For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕೆ ಟೊಮೆಟೊ ರೈಸ್ ಬಾತ್

By Manohar. V
|

ಬಾಯಿಯಲ್ಲಿ ನೀರೂರಿಸುವ ಟೊಮೆಟೊ ರೈಸ್ ಬಾತ್ ರುಚಿಕರವಾಗಿ ಹಾಗೂ ಸ್ವಾದಿಷ್ಟದಿಂದ ಕೂಡಿದ್ದು, ಬೆಳಗಿನ ಜಾವದ ಉಪಹಾರಕ್ಕೆ ಇದನ್ನು ಸುಲಭವಾಗಿ ತಯಾರಿಸಬಹುದು, ನಾವು ವಿವಿಧ ರೀತಿಯ ತರಕಾರಿಗಳನ್ನು ಬಳಸಿಕೊಂಡು ಅನ್ನದಿಂದ ಹಲವು ಬಗೆಯ ತಿನಿಸನ್ನು ಬೆಳಗಿನ ಜಾವದ ಉಪಹಾರಕ್ಕೆ ಮಾಡಿಕೊಳ್ಳಬಹುದು, ಅದರಲ್ಲಿ ಟೊಮೆಟೊ ರೈಸ್ ಬಾತ್ ಕೂಡ ಒಂದು! ಅಲ್ಲದೆ ನೀವು ಇದನ್ನು ಬೆಳಗಿನ ಉಪಹಾರಕ್ಕೆ ಮತ್ತು ಮಧ್ಯಾಹ್ನ ಊಟದ ಡಬ್ಬಿಗೆ ಕೂಡ ಹಾಕಿಕೊಳ್ಳಬಹುದು.

ಇಂತಹ ಸ್ವಾದಿಷ್ಟಭರಿತವಾಗಿರುವ ದಕ್ಷಿಣ ಭಾರತದ ರೆಸಿಪಿಯನ್ನು ಮಾಡುವುದರೊಂದಿಗೆ ನಿಮ್ಮ ಬೆಳೆಗಿನ ಜಾವದ ಉಪಹಾರವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿ. ಹಾಗಾದರೆ ಇನ್ನೇಕೆ ತಡ? ಬನ್ನಿ ಟೊಮೆಟೊ ರೈಸ್ ಬಾತ್ ಮಾಡುವ ವಿಧಾನವನ್ನು ಪ್ರಯತ್ನಿಸಿ.

Tasty and mouth-watering Tomato Rice dish

ಬೇಕಾಗುವ ಸಾಮಗ್ರಿಗಳು:

ಬೆಂದಿರುವ ಅನ್ನ - 2- 3 ಬೌಲ್

ಟೊಮೋಟೊ- 2 ರಿಂದ 3 ಮಧ್ಯಮ ಗಾತ್ರದ್ದು

ಈರುಳ್ಳಿ - ಒಂದೆರಡು ( ಸಣ್ಣಗೆ ಕತ್ತರಿಸಲಾಗಿರುವ)

ಹಸಿಮೆಣಸಿನಕಾಯಿ - 1 ರಿಂದ 2

ಎಣ್ಣೆ - ಒಗ್ಗರಣೆಗೆ ಬೇಕಾಗುವಷ್ಟು

ಕಡ್ಲೆಬೇಳೆ - 1 ಟೀ ಸ್ಪೂನ್

ಉದ್ದಿನ ಬೇಳೆ - 1 ಟೀ ಸ್ಪೂನ್

ಸಾಸಿವೆ - 1/4 ಟೀ ಸ್ಪೂನ್

ಜೀರಿಗೆ - 1/4 ಟೀ ಸ್ಪೂನ್

ಅರಿಶಿಣ - ಚಿಟಿಕೆ

ಕರಿಬೇವು - ಸ್ವಲ್ಪ

ಕೊತ್ತುಂಬರಿ ಸೊಪ್ಪು - ಸ್ವಲ್ಪ (ಸಣ್ಣಗೆ ಕತ್ತರಿಸಲಾಗಿರುವ)

ಕಾಯಿತುರಿ - ಸ್ವಲ್ಪ

ಖಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

ಸಣ್ಣಗೆ ಕತ್ತರಿಸಿಕೊಂಡಿರುವ ಟೊಮೆಟೊ, ಈರುಳ್ಳಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.

ಹಸಿಮೆಣಸಿನಕಾಯಿ ನಾಲ್ಕು ಭಾಗಗಳಾಗಿ ಸೀಳಿಕೊಳ್ಳಿ. ಜೊತೆಗೆ ಕೊತ್ತುಂಬರಿ ಸೊಪ್ಪು ಅನ್ನು ಸಣ್ಣಗೆ ಹೆಚ್ಚಿಕೊಳ್ಳಿ.

ತದನಂತರ ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ, ಜೀರಿಗೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ.

ನಂತರ ಈರುಳ್ಳಿ, ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.

ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ.

ನಂತರ ಅದಕ್ಕೆ ಅರಿಶಿಣ, ಖಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.

ಈ ಒಗ್ಗರಣೆ ಗೊಜ್ಜನ್ನು ಬೆಂದಿರುವ ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ರುಚಿಕರವಾದ , ಹಾಗೂ ಸ್ವಾದಿಷ್ಟವಾದ ಟೊಮೆಟೊ ಅನ್ನ ರೆಡಿ!

Read more about: breakfast ಉಪಹಾರ
English summary

Tasty and mouth-watering Tomato Rice dish

Tomato rice is a mouth-watering dish that is tasty and filling.The following rice recipe is easy to prepare and can be packed for lunch too.
X
Desktop Bottom Promotion