For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ದೋಸೆಗೆ ಸಾಥ್ ನೀಡುವ ಕಡಲೆ ಬೇಳೆಯ ಚಟ್ನಿ

By manu
|

ಹೈದರಾಬಾದಿನಲ್ಲಿ ಚಟ್ನೀಸ್ ಎಂಬ ಹೆಸರಿನ ಒಂದು ಹೋಟೆಲಿದೆ. ಅಲ್ಲಿ ಕೌಂಟರಿನಲ್ಲಿ ಸಿಗುವುದೇನಿದ್ದರೂ ದೋಸೆ ಮತ್ತು ಇಡ್ಲಿಯಂತಹದ್ದು ಮಾತ್ರ. ಚಟ್ನಿ ಬೇಕೆಂದರೆ ನಡುವೆ ಇರಿಸಿರುವ ನೂರಾರು ಪ್ರಕಾರದ ಚಟ್ನಿಗಳಲ್ಲಿ ನಿಮಗಿಷ್ಟ ಬಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಕಾರಣವೇನೆಂದರೆ ನಮಗೆಲ್ಲಾ ದೋಸೆ ಇಡ್ಲಿಗಳು ಸ್ವಾದಿಷ್ಟವಾಗುವುದು ಅವುಗಳೊಂದಿಗೆ ನಂಜಿಕೊಳ್ಳುವ ಚಟ್ನಿ ಅಥವಾ ಸಾಂಬಾರುಗಳಿಂದಲೇ. ಇದನ್ನೇ ಈ ಹೋಟೆಲಿನವರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ.

ನಿಮ್ಮ ಮನೆಯವರಿಗೂ ಸದಾ ದೋಸೆಯೊಂದಿಗೆ ಕಾಯಿಚಟ್ನಿಯನ್ನೇ ತಿಂದು ಬೇಸರವಾಗಿರಬಹುದು, ಆದರೆ ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ಅವರಿಗೆ ಸ್ವಾದಿಷ್ಟವಾದ ಕಡಲೆ ಬೇಳೆಯ ಚಟ್ನಿಯನ್ನು ಮುಂದಿನ ಬಾರಿ ಬಡಿಸಿ ಅವರನ್ನು ಆಶ್ಚರ್ಯಚಕಿತಗೊಳಿಸಲು ಬೋಲ್ಡ್ ಸ್ಕೈ ತಂಡ ಈ ವಿಶೇಷವಾದ ಚಟ್ನಿಯ ರೆಸಿಪಿಯನ್ನು ಪ್ರಸ್ತುತಪಡಿಸುತ್ತಿದೆ.

ಈ ಚಟ್ನಿಯ ಪ್ರಮುಖ ಸಾಮಾಗ್ರಿಯಾಗಿರುವ ಕಾಯಿತುರಿಯ ಕಾರಣ ಈ ಚಟ್ನಿ ದಪ್ಪನೆಯ ಕ್ರೀಂನ ಸ್ವಾದ ಹೊಂದಿರುತ್ತದೆ. ಕಾಯಿ ಇಷ್ಟವಿಲ್ಲವೆಂದರೆ ಕಾಯಿತುರಿ ಇಲ್ಲದೆಯೂ ಈ ಚಟ್ನಿಯನ್ನು ತಯಾರಿಸಬಹುದು. ರುಚಿರುಚಿಯಾದ ಶುಂಠಿ-ಕಾಯಿ ಚಟ್ನಿ: ಹತ್ತೇ ನಿಮಿಷದಲ್ಲಿ ರೆಡಿ!

10 Minute Chana Dal Chutney Recipe For Dosa

ಈ ಚಟ್ನಿಯನ್ನು ತಯಾರಿಸಲು ಹಲವಾರು ಮಸಾಲೆವಸ್ತುಗಳ ಅಗತ್ಯವಿದೆ. ಈ ಮಸಾಲೆಗಳಿಂದಲೇ ಚಟ್ನಿಗೆ ವಿಶಿಷ್ಟವಾದ ಸ್ವಾದ ಲಭಿಸುತ್ತದೆ. ಆದರೆ ಇದಕ್ಕೆ ಬಳಸಲಾಗುವ ಹುಣಸೆಹುಳಿಯ ಪ್ರಮಾಣ ಅಗತ್ಯಕ್ಕೆ ತಕ್ಕಷ್ಟೇ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಇಲ್ಲದಿದ್ದರೆ ಚಟ್ನಿ ಹೆಚ್ಚು ಹುಳಿಯಾಗುತ್ತದೆ. ಸರಿ, ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಲು ಈಗಲೇ ಅಣಿಯಾಗಿ.

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಕಡಲೆಬೇಳೆ - ಎರಡು ದೊಡ್ಡಚಮಚ (ಕೆಂಪಗೆ ಹುರಿದದ್ದು)
*ಕಾಯಿತುರಿ-ನೂರು ಗ್ರಾಂ
*ಕೆಂಪು ಮೆಣಸಿನ ಕಾಯಿ -ಮೂರು
*ಹುಣಸೆ ಹುಳಿ - ಸ್ವಲ್ಪ
*ಉಪ್ಪು -ರುಚಿಗನುಸಾರ
*ಕೊತ್ತಂಬರಿ ಸೊಪ್ಪು - ಒಂದು ಕಟ್ಟು

ಒಗ್ಗರಣೆಗೆ:
*ಎಣ್ಣೆ: ಎರಡು ಚಿಕ್ಕ ಚಮಚ
*ಸಾಸಿವೆ : ಒಂದು ಚಿಕ್ಕಚಮಚ
*ಉದ್ದಿನ ಬೇಳೆ : ಅರ್ಧ ಚಿಕ್ಕ ಚಮಚ
*ಚಿಕ್ಕ ಈರುಳ್ಳಿ (ಸಾಂಬಾರ್ ಈರುಳ್ಳಿ) - ಐದು(ಚಿಕ್ಕದಾಗಿ ಹೆಚ್ಚಿದ್ದು )
*ಬೇವಿನ ಎಲೆಗಳು : ಸ್ವಲ್ಪ ಬಾಯಿಯಲ್ಲಿ ನೀರೂರಿಸುವ ರುಚಿಯಾದ ಈರುಳ್ಳಿ ಚಟ್ನಿ

ವಿಧಾನ:
1) ಒಂದು ಪಾತ್ರೆಯಲ್ಲಿ ಕಾಲು ಚಿಕ್ಕ ಚಮಚ ಎಣ್ಣೆ ಬಿಸಿಮಾಡಿ ಕೆಂಪುಮೆಣಸನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
2) ಇದೇ ಪಾತ್ರೆಯಲ್ಲಿ ಅರ್ಧ ಚಮಚ ಎಣ್ಣೆ ಹಾಕಿ ಹುರಿದ ಹುರಿದ ಕಡಲೆ ಬೇಳೆಯನ್ನು ಹಾಕಿ ಚಿಕ್ಕ ಉರಿಯಲ್ಲಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಒಂದು ಚಿಕ್ಕ ತಟ್ಟೆಯಲ್ಲಿ ಹರಡಿ ತಣಿಯಲು ಪಕ್ಕಕ್ಕಿಡಿ.
3) ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ ಸಿಡಿಸಿ. ಬಳಿಕ ಉದ್ದಿನ ಬೇಳೆ ಮತ್ತು ಬೇವಿನ ಎಲೆಗಳನ್ನು ಹಾಕಿ ತಿರುವಿ.
4) ಬಳಿಕ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ತಿರುವುತ್ತಾ ಇರಿ. ಬಳಿಕ ಉರಿ ನಂದಿಸಿ ಪಾತ್ರೆ ಕೆಳಗಿಳಿಸಿ.
5) ಈ ಹೊತ್ತಿಗೆ ಬೇಳೆ ಮತ್ತು ಮೆಣಸು ತಣ್ಣಗಾಗಿರುತ್ತದೆ. ಒಗ್ಗರಣೆಯ ಹೊರತಾಗಿ ಎಲ್ಲವನ್ನೂ ಮಿಕ್ಸಿಯ ಜಾರ್‌ನೊಳಗೆ ಹಾಕಿ ಕಡೆಯಿರಿ.
6) ಬೇಳೆ ನುಣ್ಣಗಾದ ಬಳಿಕ ಒಗ್ಗರಣೆಯನ್ನು ಹಾಕಿ ಮಿಶ್ರಣ ಮಾಡಿ. ಸ್ವಾದಿಷ್ಟ ಬೇಳೆಯ ಚಟ್ನಿ ತಯಾರ್.

ಸಲಹೆ:
ಬಡಿಸುವ ಮುನ್ನ ಅಗತ್ಯವಿದ್ದಷ್ಟು ನೀರು ಸೇರಿಸಿ ಬಡಿಸಿ. ಇದರಿಂದ ಚಟ್ನಿ ತೀರಾ ದಪ್ಪಗಾಗಿದ್ದುದು ದೋಸೆಯೊಂದಿಗೆ ಸರಿಯಾಗಿ ಬೆರೆಯಲು ಸಾಧ್ಯವಾಗುತ್ತದೆ.

English summary

10 Minute Chana Dal Chutney Recipe For Dosa

How long will you pair the same old coconut chutney with your yummy dosa or idli. This morning Boldsky shares with you one of the healthiest and delicious chutney recipes. Take a look at how you can prepare this yummy chana dal chutney at home this morning.
X
Desktop Bottom Promotion