For Quick Alerts
ALLOW NOTIFICATIONS  
For Daily Alerts

ಉಲ್ಲಾಸದ ಮನಸ್ಸಿಗೆ ಮುದವನ್ನು ನೀಡುವ ಸೇಮಿಗೆ ಉಪ್ಪಿಟ್ಟು!

|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ. ಆದರೆ ಈ ಸರಳ ಆಹಾರ ಪದ್ಧತಿಯನ್ನು ತಯಾರಿಸುವುದು ಕೂಡ ತುಸು ಸವಾಲಿನ ವಿಚಾರವೇ. ಏಕೆಂದರೆ ದಿನವೂ ಒಂದೇ ಬಗೆಯ ರುಚಿಯಿಲ್ಲದ ಪಥ್ಯದ ಆಹಾರವನ್ನು ಸೇವಿಸುತ್ತಿದ್ದರೆ ನಮ್ಮ ದೃಷ್ಟಿ ಜಂಕ್ ಫುಡ್‌ಗಳತ್ತ ವಾಲುವುದು ಸಾಮಾನ್ಯ.

ಆದರೂ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮತ್ತು ಆರೋಗ್ಯ ರುಚಿಯನ್ನು ಒದಗಿಸುವ ಒಂದು ಸರಳ ಉಪಹಾರ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಅಂತಹುದೇ ವಿಶೇಷ ಉಪಹಾರವಾದ ಸೇಮಿಗೆ ಉಪ್ಪಿಟ್ಟಿನೊಂದಿಗೆ ನಿಮ್ಮ ಬಳಿ ನಾವು ಬಂದಿರುವೆವು. ಉಪ್ಪಿಟ್ಟು ತಯಾರಿಸುವಾಗ ರವೆ ಬಳಸುವುದು ಸಾಮಾನ್ಯ ಆದರೆ ಇಂದಿನ ಉಪ್ಪಿಟ್ಟು ತಯಾರಿಯಲ್ಲಿ ರವೆಯ ಬದಲಿಗೆ ನಾವು ಸೇಮಿಗೆಯನ್ನು ಬಳಸುತ್ತಿದ್ದೇವೆ.

Tasty Semiya Upma Recipe For Breakfast

ನೀವು ಯಾವಾಗಲೂ ತಯಾರಿಸುವ ರವೆ ಉಪ್ಪಿಟ್ಟಿನಂತೆ ಈ ಸೇಮಿಗೆ ಉಪ್ಪಿಟ್ಟನ್ನು ಕೂಡ ತಯಾರಿಸಬಹುದು. ತರಕಾರಿಯನ್ನು ಸೇರಿಸಿ ಇದನ್ನು ಸಿದ್ಧಪಡಿಸಿದಾಗ ಇದು ನೀಡುವ ರುಚಿ ಮಾತ್ರ ಮರೆಯಲಾಗದ್ದು. ಆರೋಗ್ಯದ ಜೊತೆಗೆ ಒಂದೇ ಬಗೆಯ ಸವಿಯನ್ನು ನಾಲಿಗೆಗೆ ರಸಗವಳವನ್ನು ಇದು ನೀಡುವುದು ಖಂಡಿತ. ಹಾಗಿದ್ದರೆ ಹೆಚ್ಚು ತಡ ಮಾಡದೇ ಸರಳವಾಗಿ ತಯಾರಿಸಬಹುದಾದ ಸೇಮಿಗೆ ಉಪ್ಪಿಟ್ಟಿನ ಪಾಕ ವಿಧಾನವನ್ನು ಇಲ್ಲಿ ನೋಡಿಕೊಳ್ಳಿ ಮತ್ತು ತಯಾರಿಸಿ. ಉಪಹಾರವನ್ನು ಕಳೆಗಟ್ಟಿಸುವ ರುಚಿಯಾದ ಮೊಸರು ವಡೆ

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಸೇಮಿಗೆ (ವರ್ಮಿಸಿಲಿ) - 2 ಕಪ್‌
*ನೀರು - 1 ½ ಕಪ್
*ಈರುಳ್ಳಿ - 1 ಕತ್ತರಿಸಿದ್ದು
*ಬಟಾಣಿ - ½ ಕಪ್
*ಕ್ಯಾರೇಟ್ - 1 (ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಹಸಿಮೆಣಸು - 2 ಸಣ್ಣಗೆ ಹೆಚ್ಚಿದ್ದು
*ಅರಶಿನ ಪುಡಿ -¼ ಚಮಚ
*ಸಾಸಿವೆ - 1 ಚಮಚ
*ಉದ್ದಿನ ಬೇಳೆ - 1 ಚಮಚ
*ಕಡ್ಲೆ ಬೇಳೆ - ½ ಚಮಚ
*ಕರಿಬೇವಿನ ಎಲೆ - 6-7
*ಒಣಮೆಣಸು - 1
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2 ಚಮಚ

ಮಾಡುವ ವಿಧಾನ
1. ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಸೇಮಿಗೆಯನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
2. ಚೆನ್ನಾಗಿ ಹುರಿದ ನಂತರ, ಇದನ್ನು ತಟ್ಟೆಗೆ ವರ್ಗಾಯಿಸಿಕೊಳ್ಳಿ
3. ತದನಂತರ ಬಾಣಲೆಗೆ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿ ಬಿಸಿಯಾದೊಡನೆ ಇದಕ್ಕೆ ಸಾಸಿವೆ, ಒಣಮೆಣಸು, ಉದ್ದಿನ ಬೇಳೆ, ಕಡ್ಲೆ ಬೇಳೆ ಮತ್ತು ಕರಿಬೇವಿನೆಲೆಯನ್ನು ಸೇರಿಸಿ ಸ್ವಲ್ಪ ನಿಮಿಷ ಹುರಿದುಕೊಳ್ಳಿ.
4. ಇದಕ್ಕೆ ಈರುಳ್ಳಿಯನ್ನು ಸೇರಿಸಿ ಮತ್ತು 4-5 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ
5. ಇನ್ನು ಇದಕ್ಕೆ ಅರಶಿನ, ಕತ್ತರಿಸಿದ ಕ್ಯಾರೇಟ್, ಹಸಿರು ಬಟಾಣಿ, ಹಸಿಮೆಣಸು, ಉಪ್ಪು ಮತ್ತು ನೀರನ್ನು ಸೇರಿಸಿಕೊಳ್ಳಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6. ಇದಕ್ಕೆ ಈಗ ಹುರಿದ ಸೇಮಿಗೆಯನ್ನು ಸೇರಿಸಿ ಮತ್ತು 8-10 ನಿಮಿಷಗಳ ಕಾಲ ಬೇಯಲು ಬಿಡಿ.
7. ಪೂರ್ತಿ ಆದ ನಂತರ, ಮುಚ್ಚಳವನ್ನು ತೆಗೆದು ನೀರು ಚೆನ್ನಾಗಿ ಆರುವವರೆಗೆ ಬೇಯಲು ಬಿಡಿ.
8. ನೀರು ಪೂರ್ತಿ ಆರಿದ ನಂತರ, ಗ್ಯಾಸ್ ಆಫ್ ಮಾಡಿ
ಸ್ವಾದಿಷ್ಟ ಸೇಮಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗಿದೆ. ಇದನ್ನು ನಿಮಗೆ ಹಾಗೆಯೇ ತಿನ್ನಬಹುದು ಅಥವಾ ಚಟ್ನಿಯೊಂದಿಗೆ ಕೂಡ ಸೇವಿಸಬಹುದಾಗಿದೆ.

English summary

Tasty Semiya Upma Recipe For Breakfast

Upma is a classic Indian breakfast recipe. It is easy, less time consuming and is loved by almost everyone. Usually upma is prepared with semolina or rava. But today we have a twist for your tongue. We will prepare this upma recipe with semiya or vermicelli.
Story first published: Wednesday, October 15, 2014, 9:42 [IST]
X
Desktop Bottom Promotion