For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಮಿಡಿ ಉಪ್ಪಿನಕಾಯಿ

By Super
|

ಮಿಡಿ ಮಾವಿನಕಾಯಿ ಉಪ್ಪಿನಕಾಯಿ ನೋಡಿದರೆ ಯಾರ ಬಾಯಿಯಲ್ಲಿ ನೀರೂರಲ್ಲ ಹೇಳಿ? ಮಿಡಿ ಮಾವಿನಕಾಯಿಯನ್ನು ತಂದು ಅದರಿಂದ ಉಪ್ಪಿನಕಾಯಿ ಮಾಡಿ ಡಬ್ಬದಲ್ಲಿಟ್ಟರೆ ವರ್ಷದವರೆಗೆ ಇಡಬಹುದು. ತಪ್ಪದೇ ಓದಿ: ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ

ಇದು ಮಾವಿನ ಕಾಯಿಯ ಮಿಡಿ ದೊರೆಯುವ ಸಮಯ. ಈ ಸಮಯದಲ್ಲಿ ಮಿಡಿ ಉಪ್ಪಿನಕಾಯಿಯನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

Midi Uppinakayi

ಬೇಕಾಗುವ ಸಾಮಾಗ್ರಿಗಳು
50 ಚಿಕ್ಕ ಮಿಡಿ ಮಾವಿನಕಾಯಿ
ಮೆಣಸು 8-10(ಖಾರಕ್ಕೆ ತಕ್ಕಂತೆ)
1 ಕಪ್ ಉಪ್ಪು4 ಚಮಚ ಸಾಸಿವೆ
1 ಚಮಚ ಮೆಂತೆ
ಸ್ವಲ್ಪ ಇಂಗು
ಅರಿಶಿಣ ಪುಡಿ ಅರ್ಧ ಚಮಚ
2 ಚಮಚ ಅರಿಶಿಣ ಪುಡಿ

ತಯಾರಿಸುವ ವಿಧಾನ:

* ಮಾವಿನ ಮಿಡಿಯನ್ನು ತೊಳೆದು ಅದನ್ನು ಒಂದು ಬಟ್ಟೆಯಿಂದ ಒರೆಸಿ, ದೊಡ್ಡ ಗಾಜಿನ ಡಬ್ಬಿಯಲ್ಲಿ ಹಾಕಿ ಅದಕ್ಕೆ ಉಪ್ಪು ಹಾಕಿ 7 ದಿನಗಳ ಕಾಲ ಇಡಬೇಕು.

* ಈಗ ಡಬ್ಬಿಯಲ್ಲಿರುವ ನೀರನ್ನು ಬಗ್ಗಿಸಿ, ಆ ನೀರಿಗೆ ಒಣ ಮೆಣಸು, ಮೆಂತೆ, ಸಾಸಿವೆ, ಇಂಗು, ಅರಿಶಿಣ ಪುಡಿ ಹಾಕಿ ಒಂದು ಗಂಟೆ ಕಾಲ ಇಡಿ. ನಂತರ ಈ ಮಿಶ್ರಣವನ್ನು ರುಬ್ಬಿ ಮಾವಿನಕಾಯಿಗೆ ಹಾಕಿ, ಡಬ್ಬಿಯನ್ನು ಚೆನ್ನಾಗಿ ಕುಲುಕಿ ಗಾಳಿಯಾಡದಂತೆ ಮುಚ್ಚಳವನ್ನು ಮುಚ್ಚಿ 15 ದಿನದವರೆಗೆ ಇಡಿ.

* ನಂತರ ಇದಕ್ಕೆ ಒಗ್ಗರಣೆ ಕೊಟ್ಟರೆ ಅನ್ನದ ಜೊತೆ ಕಲೆಸಿ ತಿನ್ನಲು ಮಿಡಿ ಉಪ್ಪಿನಕಾಯಿ ರೆಡಿ.

English summary

Midi Uppinakayi | Variety Of Pickle Recipe | ಮಿಡಿ ಉಪ್ಪಿನಕಾಯಿ ರೆಸಿಪಿ | ಅನೇಕ ಬಗೆಯ ಉಪ್ಪಿನಕಾಯಿ ರೆಸಿಪಿ

Everyone like mango pickle. This is mango season. In this season you can try so many variety of mango pickle. Here we have given the recipe of small mango pickle.
X
Desktop Bottom Promotion