For Quick Alerts
ALLOW NOTIFICATIONS  
For Daily Alerts

ತುಂಬಾ ಟೇಸ್ಟಿ ಈ ಒಣ ಮೆಣಸಿನ ಚಟ್ನಿ

|

ಒಣ ಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಮಾಡುವ ಈ ಚಟ್ನಿ ನಿಮ್ಮ ಊಟದ ರುಚಿಯನ್ನು ಹೆಚ್ಚಿಸುತ್ತದೆ. ಈ ಚಟ್ನಿಯನ್ನು ಒಮ್ಮೆ ಮಾಡಿಟ್ಟರೆ ಒಂದು ವಾರಗಳ ಕಾಲ ಬಳಸಬಹುದು. ಜ್ವರ ಬಂದವರಿಗೆ ಸಾಮಾನ್ಯವಾಗಿ ಯಾವ ಆಹಾರ ರುಚಿಸುವುದಿಲ್ಲ, ಆದರೆ ಈ ಚಟ್ನಿ ಮಾಡಿ ಕೊಟ್ಟರೆ ಅವರ ಬಾಯಿಗೆ ಹಿಡಿಸುವುದು.

ಈ ಚಟ್ನಿ ಮಾಡುವ ವಿಧಾನ ಸರಳವಾಗಿದ್ದು, ರೆಸಿಪಿ ನೋಡಿ ಇಲ್ಲಿದೆ:

Dry Chilli And Garlic Chutney

ಬೇಕಾಗುವ ಸಾಮಾಗ್ರಿಗಳು
ಒಣಮೆಣಸು 10-12
ಬೆಳ್ಳುಳ್ಳಿ 1

ಪುಡಿ ಉಪ್ಪು 1 ಚಮಚ
ಸಾಮಾನ್ಯ ನಿಂಬೆ ಹಣ್ಣು ಗಾತ್ರದಷ್ಟು ಹುಣಸೆ ಹಣ್ಣು

ತಯಾರಿಸುವ ವಿಧಾನ:

* ಒಣ ಮೆಣಸನ್ನು ತವಾದಲ್ಲಿ ಹಾಕಿ ಮೆಣಸು ಸ್ವಲ್ಪ ಘಾಟು ವಾಸನೆ ಬರುವವರೆಗೆ ಹುರಿಯಿರಿ (ಹಾಗಂತ ಮೆಣಸು ಕಪ್ಪಾಗುವವರೆಗೆ ಹುರಿಯಬೇಡಿ).

* ಬೆಳ್ಳುಳ್ಳಿಯನ್ನು ಅಷ್ಟೇ ಗ್ಯಾಸ್ ನಲ್ಲಿ ಸುಡಿ, ನಂತರ ಅದರ ಸಿಪ್ಪೆ ಸುಲಿದು, ಮಿಕ್ಸಿಗೆ ಹಾಕಿ, ಒಣ ಮೆಣಸು, ಹುಣಸೆ ಹಣ್ಣು, ಉಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.

* ನಂತರ 2 ಚಮಚ ತೆಂಗಿನೆಣ್ಣೆ ಹಾಕಿದರೆ ಟೇಸ್ಟಿ ಒಣ ಮೆಣಸಿನ ಚಟ್ನಿ ರೆಡಿ.

English summary

Dry Chilli And Garlic Chutney

Here is spicy chutney recipe which is best for rice. Take a look at how to prepare the tasty and tangy and spicy dry chilli and garlic chutney recipe.
X
Desktop Bottom Promotion