For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ರುಚಿಕರ ತಿನಿಸು ವ್ರೇಪ್

|

ಬೆಳಗ್ಗಿನ ತಿನಿಸು ರುಚಿಕರ ಹಾಗೂ ಸ್ವಾದಿಷ್ಟವಾಗಿರಬೇಕು ಎಂದೇ ಪ್ರತಿಯೊಬ್ಬ ಮಹಿಳೆ ಭಾವಿಸುತ್ತಾಳೆ. ತಾನು ಮಾಡಿದ ಪ್ರತೀ ತಿಂಡಿಯನ್ನು ಮನೆ ಮಂದಿ ಮೆಚ್ಚಬೇಕು ಆಕೆಯನ್ನು ಹೊಗಳಬೇಕು ಎಂಬ ಆಸೆ ಅವಳದಾಗಿರುತ್ತದೆ. ಬೆಳಗ್ಗಿನ ತಿನಿಸು ರುಚಿಕರ ಮತ್ತು ಸರಳವಾಗಿರಬೇಕು ಆಗ ಮಾತ್ರವೇ ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ.

ಇಂದು ನಾವು ನಿಮಗಾಗಿ ಸಿದ್ಧಪಡಿಸಿರುವ ವಿಶೇಷ ಬೆಳಗ್ಗಿನ ತಿನಿಸು ತಂದೂರಿ ಆಲೂ ವ್ರೇಪ್. ಇದು ಮಕ್ಕಳಿಂದ ಹಿಡಿದು ದೊಡ್ಡವರೂ ಇಷ್ಟಪಡುವ ತಿನಿಸಾಗಿದೆ. ಆಲೂಗಡ್ಡೆ ಸಮ್ಮಿಳಿತವಾಗಿರುವ ಈ ತಂದೂರಿ ಪ್ರೋಟೀನ್, ವಿಟಮಿನ್ ಸಂಮಿಶ್ರವಾಗಿದೆ.

Tandoori Aloo Wrap For Breakfast

ಇದರಲ್ಲಿ ಬಳಸುವ ಆಲೂಗಡ್ಡೆ ಬೇಯಿಸಿದ್ದು ಹುರಿದದ್ದಲ್ಲ ಇದರಿಂದ ಆಲೂಗಡ್ಡೆಯ ಸಾರ ಹಾಗೆಯೇ ಉಳಿಯುತ್ತದೆ. ಇನ್ನೇಕೆ ತಡ, ರುಚಿಕರ ತಂದೂರಿ ಆಲೂ ವ್ರೇಪ್ ಅನ್ನು ಮಾಡಲು ಸಮಯ ಒದಗಿಬಂದಿದೆ. ನಾವು ಇಲ್ಲಿ ನೀಡಿರುವ ಮಾಹಿತಿಯನ್ನು ಅನುಸರಿಸಿ ನಿಮ್ಮ ಬೆಳಗ್ಗಿನ ತಿಂಡಿಯನ್ನು ನಿತ್ಯನೂತನವಾಗಿಸಿ.

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ಉಪಹಾರಕ್ಕೆ ರುಚಿಕರ ಮೆಂತೆ ಸೊಪ್ಪಿನ ಇಡ್ಲಿ ರೆಸಿಪಿ

ವ್ರೇಪ್ ಮಾಡಲು
*ಮೈದಾ ಹುಡಿ - 200 ಗ್ರಾಂಗಳು
*ನೀರು - 1ಕಪ್
*ಉಪ್ಪು

ಸ್ಟಫ್ಫಿಂಗ್ ಮಾಡಲು
*ಆಲೂಗಡ್ಡೆ - 250 ಗ್ರಾಂಗಳು (ಬೇಯಿಸಿದ್ದು
*ಎಲೆಯುಳ್ಳ ತರಕಾರಿಗಳು - ಕ್ಯಾಬೇಜ್, ಲೆಟಿಸ್ ಸೊಪ್ಪು, ನೀರುಳ್ಳಿ (ನಿಮ್ಮ ಆಯ್ಕೆಯದ್ದು)

ಮೇರಿನೇಶನ್: (ನೆನೆಸಿಡುವುದು)
.ಮೆಣಸಿನ ಹುಡಿ - 1 ಟೇಸ್ಪೂನ್ (ಪೇಸ್ಟ್)
.ಮೊಸರು - 40 ಗ್ರಾಮ್ಸ್
.ಎಳ್ಳೆಣ್ಣೆ - 2ಟೇಸ್ಪೂನ್
.ಸಾಸಿವೆ ಎಣ್ಣೆ - 1 ಟೇಸ್ಪೂನ್
.ಗರಂ ಮಸಾಲಾ - 1/2 ಟೇಸ್ಪೂನ್
.ಜೀರಿಗೆ ಹುಡಿ - 1/2 ಟೇಸ್ಪೂನ್
.ಅರಶಿನ ಹುಡಿ - 1/2 ಟೇಸ್ಪೂನ್
.ಕಾಳುಮೆಣಸಿನ ಹುಡಿ
.ಉಪ್ಪು ರುಚಿಗೆ ತಕ್ಕಷ್ಟು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಕರವಾದ ಗೋಬಿ ಬಟಾಣಿ ಸೈಡ್ ಡಿಶ್ ರೆಸಿಪಿ

ವಿಧಾನ
1.ಆಲೂಗಡ್ಡೆಯನ್ನು ಬೇಯಿಸಿದ ನಂತರ, ಸಿಪ್ಪೆ ಸುಲಿದು ನಿಮ್ಮ ಅಂಗೈಯಿಂದ ಅದನ್ನು ಹುಡಿಮಾಡಿಕೊಳ್ಳಿ.

2.ಇದೀಗ ಹುಡಿ ಮಾಡಿದ ಆಲೂಗಡ್ಡೆಗಳಿಗೆ, ಮೇರಿನೇಶನ್ (ನೆನೆಸಿಡುವ) ಸಾಮಾಗ್ರಿಗಳ ಎಲ್ಲಾ ಸಾಂಬಾರು ಪದಾರ್ಥಗಳನ್ನು ಸೇರಿಸಿ. ಹುಡಿ ಮಾಡಿದ ಆಲೂಗಡ್ಡೆಯೊಂದಿಗೆ ಈ ಸಾಮಾಗ್ರಿಗಳನ್ನು ಮಿಶ್ರ

ಮಾಡಿಕೊಳ್ಳಿ. ಇದರಿಂದ ತರಕಾರಿಯೊಂದಿಗೆ ಚೆನ್ನಾಗಿ ಮಿಳಿತಗೊಳ್ಳುತ್ತದೆ.

3.ಈ ಮಿಶ್ರಣವನ್ನು 20 ನಿಮಿಷಗಳವರೆಗೆ ಹಾಗೆಯೇ ಬಿಡಿ.
250 ಸೆಲ್ಶಿಯಸ್‌‌ನಲ್ಲಿ ಓವನ್‌ನನ್ನು ಬಿಸಿ ಮಾಡಿ. ಈ ತಾಪಮಾನದಲ್ಲಿ ಮುಳುಗಿಸಿದ ಆಲೂಗಡ್ಡೆಯನ್ನು ಬೇಯಿಸಿ.

4.ಇದೀಗ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಹಿಟ್ಟು ನಾದಿಕೊಳ್ಳಿ ಮತ್ತು ಇದರಿಂದ ವ್ರೇಪ್ ಮಾಡಲು ಪ್ರಾರಂಭಿಸಿ. ಹಿಟ್ಟನ್ನು ಬಳಸಿಕೊಂಡು ಸಾಧ್ಯವಾದಷ್ಟು ವ್ರೇಪ್‌ಗಳನ್ನು ಮಾಡಿ.

5.ಇದೀಗ ನಿಮ್ಮ ಕೈಗಳನ್ನು ಬಳಸಿಕೊಂಡು ವ್ರೇಪ್‌ನ ಮಧ್ಯಭಾಗದಲ್ಲಿ ಬೇಯಿಸಿದ ಆಲೂಗಡ್ಡೆಗಳನ್ನು ಇರಿಸಿ. ವ್ರೇಪ್‌ನಾದ್ಯಂತ ಆಲೂಗಡ್ಡೆಗಳನ್ನು ಹರಡಿಸಿ ಮತ್ತು ವ್ರೇಪ್ ಅನ್ನು ಸುತ್ತಿ.

6.ನೀವು ಸುತ್ತುವ ಮುನ್ನ ಇತರ ತರಕಾರಿಗಳನ್ನು ಬಳಸಬಹುದು.

7.ಈ ಮಿಶ್ರಣದಲ್ಲಿ ಹಸಿರು ಚಟ್ನಿ ಮತ್ತು ನೀರುಳ್ಳಿ ರಿಂಗ್ಸ್ ಅನ್ನು ಇರಿಸಿ ಮತ್ತು ಜೊತೆಯಾಗಿ ಸುತ್ತಿಕೊಳ್ಳಿ.

ನಿಮ್ಮ ತಂದೂರಿ ಆಲೂ ವ್ರೇಪ್ ಸವಿಯಲು ಸಿದ್ಧವಾಗಿದೆ. ಮಿಂಟ್ ಚಟ್ನಿಯೊಂದಿಗೆ ಈ ತಂದೂರಿ ಆಲೂ ವ್ರೇಪ್ ಅನ್ನು ಸವಿಯಲು ನೀಡಿ.

English summary

Tandoori Aloo Wrap For Breakfast

This morning, we want you to try out something yummy and easy. The tandoori aloo wrap is a top favourite among kids since it has one of the most delicious vegetable in it, potatoes.
Story first published: Thursday, January 23, 2014, 18:22 [IST]
X
Desktop Bottom Promotion