For Quick Alerts
ALLOW NOTIFICATIONS  
For Daily Alerts

ಅನ್ನದ ಜೊತೆ ತಿನ್ನಲು ಹೀರೆಕಾಯಿ ಸಿಪ್ಪೆಯ ಚಟ್ನಿ

|

ಹೀರೆಕಾಯಿ ದೋಸೆ , ಹೀರೇ ಕಾಯಿ ಹುಳಿ, ಪಲ್ಯ, ಚಟ್ನಿ ಹೀಗೆ ನಾನಾ ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅದರಲ್ಲೂ ಹೀರೆಕಾಯಿ ಚಟ್ನಿಯನ್ನು ಅದರ ಸಿಪ್ಪೆಯಿಂದ ತಯಾರಿಸಲಾಗುವುದು.

ಹೀರೇಕಾಯಿ ಚಟ್ನಿಯನ್ನು ಅನ್ನದ ಜೊತೆ ಕಲೆಸಿ ತಿನ್ನಲು ತುಂಬಾ ರುಚಿಕರವಾಗಿದ್ದು ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಹೀರತೆಕಾಯಿ ಸಿಪ್ಪೆ
ಒಣ ಮೆಣಸು 4-5
ಉದ್ದಿನ ಬೇಳೆ ಅರ್ಧ ಚಮಚತೆಂಗಿನ ತುರಿ ಅರ್ಧ ಕಪ್
ಸ್ವಲ್ಪ ಹುಣಸೆ ಹಣ್ಣು
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಇಂಗು
ಕರಿಬೇವಿನ ಎಲೆ

ತಯಾರಿಸುವ ವಿಧಾನ

* ಹೀರೆಕಾಯಿ ಸಿಪ್ಪೆಯನ್ನು ಚಿಕ್ಕ ಬಾಣಲಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹತ್ತು ನಿಮಿಷ ಚೆನ್ನಾಗಿ ಹುರಿದ ಮೇಲೆ ಹಚ್ಚ ಹಸಿರಿನ ಬಣ್ಣ ನೀರಿನಲ್ಲಿ ಅದ್ದಿ ತೆಗೆದಂತೆ ಇರುತ್ತದೆ.

* ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ನಾಲ್ಕೈದು ಒಣಮೆಣಸು ಹಾಕಿ. ಹುರಿದು ಆ ಸಿಪ್ಪೆಯೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು ಹೀಗೆ ರುಬ್ಬುವಾಗ ಜತೆಗೆ ಸ್ವಲ್ಪ ನೆನೆಸಿಟ್ಟ ಹುಣಸೆಹಣ್ಣು, ತೆಂಗಿನಕಾಯಿ , ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿ.

* ನಂತರ ಒಗ್ಗರಣೆ ಮಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಚಟ್ನಿಗೆ ಒಗ್ಗರಣೆ ಕೊಟ್ಟರೆ ಸೂಪರ್ ಚಟ್ನಿ ರೆಡಿ.

Ridge Caurd Peel Chutney Recipe

ಗಮನಿಸಬೇಕಾದ ಅಂಶ: ಸಿಪ್ಪೆ ಕಹಿ ಇದೆಯಾ ಎಂದು ಮೊದಲು ಚೂರು ತಿಂದು ನೋಡಿಕೊಳ್ಳಿ. ಇಲ್ಲವಾದರೆ ಕಹಿಯಿಂದ ತಿನ್ನಲು ಸಾಧ್ಯವಾಗುವುದಿಲ್ಲ.

English summary

Ridge Caurd Peel Chutney Recipe | Variety Of Chutney Recipe | ಹೀರೆಕಾಯಿ ಸಿಪ್ಪೆಯ ಚಟ್ನಿ ರೆಸಿಪಿ | ಅನೇಕ ಬಗೆಯ ಚಟ್ನಿ ರೆಸಿಪಿ

Risge gaurd Peel chutney one of the awesome chutney. You can have this chuney with rice. Here is a recipe of ridge gaurd.
Story first published: Tuesday, January 15, 2013, 11:02 [IST]
X
Desktop Bottom Promotion