For Quick Alerts
ALLOW NOTIFICATIONS  
For Daily Alerts

ಕ್ಯಾಬೇಜ್ ಉಪ್ಪಿನಕಾಯಿಯ ರುಚಿ ನೋಡಿದ್ದೀರಾ?

|

ನಮಗೆ ಮಾವಿನ ಕಾಯಿ ಹಾಗೂ ನೆಲ್ಲಿಕಾಯಿಂದ ತಯಾರಿಸುವ ಉಪ್ಪಿನಕಾಯಿಗಳು ತುಂಬಾ ಚಿರಪರಿಚಿತ. ಅದಲ್ಲದೆ ಟೊಮೆಟೊ, ಈರುಳ್ಳಿ, ಬೀಟ್ ರೂಟ್ ಹೀಗೆ ತರಕಾರಿಗಳಿಂದಲೂ ತಯಾರಿಸುತ್ತೆವೆ. ಇವುಗಳಲ್ಲದೆ ನೀವು ಎಂದಾದರೂ ಕ್ಯಾಬೇಜ್ ಉಪ್ಪಿನ ಕಾಯಿ ರುಚಿ ನೋಡಿದ್ದೀರಾ? ಇಲ್ಲ ಅಂದರೆ ಈ ಕ್ಯಾಬೇಜ್ ಉಪ್ಪಿನ ಕಾಯಿಯನ್ನು ತಯಾರಿಸಿ, ರುಚಿ ನೋಡಿ. ಇದರ ರುಚಿ ಖಂಡಿತ ನಿಮಗೆ ಇಷ್ಟವಾಗುವುದು.

ಈ ಕ್ಯಾಬೇಜ್ ಉಪ್ಪಿನಕಾಯಿ ಅನ್ನದ ಜೊತೆ ತಿನ್ನಲು ಬಲು ರುಚಿ. ಈ ಕ್ಯಾಬೇಜ್ ಉಪ್ಪಿನ ಕಾಯಿಯ ರೆಸಿಪಿ ನೋಡಿ ಇಲ್ಲಿದೆ.

Cabbage Pickle Recipe

ಬೇಕಾಗುವ ಸಾಮಾಗ್ರಿಗಳು

1 ಚಿಕ್ಕ ಎಲೆಕೋಸು(ಕ್ಯಾಬೇಜ್)
4-5 ಬ್ಯಾಡಗಿ ಮೆಣಸು
1 ಚಮಚ ಉದ್ದಿನ ಬೇಳೆ
2 ಚಮಚ ಹುಣಸೆ ಹಣ್ಣಿನ ಪೇಸ್ಟ್
ಅರ್ಧ ಚಮಚ ಜೀರಿಗೆ
ಚಿಟಿಕೆಯಷ್ಟು ಇಂಗು
ಅರಿಶಿಣ ಪುಡಿ
ಎಣ್ಣೆ
ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

* ಒಣ ಮೆಣಸು, ಉದ್ದಿನ ಬೇಳೆ, ಜೀರಿಗೆ ಹಾಕಿ ಹುರಿದು ನಂತರ ಇವನ್ನು ಪುಡಿ ಮಾಡಿಡಿ.

* ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಕತ್ತರಿಸಿದ ಎಲೆಕೋಸು ಹಾಕಿ 5-10 ನಿಮಿಷ ಫ್ರೈ ಮಾಡಿ. ಇದಕ್ಕೆ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ ಕ್ಯಾಬೇಜ್ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಪುಡಿ ಮಾಡಿಟ್ಟ ಮೆಣಸಿನ ಪುಡಿ ಮಿಶ್ರಣಕ್ಕೆ ಸ್ವಲ್ಪ ಇಂಗು, ಸೇರಿಸಿ ಅದರಲ್ಲಿ ಕ್ಯಾಬೇಜ್ ಹಾಕಿ, ಅದನ್ನು ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಹುಣಸೆ ಹಣ್ಣಿನ ಪೇಸ್ಟ್ ಮಿಶ್ರ ಮಾಡಿದರೆ ಕ್ಯಾಬೇಜ್ ಉಪ್ಪಿನಕಾಯಿ ರೆಡಿ.

English summary

Cabbage Pickle Recipe | Variety Of Pickle Recipe | ಕ್ಯಾಬೇಜ್ ಉಪ್ಪಿನಕಾಯಿ ರೆಸಿಪಿ | ಅನೇಕ ಬಗೆಯ ಉಪ್ಪಿನಕಾಯಿ ರೆಸಿಪಿ

Cabbage pickle can be eaten with rice and dal or with roti etc. The main ingredient for cabbage pickle is the cabbage. Lets get started on how to nake this Indian side dish, the 'cabbage pickle'.
X
Desktop Bottom Promotion