For Quick Alerts
ALLOW NOTIFICATIONS  
For Daily Alerts

ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

|

ಹೇಳಿ ಕೇಳಿ ಇದು ಮಾವಿನ ಕಾಯಿ ಸೀಸನ್. ಹುಳಿ ರುಚಿಯನ್ನುಹೊಂದಿರುವ ಮಾವಿನ ಮಿಡಿ ಮಾರುಕಟ್ಟೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿವೆ. ಹಣ್ಣು ಮಾವೂ ಕೂಡ ಸೀಸನ್‌ಗೆ ತಕ್ಕಂತೆ ಮಾರುಕಟ್ಟೆಗೆ ದಾಳಿ ಇಟ್ಟಿದೆ. ಮಾವಿನ ಮಿಡಿ ಹಣ್ಣಿಗಿಂತಲೂ ಮೊದಲು ಬರುವುದರಿಂದ ಮಾವಿನ ಮಿಡಿಯ ಕಾರುಬಾರೆ ತುಸು ಅಧಿಕ ಎನ್ನಬಹುದು.

ಮಾವಿನ ಕಾಯಿಯನ್ನು ಬಳಸಿ ಹಲವಾರು ಬಾಯಿ ಚಪ್ಪರಿಸುವ ಖಾದ್ಯಗಳನ್ನು ತಯಾರಿಸಬಹುದು. ಮಾವಿನ ಕಾಯಿ ಬಳಸಿ ತಯಾರಿಸುವ ಒಂದು ರೆಸಿಪಿಯೆಂದರೆ ಚಟ್ನಿಯಾಗಿದೆ. ಬೇರೆ ಸ್ಥಳಗಳಲ್ಲಿ ಇದು ಬೇರೆ ಬೇರೆ ಹೆಸರುಗಳನ್ನು ಹೊಂದಿರುತ್ತದೆ ಆದರೆ ಸಿಹಿ ಮತ್ತು ಹುಳಿ ಮಿಶ್ರಗೊಂಡ ಚಟ್ನಿ ಬಾಯಲ್ಲಿ ನೀರೂರಿಸುವುದಂತೂ ಖಂಡಿತ.

Aam Ki Chutney: Green Mango Recipe

ಮಾವಿನ ಕಾಯಿ ಚಟ್ನಿಯನ್ನು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದು. ಇದನ್ನು ತುರಿದು ಅಥವಾ ಸಣ್ಣ ಹೋಳುಗಳನ್ನಾಗಿ ಮಾಡಿಕೊಂಡು ಚಟ್ನಿಯನ್ನು ತಯಾರಿಸಲಾಗುತ್ತದೆ. ಕಪ್ಪು ಎಳ್ಳು, ಮೆಣಸಿನ ಹುಡಿ, ಅಜ್ವಾನಿ ಸಕ್ಕರೆ ಹಾಗೂ ಉಪ್ಪು ಮೊದಲಾದ ಸಾಮಾಗ್ರಿಗಳನ್ನು ಬಳಸಿ ತಯಾರಾಗುವ ಈ ಚಟ್ನಿ ನಿಮ್ಮ ಊಟದ ಸವಿಯನ್ನು ಹೆಚ್ಚಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಮಾವಿನ ಕಾಯಿ ಉಪಯೋಗಿಸಿ ತಯಾರು ಮಾಡಲಾದ ಚಟ್ನಿಯನ್ನು ಇಂದೇ ಪ್ರಯತ್ನಿಸುವ ಇರಾದೆ ನಿಮ್ಮದಾಗಿದ್ದರೆ ತಯಾರಿ ವಿಧಾನವನ್ನು ನೋಡಿ ರುಚಿಯಾದ ಚಟ್ನಿ ತಯಾರಿಸಿ.

ರುಚಿಕರವಾದ ಗಾರ್ಲಿಕ್ ಚಟ್ನಿ ರೆಸಿಪಿ

ಪ್ರಮಾಣ: 1 ಸಣ್ಣ ಬೌಲ್
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
1.ಮಾವಿನ ಕಾಯಿ - 1
2.ಮೆಣಸಿನ ಹುಡಿ - 1 ಸ್ಪೂನ್
3.ಮೆಂತೆ ಬೀಜ - ಸ್ವಲ್ಪ
4.ಜೀರಿಗೆ ಬೀಜ - ಸ್ವಲ್ಪ
5.ಸಾಸಿವೆ ಬೀಜ - ಸ್ವಲ್ಪ
6.ಬೇ ಲೀಫ್ - 1
7.ಅರಶಿನ ಹುಡಿ - 1 ಸ್ಪೂನ್
8.ಸಕ್ಕರೆ - 1/2 ಸ್ಪೂನ್
9.ಉಪ್ಪು - ರುಚಿಗೆ ತಕ್ಕಷ್ಟು
10.ಎಣ್ಣೆ - 1 ಸ್ಪೂನ್
11.ನೀರು - 1/4 ಕಪ್

ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

ಮಾಡುವ ವಿಧಾನ:
1.ಮಾವಿನ ಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಅವುಗಳನ್ನು ತುರಿದುಕೊಳ್ಳಬಹುದು ಇಲ್ಲವೇ ಸಣ್ಣ ಹೋಳುಗಳನ್ನಾಗಿ ಮಾಡಬಹುದು.

2.ಪ್ರಶ್ಶರ್ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಬೇ ಲೀಫ್‌ನಿಂದ ಒಗ್ಗರಣೆ ಮಾಡಿ. ಮೆಂತೆ, ಜೀರಿಗೆ, ಸಾಸಿವೆ ಸೇರಿಸಿ.

3. ಈಗ ಮಾವಿನ ಹೋಳುಗಳನ್ನು ತುಂಡುಗಳನ್ನಾಗಿ ಮಾಡಿಕೊಂಡು ಮಿಶ್ರ ಮಾಡಿ.

4.ಉಪ್ಪು, ಸಕ್ಕರೆ, ಅರಶಿನ ಹುಡಿ, ಮೆಣಸಿನ ಹುಡಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

5.ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಒಂದು ವಿಶಲ್ ಬಂದ ನಂತರ ಕುಕ್ಕರ್ ಆಫ್ ಮಾಡಿ.

ಮಾವಿನ ಕಾಯಿಯ ಚಟ್ನಿ ಸವಿಯಲು ಸಿದ್ಧವಾಗಿದೆ. ರೋಟಿ, ಅನ್ನದೊಂದಿಗೆ ಸೈಡ್ ಡಿಶ್ ಆಗಿ ಸೇವಿಸಲು ಇದು ಸೂಕ್ತವಾದ ಡಿಶ್ ಆಗಿದೆ. ಫ್ರಿಜ್‌‌ನಲ್ಲಿ ಚಟ್ನಿಯನ್ನು ಒಂದು ವಾರದವರೆಗೆ ನಿಮಗೆ ಕಾಪಿಡಬಹುದು.

English summary

Aam Ki Chutney: Green Mango Recipe

The season of mangoes is here. From the tangy raw mangoes to the juicy and sweet pulpy ripe ones, you can enjoy the 'king of all fruits' throughout summers.
Story first published: Monday, April 21, 2014, 16:01 [IST]
X
Desktop Bottom Promotion