For Quick Alerts
ALLOW NOTIFICATIONS  
For Daily Alerts

ವಾವ್! ಸವಿಯಾದ ಮಾವಿನಕಾಯಿ ಚಟ್ನಿ

|

ಈ ಅಂಬ ಕಟ್ಟಾ ಅಥವಾ ಸಿಹಿ ಮಾವಿನಕಾಯಿ ಚಟ್ನಿ ಪಕ್ಕಾ ಒರಿಸ್ಸಾ ಶೈಲಿಯ ರೆಸಿಪಿಯಾಗಿದ್ದು ಮಾವಿನಕಾಯಿನಿಂದ ಈ ಸಿಹಿಯಾದ ಚಟ್ನಿಯನ್ನು ಮಾಡಲಾಗುವುದು! ಹುಳಿ, ಸಿಹಿ, ಖಾರ ಮಿಶ್ರಿತವಾದ ಈ ಚಟ್ನಿಯನ್ನು ಅನ್ನ, ಕಿಚಡಿ, ರೊಟ್ಟಿ ಇವುಗಳ ಜೊತೆ ತಿನ್ನಲುಸೂಪರ್ ಆಗಿರುತ್ತದೆ.

ಇದನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Sweet Mango Chutney

ಬೇಕಾಗುವ ಸಾಮಾಗ್ರಿಗಳು
2 ಮಾವಿನಕಾಯಿ
ಬೆಲ್ಲದ ಪುಡಿ ಅರ್ಧ ಕಪ್
1 ಚಮಚ ಶುಂಠಿ ಪೇಸ್ಟ್
1 ಚಮಚ ಖಾರದ ಪುಡಿ
ಅರ್ಧ ಚಮಚ ಅರಿಶಿಣ
ಸ್ವಲ್ಪ ಕರಿಬೇವಿನ ಎಲೆ
ಚಿಟಿಕೆಯಷ್ಟು ಇಂಗು
2 ಒಣ ಮೆಣಸು
1 ಚಮಚ ರೋಸ್ಟ್ ಮಾಡಿದ ಸೋಂಪು ಮತ್ತು ಮೆಂತೆ
4 ಚಮಚ ತುಪ್ಪ
ರುಚಿಗೆ ತಕ್ಕ ಉಪ್ಪು
1 ಚಮಚ ಪಂಚ ಸಂಬಾರ
ಅಂದರೆ ಮೆಂತೆ ಬೀಜ, ಕರಿ ಜೀರಿಗೆ, ಜೀರಿಗೆ, ಸಾಸಿವೆ ಮತ್ತು ಸೋಂಪು ಇವುಗಳನ್ನು ಸಮಪ್ರಮಾಣದಲ್ಲಿ ಹಾಕಿ ಪುಡಿ ಮಾಡಿದ್ದು (ಕರಿ ಜೀರಿಗೆ ಇಲ್ಲದಿದ್ದರೆ ಉಳಿದ ಪದಾರ್ಥಗಳನ್ನು ಮಾತ್ರ ಬಳಸಿ)

ತಯಾರಿಸುವ ವಿಧಾನ

* ಮಾವಿನಕಾಯಿಯ ಸಿಪ್ಪೆ ಸುಲಿದು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ.

* 2 ಚಮಚ ತುಪ್ಪವನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ. ಮಾವಿನ ಕಾಯಿ ತುಂಡುಗಳನ್ನು ಹಾಕಿ ಅವುಗಳು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ನಂತರ ಅವುಗಳನ್ನು ಮ್ಯಾಶ್ ಮಾಡಿ ಉರಿಯಿಂದ ಇಳಿಸಿ ಬದಿಯಲ್ಲಿಡಿ.

* ಈಗ 2 ಚಮಚ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣ ಮೆಣಸನ್ನು ಮುರಿದು ಹಾಕಿ, ಕರಿಬೇವಿನ ಎಲೆ ಹಾಕಿ, ನಂತರ ಶುಂಠಿ ಪೇಸ್ಟ್ ಸೇರಿಸಿ, ಇಂಗು ಹಾಕಿ ಒಂದು ನಿಮಿಷ ಪಂಚ ಸಂಬಾರ ಸೇರಿಸಿ 2 ನಿಮಿಷ ಸೌಟ್ ನಿಂದ ಆಡಿಸಿ, ಈಗ ಮ್ಯಾಶ್ ಮಾಡಿದ ಮಾವಿನಕಾಯಿ ಹಾಕಿ.

* ನಂತರ ಹಳದಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಬೆಲ್ಲದ ಪುಡಿ ಸೇರಿಸಿ 5 ನಿಮಿಷ ಫ್ರೈ ಮಾಡಿ. ಈಗ 1/2 ಕಪ್ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ 8-10 ನಿಮಿಷ ಬೇಯಿಸಿ, ನಂತರ ರೋಸ್ಟ್ ಮಾಡಿದ ಮೆಂತೆ ಮತ್ತು ಸೋಂಪನ್ನು ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
ಇಷ್ಟು ಮಾಡಿದರೆ ಸರ್ವ್ ಮಾಡಲು ಸಿಹಿ ಮಾವಿನಕಾಯಿ ಚಟ್ನಿ ರೆಡಿ.

English summary

Sweet Mango Chutney

"Amba Khatta" [Sweet Mango Chutney], this dish comes out of a typical Oriya Kitchen. It's a delicious tangy spicy chutney, which goes well with any type of main course meal (rice, khichdi, roti, paratha etc) .
X
Desktop Bottom Promotion