ಹೊಸ ರುಚಿ: ಟೊಮೇಟೊ ಬೆಳ್ಳುಳ್ಳಿ ಚಟ್ನಿ-ಸಕತ್ ರುಚಿ!

ಮನೆಯವರಿಗೂ ಸದಾ ದೋಸೆಯೊಂದಿಗೆ ಕಾಯಿಚಟ್ನಿಯನ್ನೇ ತಿಂದು ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ಅವರಿಗೆ ಸ್ವಾದಿಷ್ಟವಾದ ಟೊಮೇಟೊ ಬೆಳ್ಳುಳ್ಳಿ ಚಟ್ನಿಯನ್ನು ಬಡಿಸಲು ರೆಡಿಯಾಗಿ

By: Jaya subramanya
Subscribe to Boldsky

ಹೈದರಾಬಾದಿನಲ್ಲಿ 'ಚಟ್ನೀಸ್' ಎಂಬ ಹೆಸರಿನ ಒಂದು ಹೋಟೆಲಿದೆ. ಅಲ್ಲಿ ಕೌಂಟರಿನಲ್ಲಿ ಸಿಗುವುದೇನಿದ್ದರೂ ದೋಸೆ ಮತ್ತು ಇಡ್ಲಿಯಂತಹದ್ದು ಮಾತ್ರ. ಚಟ್ನಿ ಬೇಕೆಂದರೆ ನಡುವೆ ಇರಿಸಿರುವ ನೂರಾರು ಪ್ರಕಾರದ ಚಟ್ನಿಗಳಲ್ಲಿ ನಿಮಗಿಷ್ಟ ಬಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದಕ್ಕೆ ಕಾರಣವೇನೆಂದರೆ ನಮಗೆಲ್ಲಾ ದೋಸೆ ಇಡ್ಲಿಗಳು ಸ್ವಾದಿಷ್ಟವಾಗುವುದು ಅವುಗಳೊಂದಿಗೆ ನಂಜಿಕೊಳ್ಳುವ ಚಟ್ನಿ ಅಥವಾ ಸಾಂಬಾರುಗಳಿಂದಲೇ. ಇದನ್ನೇ ಈ ಹೋಟೆಲಿನವರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ...! ನಾಲಗೆಯ ರುಚಿ ಹೆಚ್ಚಿಸುವ ವಿವಿಧ ಬಗೆಯ ಚಟ್ನಿ     

Tomato Garlic Chutney Recipe

ಅಂತೆಯೇ ನಿಮ್ಮ ಮನೆಯವರಿಗೂ ಸದಾ ದೋಸೆಯೊಂದಿಗೆ ಕಾಯಿಚಟ್ನಿಯನ್ನೇ ತಿಂದು ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ಅವರಿಗೆ ಸ್ವಾದಿಷ್ಟವಾದ ಟೊಮೇಟೊ ಬೆಳ್ಳುಳ್ಳಿ ಚಟ್ನಿಯನ್ನು, ಮುಂದಿನ ಬಾರಿ ಬಡಿಸಿ ಅವರನ್ನು ಆಶ್ಚರ್ಯಚಕಿತಗೊಳಿಸಲು ಬೋಲ್ಡ್ ಸ್ಕೈ ತಂಡ ಈ ವಿಶೇಷವಾದ ಚಟ್ನಿಯ ರೆಸಿಪಿಯನ್ನು ಪ್ರಸ್ತುತಪಡಿಸುತ್ತಿದೆ, ಮುಂದೆ ಓದಿ......

ಪ್ರಮಾಣ - 4
*ಸಿದ್ಧತಾ ಸಮಯ - 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 15 ನಿಮಿಷಗಳು    ಊಟದ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಚಟ್ನಿ

ಸಾಮಾಗ್ರಿಗಳು
*ಟೊಮೇಟೊ - 1 ಕಪ್ (ಸಣ್ಣದಾಗಿ ಹೆಚ್ಚಿರುವಂತಹದ್ದು)
*ಬೆಳ್ಳುಳ್ಳಿ - 1 ಚಮಚ (ಸಣ್ಣದಾಗಿ ಹೆಚ್ಚಿದ್ದು)
*ಎಣ್ಣೆ - 1 ಚಮಚ 

tomato chutney

*ಸ್ಪ್ರಿಂಗ್ ಈರುಳ್ಳಿ - 1/4 ಕಪ್
*ಕಾಶ್ಮೀರಿ ಕೆಂಪು ಮೆಣಸು - 2 (ನೀರಿನಲ್ಲಿ ನೆನೆಸಿ ಹೆಚ್ಚಿದ್ದು)
*ಟೊಮೇಟೊ ಕೆಚಪ್ - 1 ಚಮಚ
*ಸ್ಪ್ರಿಂಗ್ ಈರುಳ್ಳಿ (ಹಸಿರು) - 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು)
*ಕೊತ್ತಂಬರಿ - 1 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು                      ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!   
Tomato Garlic Chutney Recipe

ಮಾಡುವ ವಿಧಾನ
* ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ ಅನ್ನು ಇದಕ್ಕೆ ಹಾಕಿ. ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಆದರೆ ಹೆಚ್ಚು ಹುರಿದುಕೊಳ್ಳಬೇಡಿ. ಇಲ್ಲದಿದ್ದರೆ ಚಟ್ನಿ ಕಹಿಯಾಗುತ್ತದೆ.

*ಈಗ, ನೆನೆಸಿದ ಕೆಂಪು ಮೆಣಸನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ನಿಮಗೆ ಟೊಮೇಟೊ ಬೇಯಲು ನೀರು ಬೇಕು ಎಂದಾದಲ್ಲಿ ನೀರು ಸೇರಿಸಿ. ಮತ್ತು ಹೆಚ್ಚಿನ ಉರಿಯಲ್ಲಿ ಬೇಯಿಸಿ. 

Tomato Garlic Chutney Recipe
 

*ಇನ್ನು ಟೊಮೇಟೊವನ್ನು ಬೇಯಿಸುವಾಗ ಅದನ್ನು ಹಿಸುಕಲು ಮರೆಯದಿರಿ. ಟೊಮೇಟೊ ಕೆಚಪ್ ಮತ್ತು ಉಪ್ಪು ಹಾಕಿ. ಟೊಮೇಟೊ ಕೆಚಪ್ ಚಟ್ನಿಗೆ ಉತ್ತಮ ಸ್ವಾದವನ್ನು ಒದಗಿಸಲಿದೆ.

Tomato Garlic Chutney Recipe
 

*ಇಷ್ಟೆಲ್ಲಾ ಆದನಂತರ, ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ಸ್ಟವ್ ಆಫ್ ಮಾಡಿ. ಚಟ್ನಿ ಸಂಪೂರ್ಣವಾಗಿ ತಣ್ಣಗಾಗಿದೆ ಎಂದಾದಲ್ಲಿ, ಇದಕ್ಕೆ ಸ್ಪ್ರಿಂಗ್ ಈರುಳ್ಲಿ ಹಾಕಿ ಮತ್ತು ಕೊತ್ತಂಬರಿ ಸೇರಿಸಿ. ಟೊಮೇಟೊ ಬೆಳ್ಳುಳ್ಳಿ ಚಟ್ನಿ ಸೇವಿಸಲು ಸಿದ್ಧವಾಗಿದೆ.

Story first published: Friday, December 2, 2016, 12:15 [IST]
English summary

Spicy Tomato Garlic Chutney Recipe

Here's the lip-smacking tomato and garlic chutney recipe that you could make to spice up your otherwise boring meals. When you make pakoras or fries, you look for some yummy dips to make them even more tastier, ain't it? Usually, you serve fries with sauce or mayonnaise. But, if you make some chutney and serve it with your dish, they definitely will taste even better.
Please Wait while comments are loading...
Subscribe Newsletter