For Quick Alerts
ALLOW NOTIFICATIONS  
For Daily Alerts

ರುಚಿಯಾದ ಪಾಲಾಕ್ ಪನ್ನೀರ್ ಪಾಕ

|
Palak
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು, ಪಾಲಕ್ ಸೊಪ್ಪಿನಿಂದ ಪಾಲಕ್ ಅನೆಕ ರೀತಿಯ ಅಡುಗೆಯನ್ನು ತಯಾರಿಸಬಹುದು, ಅದರಲ್ಲಿ ಪಾಲಾಕ್ ಪನ್ನೀರ್ ಕೂಡ ಒಂದಾಗಿದೆ. ರುಚಿಕರವಾದ ಈ ಪಾಲಕ್ ಪನ್ನೀರ್ ಮಾಡುವ ವಿಧಾನ ಕೂಡ ಸುಲಭವಾಗಿದೆ.

ಬೇಕಾಗುವ ಸಾಮಾಗ್ರಗಳು:

1. ಪನ್ನೀರ್ 200 ಗ್ರಾಂ
2. ಪಾಲಾಕ್ ಸೊಪ್ಪು 2 ಕಟ್ಟು
3. ಕತ್ತರಿಸಿದ ಈರುಳ್ಳಿ 1
4. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
5. ಹಸಿಮೆಣಸು 4
6. ಕರಿಮೆಣಸು 5
7. ಪಲಾವ್ ಎಲೆ 1
8. ಜೀರಿಗೆ 1 ಚಮಚ
9. ಮೆಣಸು 1 ಚಮಚ
10. ಜೀರಿಗೆ ಪುಡಿ 1 ಚಮಚ
11. ಏಲಕ್ಕಿ, ಚಕ್ಕೆ, ಲವಂಗ, ಬೆಳ್ಳುಳ್ಳಿನಿಂದ ಮಾಡಿದ ಗರಂ ಮಸಾಲ
12. ತುಪ್ಪ 1 ಚಮಚ
13. ಎಣ್ಣೆ 1 ಚಮಚ
14. ಹಾಲಿನ ಕೆನೆ 1/2 ಕಪ್
15. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

1. ಕುದಿಸಿದ ನೀರಿಗೆ ಪಾಲಕ್ ಸೊಪ್ಪು ಹಾಕಿ 2 ನಿಮಿಷ ಬೇಯಿಸಬೇಕು.

2.
ಆ ನೀರನ್ನು ಚೆಲ್ಲಿ ಸೊಪ್ಪನ್ನು ತಣ್ಣೀರಿನಲ್ಲಿ ಇಡಬೇಕು.

3. ನಂತರ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಪನ್ನೀರ್ ಹಾಕಿ 2 ನಿಮಿಷ ಕಾಲ ಹುರಿಯಬೇಕು. ಪನ್ನೀರನ್ನು ಹೆಚ್ಚು ಹುರಿಯಲು ಬಿಡಬಾರದು.

4. ಪಾಲಾಕ್ ಸೊಪ್ಪನ್ನು ಹಸಿಮೆಣಸು, ಮತ್ತು ಶುಂಠಿ ಮಿಶ್ರಣದೊಂದಿಗೆ ಅರೆಯಿರಿ.

5.
ಪಲಾವ್ ಎಲೆ ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಬಿಸಿ ಮಾಡಬೇಕು.

6. ಕತ್ತರಿಸಿದ ಈರುಳ್ಳಿಯನ್ನು ಕಂದು ಬಣ್ಣಕ್ಕೆ ಬರುವ ಹಾಗೆ ಹುರಿದು ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿಯ ಮಿಶ್ರಣ ಹಾಕಿ ಹುರಿಯಿರಿ.

7.
ನಂತರ ಅರೆದ ಪಾಲಕ್ ಸೊಪ್ಪು ಮಿಶ್ರಣವನ್ನು ಈರುಳ್ಳಿಯೊಂದಿಗೆ ಮಿಶ್ರ ಮಾಡಿ, ಅದಕ್ಕೆ ಉಪ್ಪು, ಮೆಣಸು, ಜೀರಿಗೆ ಪುಡಿ ಹಾಕಿ 2-3 ನಿಮಿಷ ಬೇಯಿಸಿ. ನಂತರ ಅದಕ್ಕೆ ಪನ್ನೀರ್ ಅನ್ನು ಹಾಕಿ.

8.
ಹಾಗೆ ಬೇಯಿಸಿದಾಗ ಹಸಿರಾದ ಗ್ರೇವಿಯ ಮೇಲೆ ಎಣ್ಣೆ ಕಾಣಲಾರಂಭಿಸಿದಾಗ ಪಾಲಾಕ್ ಪನ್ನೀರ್ ರೆಡಿಯಾಗಿದೆ ಎಂದು ಅರ್ಥ.

9. ಗರಂ ಮಸಾಲವನ್ನು ತುಪ್ಪದಲ್ಲಿ ಹಾಕಿ ಬಿಸಿ ಮಾಡಿ ನಂತರ ಪಾಲಾಕ್ ಪನ್ನೀರ್ ಹಾಕಿದಾಗ ಘಮಘಮವಾದ ಪಾಲಾಕ್ ಪನ್ನೀರ್ ರೆಡಿ.

English summary

Recipe For Palak Paneer | Tasty Palak Food | ಪಾಲಾಕ್ ಪನ್ನೀರ್ ಮಾಡುವ ವಿಧಾನ | ರುಚಿಯಾದ ಪಾಲಾಕ್ ಅಡುಗೆ

The recipe for palak paneer is very simple and one that you can easily attempt at home. The main ingredients of palak paneer recipe are obviously spinach and paneer. It is also a great saag recipe that gives you the nutrition of green leafy vegetables. Take a look.
Story first published: Friday, October 21, 2011, 11:24 [IST]
X
Desktop Bottom Promotion