For Quick Alerts
ALLOW NOTIFICATIONS  
For Daily Alerts

ಬೇಸಿಗೆಗಾಗಿ ಸವಿಯಿರಿ ಮಾವು ಪುದೀನಾ ಚಟ್ನಿ

|

ಬೇಸಿಗೆಯು ನಿಮ್ಮ ದೇಹವನ್ನು ಬಿಸಿ ಮಾಡುವುದರೊಂದಿಗೆ ನಿಮ್ಮ ಆರೋಗ್ಯದ ಮೇಲೂ ಪರಿಣಾಮವನ್ನು ಬೀರುತ್ತಿದೆ. ಈ ಸಮಯದಲ್ಲಿ ನೀವು ದೇಹಕ್ಕೆ ಆದಷ್ಟು ತಂಪಿನ ಆಹಾರದ ಮೂಲಕ ಸಾಂತ್ವಾನವನ್ನು ನೀಡಬೇಕಾಗುತ್ತದೆ.

ಪುದೀನಾ ಅಥವಾ ಮಿಂಟ್ ದೇಹಕ್ಕೆ ತಂಪನ್ನು ಒದಗಿಸುವ ಒಂದು ಸೊಪ್ಪಾಗಿದೆ. ನಿಮ್ಮ ಬೇಸಿಗೆ ಆಹಾರದಲ್ಲಿ ಈ ಸೊಪ್ಪನ್ನು ನೀವು ಅವಶ್ಯವಾಗಿ ತೆಗೆದುಕೊಳ್ಳಲೇಬೇಕು.

Mango Mint Chutney Recipe For Summer

ಹೌದು ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ನೀಡಿರುವ ರೆಸಿಪಿ ಪುದೀನಾ ಮಾವು ಹಾಗೂ ಬೆಳ್ಳುಳ್ಳಿ ಬೆರೆಸಿ ತಯಾರಿಸಿದ ಚಟ್ನಿಯಾಗಿದೆ. ಮಾವಿನ ಕಾಯಿಯ ಸುವಾಸನೆ ಮತ್ತು ಕೂಲ್ ಪುದೀನಾವನ್ನು ಬೆರೆಸಿ ತಯಾರಿಸಿದ ಚಟ್ನಿ ನಿಮ್ಮ ದೇಹವನ್ನು ತಂಪು ಮಾಡುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮವೇ.

ಹಾಗಿದ್ದರೆ ಇನ್ನೇಕೆ ತಡ ಈ ರುಚಿಯಾದ ಮಾವು ಹಾಗೂ ಪುದೀನಾ ಚಟ್ನಿಯನ್ನು ತಯಾರಿಸಿ ಮತ್ತು ಮನೆಯವರ ಮೆಚ್ಚುಗೆ ಗಳಿಸಿ.

ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

ಪ್ರಮಾಣ: 3-4
ಸಿದ್ಧತೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
*ಹಸಿ ಮಾವಿನಕಾಯಿ - 1 (ಮಧ್ಯಮ ಗಾತ್ರದ್ದು)
*ಪುದೀನಾ ಎಲೆ - 1 ಕಟ್ಟು
*ಬೆಳ್ಳುಳ್ಳಿ - 4 ಎಸಳು
*ಉಪ್ಪು - ರುಚಿಗೆ ತಕ್ಕಷ್ಟು
*ಹಸಿಮೆಣಸು - 3
*ಹುರಿದ ಜೀರಿಗೆ ಹುಡಿ - 2 ಸ್ಪೂನ್
*ಬ್ಲ್ಯಾಕ್ ಸಾಲ್ಟ್ - 1/2 ಸ್ಪೂನ್

ಮಾಡುವ ವಿಧಾನ:
1.ಮೊದಲಿಗೆ ಮಾವಿನ ಕಾಯಿಯ ಸಿಪ್ಪೆಯನ್ನು ತೆಗೆಯಿರಿ ಹಾಗೂ ದಪ್ಪನಾಗಿ ಕತ್ತರಿಸಿಕೊಳ್ಳಿ.

2.ಕಟ್ಟಿನಿಂದ ಪುದೀನಾವನ್ನು ಬೇರ್ಪಡಿಸಿ, ತೊಳೆದು ಪಕ್ಕದಲ್ಲಿರಿಸಿ.

3.ಮಾವಿನ ತುಂಡುಗಳನ್ನು, ಪುದೀನಾ ಎಲೆಗಳನ್ನು ಹಾಗೂ ಬೆಳ್ಳುಳ್ಳಿಯನ್ನು ಜೊತೆಯಾಗಿ ಗ್ರೈಂಡರ್ ನಲ್ಲಿ ರುಬ್ಬಿಕೊಳ್ಳಿ.

4.ಸ್ವಲ್ಪ ನೀರು ಹಾಕಿಕೊಂಡು ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ.

5.ಪಾತ್ರೆಗೆ ಚಟ್ನಿಯನ್ನು ವರ್ಗಾಯಿಸಿಕೊಳ್ಳಿ ಹಾಗೂ ಬ್ಲ್ಯಾಕ್ ಸಾಲ್ಟ್, ಹುರಿದ ಜೀರಿಗೆ ಹುಡಿಯನ್ನು ಅದಕ್ಕೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

6.ಒಗ್ಗರಣೆಯನ್ನು ಗಮನಿಸಿಕೊಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ.

ಮಾವಿನ ಕಾಯಿ ಪುದೀನಾ ಚಟ್ನಿ ಇದಗ ಸಿದ್ಧವಾಗಿದೆ. ನಿಮ್ಮ ಮಧ್ಯಾಹ್ನದೂಟ ಇಲ್ಲವೇ ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೆ ಇದು ಹೇಳಿ ಮಾಡಿಸಿರುವಂಥದ್ದು.

X
Desktop Bottom Promotion