For Quick Alerts
ALLOW NOTIFICATIONS  
For Daily Alerts

ಸ್ಮರಣ ಶಕ್ತಿ ಹೆಚ್ಚಿಸುವ ಚಟ್ನಿ ಮತ್ತು ತಂಬುಳಿ

|

ಪ್ರತೀದಿನ ಒಂದು ಬ್ರಾಹ್ಮೀ ಎಲೆ(ಒಂದಲಗ) ತಿಂದರೆ ಸ್ಮರಣ ಶಕ್ತಿ ಅದ್ಭುತವಾಗಿರುತ್ತದೆ. ಊರು ಕಡೆಗಳಲ್ಲಿ ಗದ್ದೆ -ಬಯಲುಗಳಲ್ಲಿ ಬ್ರಾಹ್ಮೀ ಎಲೆ ಎಥೇಚ್ಛವಾಗಿ ಬೆಳೆಯುತ್ತದೆ, ಈ ಗಿಡ ಮಾರ್ಕೆಟ್ ನಲ್ಲೂ ದೊರೆಯುತ್ತದೆ. ಸ್ಮರಣ ಶಕ್ತಿಯ ವೃದ್ಧಿಗೆ ಈ ಮತ್ತು ಚಟ್ನಿ ತಂಬುಳಿ ಅತ್ಯುತ್ತಮ. ಬ್ರಾಹ್ಮಿ ಅಥವಾ ಒಂದೆಲಗ ಎಂದು ಕರೆಯಲ್ಪಡುವ ಈ ಎಲೆಗಳನ್ನು ಬೆಳಗ್ಗೆ ಹಸಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.

ಇಲ್ಲಿ ನಾವು ಚಟ್ನಿ ಮತ್ತು ತಂಬುಳಿ ರೆಸಿಪಿ ನೀಡಿದ್ದೇವೆ ನೋಡಿ:

Brahmi Chutney And Thambuli

ಬ್ರಾಹ್ಮೀ ಚಟ್ನಿಗೆ ಬೇಕಾಗುವ ಸಾಮಾಗ್ರಿಗಳು
ಬ್ರಾಹ್ಮೀ ಎಲೆ ಅರ್ಧ ಕಪ್
ತೆಂಗಿನ ತುರಿ ಅರ್ಧ ಕಪ್
ಹಸಿ ಮೆಣಸು 3-4
ಹುಣಸೆ ಹಣ್ಣು (ಸ್ವಲ್ಪ)
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು

ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ

ತಯಾರಿಸುವ ವಿಧಾನ
*ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದರಲ್ಲಿ ಬ್ರಾಹ್ಮೀ ಎಲೆಯನ್ನು ಹಾಕಿ ಬಾಡಿಸಿ.

* ನಂತರ ಆ ಎಲೆಯನ್ನು ತೆಂಗಿನ ತುರಿ, ಹಸಿ ಮೆಣಸು, ಉಪ್ಪು, ಹುಣಸೆ ಹಣ್ಣು ಹಾಕಿ ರುಬ್ಬಿ.

* ನಂತರ ಬೇಕಿದ್ದರೆ ಒಗ್ಗರಣೆ ಕೊಡಬಹುದು.

ಬ್ರಾಹ್ಮೀ ತಂಬ್ಳಿಗೆ ಬೇಕಾಗುವ ಸಾಮಾಗ್ರಿಗಳು
ತೆಂಗಿನ ತುರಿ ಅರ್ಧ ಕಪ್
ಬ್ರಾಹ್ಮಿ ಎಲೆ ಅರ್ಧ ಕಪ್
ಮೊಸರು ಒಂದು ಲೋಟ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಒಂದು ಚಮಚ
ಜೀರಿಗೆ ಒಂದು ಚಮಚ
ಮಜ್ಜಿಗೆ ಮೆಣಸು 4-5

ವಿಧಾನ :
ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ. ಅದಕ್ಕೆ ಮೊಸರು, ಉಪ್ಪು ಸೇರಿಸಿ.

ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ ಅದನ್ನು ಒಂದೆಲಗ, ಮೊಸರಿನ ಮಿಶ್ರಣಕ್ಕೆ ಹಾಕಿ. ನಂತರ ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿದರೆ ಸವಿರುಚಿಯ ತಂಬುಳಿ ರೆಡಿ.

English summary

Brahmi Chutney And Thambuli | Variety Of Chutney Recipe

Brahmi is a natural medicine to improve our memory power. If you eat a bramhi leaf everyday no need to fear about Alzheimer. Here we have given chutney and thambli recipe. These food not only tasty and also memory boost.
X
Desktop Bottom Promotion