For Quick Alerts
ALLOW NOTIFICATIONS  
For Daily Alerts

ಈ ನಾನ್ ಮಾಡುವುದು ಕೂಡ ರೊಟ್ಟಿಯಷ್ಟೇ ಸುಲಭ

|

ತಂದೂರಿ ನಾನ್ ರೊಟ್ಟಿಯನ್ನು ವೆಜ್ ಅಥವಾ ನಾನ್ ವೆಜ್ ಜೊತೆ ತಿನ್ನಬಹುದು. ಇದಕ್ಕೆ ಸ್ವಲ್ಪ ಗ್ರೇವಿ ರೀತಿಯ ಪದಾರ್ಥಗಳು ಬೆಸ್ಟ್ ಕಾಂಬಿನೇಷನ್.

ಈ ತಂದೂರ್ ನಾನ್ ಅನ್ನು ಸಾಮಾನ್ಯವಾಗಿ ಯಾರೂ ಮನೆಯಲ್ಲಿ ತಯಾರಿಸುವುದಿಲ್ಲ. ಏಕೆಂದರೆ ಅದನ್ನು ಮಾಡುವುದು ಕಷ್ಟವೆಂಬ ಭಾವನೆ ನಮ್ಮಲ್ಲಿದೆ. ಆದರೆ ನೀವು ತಂದೂರ್ ಒಲೆಯನ್ನು ರೆಡಿ ಮಾಡಿದರೆ ಈ ತಂದೂರಿ ಅಡುಗೆಗಳನ್ನು ಸುಲಭವಾಗಿ ತಯಾರಿಸಬಹುದು. ತಂದೂರ್ ಒಲೆ ರೆಡಿಮೇಡ್ ಆಗಿ ಕೂಡ ದೊರೆಯುತ್ತದೆ. ಇಲ್ಲಿ ನಾವು ತಂದೂರಿ ನಾನ್ ರೆಸಿಪಿ ನೀಡಿದ್ದೇವೆ ನೋಡಿ:

Tandoori Naan Recip
ಬೇಕಾಗುವ ಸಾಮಗ್ರಿಗಳು
* ಗೋಧಿ 2 ಕಪ್
* ಕಿಣ್ವ 2 ಚಮಚ (yeast)
* ಸ್ವಲ್ಪ ಉಪ್ಪು
* ಬೆಣ್ಣೆ 2 ಚಮಚ
ನೀರು 2 ಕಪ್

ತಯಾರಿಸುವ ವಿಧಾನ:

* ನೀರನ್ನು ಹದ ಬಿಸಿ ಮಾಡಬೇಕು. ನಂತರ ಅರ್ಧ ಕಪ್ ನೀರನ್ನು ಬಟ್ಟಲಿಗೆ ಹಾಕಿ ಅದರಲ್ಲಿ ಕಿಣ್ವ (yeast) ಹಾಕಿ ಕರಗಿಸಬೇಕು.

* ಈಗ ದೊಡ್ಡ ಬಟ್ಟಲಿಗೆ ಗೋಧಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲೆಸಿ.

* ನಂತರ ಆ ಉಂಡೆಯ ಮಧ್ಯ ಭಾಗದಲ್ಲಿ ಕೈ ಬೆರಳಿನಿಂದ ಗುಂಡಿ ಮಾಡಿ ಕಿಣ್ವ ಹಾಕಿದ ಬಿಸಿ ನೀರನ್ನು ಆ ಗುಂಡಿಗೆ ಸುರಿಯಿರಿ. ನಂತರ ಮಿಶ್ರಣವನ್ನು ಪುನಃ ಕಲೆಸಿ. ಮಿಶ್ರಣ ಕೈಗಂಟದಂತೆ ಇರಲಿ.

* ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ರೊಟ್ಟಿಗೆ ತಟ್ಟಿದಂತೆ ತಟ್ಟಿ.

* ಈಗ ತಂದೂರ್ ಒಲೆಯಲ್ಲಿ ರೊಟ್ಟಿ ರೀತಿಯಲ್ಲಿ ತಟ್ಟಿದ ನಾನ್ ಅನ್ನು ಅಂಟಿಸಿದರೆ ಕೆಂಡದ ಶಾಖದಿಂದ ತಂದೂರಿ ನಾನ್ ರೆಡಿಯಾಗುತ್ತದೆ.

ತಂದೂರಿ ಒಲೆಯನ್ನು ಸರಳವಾಗಿ ನೀವೇ ಮಾಡಬಹುದು. ತಳಭಾಗ ಓಪನ್ ಇರುವ ಒಂದು ಚಿಕ್ಕ ಟಿನ್ ನ ಟ್ರಮ್ ಇಟ್ಟು ಮಧ್ಯದಲ್ಲಿ ಬೆಂಕಿ ಹಾಕಬೇಕು. ನಂತರ ನಾನ್ ಅನ್ನು ಡ್ರಮ್ ನ ಬದಿಗೆ ಅಂಟಿಸಬೇಕು. ಈ ರೀತಿ ಮಾಡಿದರೆ ತಂದೂರಿ ಅಡುಗೆಗಳನ್ನು ಸುಲಭವಾಗಿ ನೀವೇ ತಯಾರಿಸಬಹುದು.

English summary

Tandoori Naan Recipe | Variety Of Nan Recipe | ತಂದೂರ್ ನಾನ್ ರೆಸಿಪಿ | ಅನೇಕ ಬಗೆಯ ನಾನ್ ರೆಸಿಪಿ

Few tandoori naan recipes are very easy to make and delicious too. If you have a small get-together or a special occasion, you can prepare tandoori naans.
X
Desktop Bottom Promotion