For Quick Alerts
ALLOW NOTIFICATIONS  
For Daily Alerts

ಕೆಂಪು ಮೆಣಸಿನಕಾಯಿ ಕಾರ ಚಟ್ನಿ

By Prasad
|
Red chillies chutney
ಕಾರ ಅಂದ್ರೆ ದೂರ ಓಡುವವರು ಕೂಡ ಕೆಂಪು ಚಟ್ನಿಯನ್ನು ಒಮ್ಮೆ ತಿಂದು ನೋಡಬೇಕು. ಈ ಚಟ್ನಿ ದೊಸೆ, ಚಪಾತಿ, ರೊಟ್ಟಿಯೊಡನೆ ತಿನ್ನಲು ಮಸ್ತಾಗಿರುತ್ತದೆ. ನೆನಪಿಡಿ, ಮೆಣಸಿನಕಾಯಿಯನ್ನು ನೀರಲ್ಲಿ ನೆನೆಸಿಟ್ಟಿದ್ದರಿಂದ ಜಾಸ್ತಿ ಬಾಳುವುದಿಲ್ಲ. ಆಗಲೇ ಮಾಡಿ ಆಗಲೇ ಖಾಲಿ ಮಾಡಬೇಕು.

* ಸುನಂದ ಅರುಣಕುಮಾರ್ ಗೋಸಿ

ಬೇಕಾಗುವ ಸಾಮಗ್ರಿಗಳು :

ಬ್ಯಾಡಗಿ ಒಣಮೆಣಸಿನಕಾಯಿ - 1 ಕಪ್
ಹುಣಸೇಹಣ್ಣು - ಬೆಟ್ಟದ ನೆಲ್ಲಿಕಾಯಿ ಗಾತ್ರ
ಜೀರಿಗೆ - 1 ಸ್ಪೂನ್
ಬೆಳ್ಳುಳ್ಳಿ ಎಸಳು - 10
ಒಣ ಕೊಬ್ಬರಿ - ಸ್ವಲ್ಪ
ಕರಿಬೇವು - ಸ್ವಲ್ಪ
ಬೆಲ್ಲ - ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಮೊದಲಿಗೆ ಬ್ಯಾಡಗಿ ಒಣಮೆಣಸಿನಕಾಯಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ತೆಗೆದಿಟ್ಟುಕೊಳ್ಳಿ. ನಂತರ ಮಿಕ್ಸಿ ಜಾರಿಗೆ ನೆನೆಸಿದ ಒಣಮೆಣಸಿನಕಾಯಿ, ಒಣ ಕೊಬ್ಬರಿ, ಬೆಳ್ಳುಳ್ಳಿ, ಹುಣಸೇಹಣ್ಣು, ಜೀರಿಗೆ, ಕರಿಬೇವು, ಬೆಲ್ಲ, ಉಪ್ಪು, ಎಲ್ಲಾ ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿದರೆ ಕೆಂಪು ಚಟ್ನಿ ರೆಡಿ.

ಕೆಂಪು ಚಟ್ನಿ ನೀರುದೋಸೆಯೊಡನೆ ತಿನ್ನಲು ಚೆನ್ನಾಗಿರುತ್ತದೆ.

ರಂಜಕ : ಬ್ಯಾಡಗಿ ಮೆಣಸಿನಕಾಯಿಯಿಂದ ಕಣ್ಣಲ್ಲಿ ನೀರು ಬರಿಸುವ ಕಾರಕಾರ ಚಟ್ನಿ ಮಾಡುವುದು ಹೇಗೆಂದು ತಿಳಿಯುವಿರಿ ಮುಂದಿನ ಲೇಖನದಲ್ಲಿ. ಈ ಕೆಂಪು ಚಟ್ನಿಯನ್ನು ಉತ್ತರ ಕರ್ನಾಟಕದಲ್ಲಿ ರಂಜಕ ಅಂತಲೂ ಕರೆಯುತ್ತಾರೆ. ರಂಜಕ ತಿಂದು ಕಣ್ಣಲ್ಲಿ ನೀರು ಬರಿಸಿಕೊಂಡ ರೋಚಕ ಕಥಾನಕಗಳಿದ್ದರೆ ನಮಗೆ ಬರೆದು ತಿಳಿಸಿ.

Story first published: Tuesday, February 9, 2010, 18:17 [IST]
X
Desktop Bottom Promotion