For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಭೀತಿಯನ್ನು ದೂರಮಾಡುವ ರುಚಿಕರವಾದ ಗೋಧಿ ದೋಸೆ

|

ನಿಮ್ಮ ದಿನವನ್ನು ನೀವು ಆರೋಗ್ಯಕರವಾಗಿ ಪ್ರಾರಂಭಿಸಲು ಬಯಸುತ್ತೀರಾ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ತಿಳಿಸಿರುವ ರುಚಿಕರವಾದ ಮತ್ತು ದೇಹಕ್ಕೆ ಅತ್ಯುತ್ತಮವಾದ ಗೋಧಿ ದೋಸೆಯನ್ನು ಸವಿಯಲೇ ಬೇಕು. ಈ ಸ್ವಾದಿಷ್ಟಮಯ ದೋಸೆಯ ರುಚಿಯನ್ನು ಸವಿಯಲು ನೀವು ಹೆಚ್ಚು ಕಷ್ಟಪಡಬೇಕಿಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ ಈ ಆರೋಗ್ಯಕರ ದೋಸೆಯನ್ನು ತಯಾರಿಸಬಹುದು. ಇನ್ನು ಉದ್ಯೋಗಕ್ಕೆ ಹೋಗುವ ತಾಯಂದಿರು ನೀವಾಗಿದ್ದಲ್ಲಿ ಕೂಡ ಈ ದೋಸೆಯನ್ನು ಚಕ ಚಕನೇ ಸಿದ್ಧಪಡಿಸಬಹುದು.

ಗೋಧಿ ದೋಸೆ ನಿಜಕ್ಕೂ ನಿಮ್ಮ ಹೊಟ್ಟೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಲಿದ್ದು ಮಧ್ಯಾಹ್ನದ ಊಟದವರೆಗೆ ನಿಮಗೆ ಹಸಿವು ಕಾಡಲು ಸಾಧ್ಯವೇ ಇಲ್ಲ. ಈ ದೋಸೆಯ ಹಿಟ್ಟನ್ನು ತಯಾರು ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ತುಂಬಾ ದಪ್ಪಗೆ ಇದನ್ನು ಸಿದ್ಧಪಡಿಸಬಾರದು ಎಂಬುದಾಗಿದೆ.

ದೋಸೆ ಹಿಟ್ಟು ದಪ್ಪಗಿದ್ದಲ್ಲಿ ಇದನ್ನು ಹುಯ್ಯುವಾಗ ನಿಮಗೆ ಗಂಟುಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಿದ್ದರೆ ಈ ರುಚಿಕರ ಗೋಧಿ ದೋಸೆಯನ್ನು ಸಿದ್ಧಪಡಿಸುವ ಅತಿ ಸರಳ ವಿಧಾನವನ್ನು ಕೆಳಗೆ ನಾವು ನೀಡಿದ್ದು ನೀವು ಇದನ್ನು ತಯಾರಿಸಿ ಸವಿಯಿರಿ. ತೆಳ್ಳಗೆ-ಬೆಳ್ಳಗಿನ ನೀರು ದೋಸೆ

Wheat Dosa Recipe for Morning Breakfast

ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು

ಸಾಮಾಗ್ರಿಗಳು
*ಪೂರ್ಣ ಗೋಧಿ - 2 ಕಪ್‌ಗಳು
*ತೆಂಗಿನ ತುರಿ - 2 ಚಮಚ
*ನೀರು - 1 ಕಪ್
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ
*ಮೊದಲಿಗೆ ಗೋಧಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಗೋಧಿಯಿಂದ ಸಂಪೂರ್ಣವಾಗಿ ನೀರನ್ನು ಬಸಿದು ಹಾಗೆಯೇ ಅರ್ಧ ಗಂಟೆಗಳ ಕಾಲ ಇಡಿ.
*ಗೋಧಿ ಸಂಪೂರ್ಣವಾಗಿ ಒಣಗುವವರೆಗೆ ನೀವು ಕಾಯಬೇಕು.
*ಇದು ಸಂಪೂರ್ಣವಾಗಿ ಒಣಗಿದ ನಂತರ ಮಿಕ್ಸರ್‌ಗೆ ಹಾಕಿ ನುಣ್ಣಗೆ ಹುಡಿ ಮಾಡಿಕೊಳ್ಳಿ
*ಇನ್ನು ಈ ಹುಡಿಗೆ ತೆಂಗಿನ ತುರಿ ಮತ್ತು ನೀರನ್ನು ಸೇರಿಸಿಕೊಂಡು ತೆಳ್ಳಗಿನ ದೋಸೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ
*ತದನಂತರ ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ
*ಈಗ ದೋಸೆ ಕಾವಲಿಯನ್ನು ಗ್ಯಾಸ್ ಮೇಲಿರಿಸಿ. ಕಾವಲಿ ಕಾದೊಡನೆ ಸ್ವಲ್ಪ ಎಣ್ಣೆ ಪಸೆ ಮಾಡಿಕೊಂಡು ವೃತ್ತಾಕಾರದಲ್ಲಿ ಗೋಧಿ ದೋಸೆಯನ್ನು ಹುಯ್ಯಿರಿ. ದೋಸೆಯ ಎರಡೂ ಬದಿಯನ್ನೂ ಚೆನ್ನಾಗಿ ಕಾಯಿಸಿಕೊಳ್ಳಿ.
*ದೋಸೆಯನ್ನು ತಟ್ಟೆಗೆ ವರ್ಗಾಯಿಸಿ ಚಟ್ನಿಯೊಂದಿಗೆ ಸವಿಯಲು ನೀಡಿ.
ಗೋಧಿ ದೋಸೆಯ ರುಚಿಯನ್ನು ಹೆಚ್ಚಿಸಲು ಕೊಬ್ಬರಿ ಚಟ್ನಿ ಹೇಳಿ ಮಾಡಿಸಿದ್ದು. ನಿಜಕ್ಕೂ ದೋಸೆಯೊಂದಿಗೆ ಈ ಚಟ್ನಿ ಉತ್ತಮ ಹೊಂದಿಕೆಯಾಗಿದೆ.

English summary

Wheat Dosa Recipe for Morning Breakfast

Here’s a delicious, light dosa recipe that is a popular south Indian dish and can be enjoyed with sambhar. Wheat dosa is very healthy and those who are on diet can follow this.
X
Desktop Bottom Promotion