For Quick Alerts
ALLOW NOTIFICATIONS  
For Daily Alerts

ಬಗೆ ಬಗೆಯ ದೋಸೆ-ಬಾಯಲ್ಲಿ ನೀರೂರಿಸುತ್ತಿದೆ

By Manu
|

ಬೆಳಗ್ಗಿನ ತಿಂಡಿ ರುಚಿಕರವಾಗಿ ಹೊಟ್ಟೆಗೆ ಹಿತವಾಗಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಅನುಭವ ನಮ್ಮದಾಗುತ್ತದೆ. ಉಪಹಾರ ರಾಜನಂತೆ ಮಾಡಿ ಮಧ್ಯಾಹ್ನದ ಊಟವನ್ನು ರಾಣಿಯಂತೆ ಸೇವಿಸಿ ರಾತ್ರಿ ಭೋಜನ ಬಡವನಂತಿರಲಿ ಎಂಬುದು ವೈದ್ಯ ಲೋಕದಲ್ಲಿ ಆರೋಗ್ಯಕರ ಜೀವನಕ್ಕಾಗಿ ಸೂತ್ರವಾಗಿದೆ. ಅದಕ್ಕಾಗಿಯೇ ಉಪಹಾರವನ್ನು ಎಂದಿಗೂ ತಪ್ಪಿಸಬಾರದು ಎಂದು ಹೇಳುತ್ತಾರೆ. ಹೆಚ್ಚಿನ ಮನೆಗಳಲ್ಲಿ ಇಡ್ಲಿ, ಉಪ್ಪಿಟ್ಟು ಅವಲಕ್ಕಿ ಬೆಳಗ್ಗಿನ ತಿಂಡಿಗೆ ಸಾಮಾನ್ಯವಾಗಿದ್ದರೂ ದೋಸೆ ಮಾಡುವ ದಿನ ಅತಿವಿಶೇಷ ಎಂದೆನಿಸಿಬಿಡುತ್ತದೆ.

ಸೆಟ್ ದೋಸೆ, ಅವಲಕ್ಕಿ ದೋಸೆ, ಗೋಧಿ ದೋಸೆ, ಕುಚ್ಚಲಕ್ಕಿ ದೋಸೆ ಹೀಗೆ ವಿಧ ವಿಧದ ದೋಸೆಗಳ ತಯಾರಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಥಟ್ಟನೆ ಮಾಡುವ ನೀರ್ ದೋಸೆಯಿಂದ ಹಿಡಿದು ಹಿಂದಿನ ದಿನ ಕಡೆದಿಟ್ಟು ಮರುದಿನಕ್ಕೆ ಹುಳಿ ಬರಿಸಿ ಮಾಡುವ ಮಸಾಲೆ ದೋಸೆ ಕೂಡ ಅದರದ್ದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂದಿನ ನಮ್ಮ ಲೇಖನದಲ್ಲಿ ಸ್ವಾದಿಷ್ಟವಾದ ದೋಸೆ ರೆಸಿಪಿಯ ವಿಧಾನಗಳನ್ನು ನಾವು ನೀಡಿದ್ದು ನೀವು ಮನೆಯಲ್ಲಿ ಈ ರೆಸಿಪಿಗಳನ್ನು ಪ್ರಯತ್ನಿಸಬಹುದಾಗಿದೆ.

ಕುಚ್ಚಲಕ್ಕಿ ದೋಸೆ

ಕುಚ್ಚಲಕ್ಕಿ ದೋಸೆ

ಆರೋಗ್ಯಕರ ಉಪಹಾರಕ್ಕಾಗಿ ಕುಚ್ಚಲಕ್ಕಿ ದೋಸೆ

ಬೀಟ್‌ರೂಟ್ ದೋಸೆ

ಬೀಟ್‌ರೂಟ್ ದೋಸೆ

ಕೆಂಪುಬಣ್ಣ ಎಂಬ ಒಂದೇ ಕಾರಣಕ್ಕೆ ಬೀಟ್‌ರೂಟ್ ತರಕಾರಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಈ ಕೆಂಪುಬಣ್ಣವೇ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ರಕ್ತ ಮತ್ತು ಮೂಳೆಗಳಿಗೆ ಉಪಯುಕ್ತವಾಗಿವೆ. ಆಹಾರತಜ್ಞರ ಪ್ರಕಾರ ವಾರಕ್ಕೊಮ್ಮೆಯಾದರೂ ನಿಮ್ಮ ಆಹಾರದಲ್ಲಿ ಬೀಟ್‌ರೂಟ್ ಇರುವುದು ಆರೋಗ್ಯಕರ. ಬನ್ನಿ ಇಂತಹ ಪೌಷ್ಠಿಕಾಂಶಗಳನ್ನು ಹೊಂದಿರುವ ಬೀಟ್‌ರೂಟ್ ದೋಸೆ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಬನ್ನಿ ಬೀಟ್‌ರೂಟ್ ದೋಸೆಯ ರುಚಿ ನೋಡೋಣ...!

ಗೋಧಿ ದೋಸೆ

ಗೋಧಿ ದೋಸೆ

ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ದೋಸೆ ರೆಸಿಪಿ

ಸೆಟ್ ದೋಸೆ

ಸೆಟ್ ದೋಸೆ

ಆಹಾ, ಬಿಸಿ ಬಿಸಿಯಾದ ಸೆಟ್ ದೋಸೆ ರೆಸಿಪಿ

ಅವಲಕ್ಕಿ ದೋಸೆ

ಅವಲಕ್ಕಿ ದೋಸೆ

ಬೆಳಗಿನ ಉಪಹಾರಕ್ಕಾಗಿ ರುಚಿಯಾದ ಅವಲಕ್ಕಿ ದೋಸೆ

ಮಸಾಲೆ ದೋಸೆ

ಮಸಾಲೆ ದೋಸೆ

ಮಸಾಲೆ ದೋಸೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ದೋಸೆ ಕಾವಲಿಯನ್ನು ಬಿಸಿ ಮಾಡಿ ಅದರ ಮೇಲೆ ತುಪ್ಪ ಸವರಿ ದೋಸೆ ಹಿಟ್ಟು ಹುಯ್ದು ಒಂದು ಬದಿ ಕೆಂಪಗಾದ ಮೇಲೆ ಅದರೊಳಗೆ ಆಲೂಗಡ್ಡೆ ಪಲ್ಯವನ್ನು ಜೋಪಾನವಾಗಿ ಸುರುಳಿ ಸುತ್ತಿ ಇಟ್ಟರೆ ಮಸಾಲೆ ದೋಸೆ ತಯಾರು. ಪಕ್ಕದಲ್ಲಿ ಕೊಬ್ಬರಿ ಚಟ್ನಿ, ಒಂದು ಬಟ್ಟಲಲ್ಲಿ ಬಿಸಿಬಿಸಿ ಸಾಂಬಾರು, ಜೊತೆಗಿಷ್ಟು ಬೆಣ್ಣೆ ಇದ್ದುಬಿಟ್ಟರೆ ಇದರ ರುಚಿ ಅಮೋಘವಾಗಿರುತ್ತದೆ. ಬನ್ನಿ ಮಸಾಲೆ ದೋಸೆ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ವಾವ್! ಹಸಿವನ್ನು ನೀಗಿಸುವ ಮಸಾಲ ದೋಸೆ ರೆಸಿಪಿ!

English summary

Variety styles of Dosa recipe in Kannada

Dosa is one of the popular south indian breakfast recipe along with idli and sambar. there are many varieties of dosa recipes have a look
X
Desktop Bottom Promotion