For Quick Alerts
ALLOW NOTIFICATIONS  
For Daily Alerts

ಇದು ಆಮ್ಲೇಟ್ ನಲ್ಲಿ ಭಿನ್ನ ರುಚಿಯ ಆಮ್ಲೇಟ್

|

ಮೊಟ್ಟೆಯ ಆಮ್ಲೇಟ್ ಗೆ ಹಾಕುವ ಸಾಮಾಗ್ರಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೂ ರುಚಿಯಲ್ಲಿ ಭಿನ್ನವಾಗಿರುತ್ತದೆ. ಮೊಟ್ಟೆಗೆ ಬರೀ ಉಪ್ಪು, ಮೆಣಸು ಈರುಳ್ಳಿ ಹಾಕಿದರೆ ಒಂದು ರುಚಿ, ತರಕಾರಿ ಹಾಕಿದರೆ ಬೇರೆಯದೇ ರುಚಿ ದೊರೆಯುತ್ತದೆ.

ಇಲ್ಲಿ ನಾವು ತರಕಾರಿ ಹಾಕಿ ತಯಾರಿಸುವ ಆಮ್ಲೇಟ್ ರೆಸಿಪಿ ನೀಡಿದ್ದೇವೆ. ಇದಕ್ಕೆ ಬೇಕಾದರೆ ಚೀಸ್ ಕೂಡ ಹಾಕಿ ಮಾಡಬಹುದು.

Vegetables Omelette: Breakfast Recipe

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ 2-3
ಈರುಳ್ಳಿ 1
ಟೊಮೆಟೊ 1 (ದೊಡ್ಡದಾಗಿದ್ದರೆ ಅರ್ಧದಷ್ಟು)
ಹಸಿ ಮೆಣಸಿಕಾಯಿ 1
ಬೀನ್ಸ್ 1
ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು
ಹಾಲು 1 ಚಮಚ
ಎಣ್ಣೆ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಚೀಸ್(ಬೇಕಿದ್ದರೆ)
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ

* ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಬೇಕು.

* ಮೊಟ್ಟೆಯನ್ನು ಒಡೆದು ಅದನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಕದಡಬೇಕು. ನಂತರ ಕತ್ತರಿಸಿದ ತರಕಾರಿ ಹಾಗೂ ಉಪ್ಪನ್ನು ಹಾಕಿ ಕದಡಬೇಕು.

* ತವಾವನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ ಕದಡಿದ ಮೊಟ್ಟೆಯನ್ನು ಹಾಕಬೇಕು, ಮೊಟ್ಟೆ ಸ್ವಲ್ಪ ಬೇಯುವಾಗ ಕರಿ ಮೆಣಸಿನ ಪುಡಿ ಉದುರಿಸಿ ಹಾಗೂ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ, ಆಮ್ಲೇಟ್ ಸ್ವಲ್ಪ ಬೇಯುವಾಗ ಚೀಸ್ ಅನ್ನು ಹಾಕಿ ಉರಿಯಿಂದ ಇಳಿಸಿದರೆ ರುಚಿಕರವಾದ ಆಮ್ಲೇಟ್ ರೆಡಿ.

English summary

Vegetables Omelette: Breakfast Recipe | Variety Of Egg Recipe | ವೆಜ್ ಮೊಟ್ಟೆ ಆಮ್ಲೇಟ್ ರೆಸಿಪಿ | ಅನೇಕ ಬಗೆಯ ಮೊಟ್ಟೆಯ ರೆಸಿಪಿ

There are many omelette recipes that you can prepare for a filling and delicious breakfast. If you are running late, just make an omelette with basic spices like salt, red chilli powder and black pepper. Want to try this omelette recipe? Check out the procedure...
X
Desktop Bottom Promotion