For Quick Alerts
ALLOW NOTIFICATIONS  
For Daily Alerts

ಸ್ವೀಟ್ ಕಾರ್ನ್ ಪರೋಟ ರೆಸಿಪಿ

|

ಈ ಜೋಳದ ಪರೋಟ ಬೆಳಗಿನ ಬ್ರೇಕ್ ಫಾಸ್ಟ್ ಗೆ ಬೆಸ್ಟ್ ರೆಸಿಪಿಯಾಗಿದೆ. ಇದನ್ನು ಮೈದಾ ಬಳಸಿ ಮಾಡಬಹುದು ಅಥವಾ ಗೋಧಿ ಬಳಸಿಯೂ ಮಾಡಬಹುದು. ಜೋಳವನ್ನು ಬೇಯಿಸಿ ಅದರಿಂದ ಮಸಾಲೆ ತಯಾರಿಸಿ ಅದನ್ನು ಪರೋಟದ ಒಳಗೆ ತುಂಬಿ ಮಾಡುವ ಈ ಪರೋಟ ತಿನ್ನಲು ರುಚಿಕರವಾಗಿರುತ್ತದೆ.

ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

Sweet Corn Roti Recipe For Breakfast

ಬೇಕಾಗುವ ಸಾಮಾಗ್ರಿಗಳು
ಮೈದಾ 2 ಕಪ್
ಜೋಳ 2 ಕಪ್
ಈರುಳ್ಳಿ1
ಆಲೂಗಡ್ಡೆ1
ಕೊತ್ತಂಬರಿ ಸೊಪ್ಪು 1 ಚಮಚ
ಖಾರದ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಕಲೆಸಲು ನೀರು
ಎಣ್ಣೆ

ತಯಾರಿಸುವ ವಿಧಾನ:

* ಮೊದಲು ಜೋಳವನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ

* ನಂತರ ಪ್ಯಾನ್ ತೆಗೆದು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ಈಗ ಬೇಯಿಸಿದ ಆಲೂಗಡ್ಡೆ ಮತ್ತು ಜೋಳ ಹಾಕಿ ಮ್ಯಾಶ್ ಮಾಡಿ., ನಂತರ ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ.

* ಈಗ ಮೈದಾ ಹಿಟ್ಟಿಗೆ ಬಿಸಿ ನೀರು ಮತ್ತು ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ( ಹಿಟ್ಟು ತುಂಬಾ ಗಟ್ಟಿಯಾಗಬಾರದು, ನೀರು ನೀರಾಗಿಯೂ ಇರಬಾರದು).

* ಈಗ ಆಲೂ, ಜೋಳದ ಮಿಶ್ರಣದಿಂದ ಮೀಡಿಯಂ ಗಾತ್ರದ ಉಂಡೆ ಕಟ್ಟಿ.

* ನಂತರ ಮೈದಾ ಹಿಟ್ಟನ್ನು ಉಂಡೆ ಕಟ್ಟಿ, ಅದನ್ನು ಚಪಾತಿಗೆ ತಟ್ಟಿದ ರೀತಿಯಲ್ಲಿ ತಟ್ಟಿ, ಜೋಳದ ಉಂಡೆಯನ್ನು ಇಟ್ಟು, ನಂತರ ಅದನ್ನು ಮಡಚಿ ಮತ್ತೊಮ್ಮೆ ಲಟ್ಟಿಸಿ. ಈ ರೀತಿ ಉಳಿದ ಹಿಟ್ಟಿನಿಂದ ಪರೋಟಕ್ಕೆ ರೆಡಿ ಮಾಡಿ.

* ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ, ಅದರಲ್ಲಿ ಪರೋಟವನ್ನು ಹಾಕಿ ಅದರ ಮೇಲೆಯೂ ಎಣ್ಣೆ ಸವರಿ ಬೇಯಿಸಿ. ಪರೋಟದ ಎರಡೂ ಬದಿ ಬೇಯಿಸಿ. ಇಷ್ಟು ಮಾಡಿದರೆ ಮಸಾಲೆ ಮಿಕ್ಸ್ ಜೋಳದ ಪರೋಟ ರೆಡಿ. ಈ ರೀತಿ ಉಳಿದ ಪರೋಟ ತಯಾರಿಸಿ.

* ರೆಡಿಯಾದ ಪರೋಟ ಬಿಸಿ-ಬಿಸಿ ಇರುವಾಗಲೇ ರಾಯತ ಅಥವಾ ಚಟ್ನಿ ಜೊತೆ ಸವಿಯಿರಿ.

English summary

Sweet Corn Roti Recipe For Breakfast

The sweet corn parota recipe is easy to make and not time consuming too. If you try this sweet corn parota recipe this morning, we are sure that you will make it twice again after this first time!
X
Desktop Bottom Promotion