆ. ಮೆಡಿಕಲ್ ಶಾಪಿನ ಕೆಮಿಕಲ್ ಭರಿತ ಔಷಧಿಗಳೂ ಮಾಡುವುದು ಇದನ್ನೇ - ಜೊತೆಗೆ ಇನ್ನಷ್ಟು ಕಾಯಿಲೆಗಳನ್ನೂ ತರಿಸಿ!!

ಹೆಚ್ಚಿನ ಮಾಹಿತಿಗಳಿಗೆ ಈ ತಾಣವನ್ನು ನೋಡಬಹುದು.
ನಿಮ್ಮ ವಯಸ್ಸೆಷ್ಟೇ ಇರಲಿ, ಆದರೆ ರಾತ್ರಿಯು ಸುಂದರಮಯವಾಗಿರಲಿ.

ಈ ಮಾಹಿತಿಗಳನ್ನೂ ಓದಿರಿ
ಚಳಿಗಾಲದಲ್ಲಿ ತಯಾರಿಸಿ ಅವರೆಕಾಳಿನ ಹುಳಿ
ಲೆವಿಟ್ರಾ ಸಿಯಾಲಿಸ್ ವಯಾಗ್ರಗಳ ಭಯಾಗ್ರಫಿ!
ವಯಾಗ್ರ : ಸುರತಕ್ರೀಡೆಯ ನಯಾಗರಾ!

English summary

Home made Viagra; Recipe and The therapy - ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ

Winter is the best season if you have the best protection. You too can Cook Viagra at home; Juice Recipe & Magic therapy. South Indian Food for thought. ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ.
X
Desktop Bottom Promotion