For Quick Alerts
ALLOW NOTIFICATIONS  
For Daily Alerts

ಆಲೂ ಸಬ್ಜಿ ಜೊತೆ ಸವಿಯಿರಿ ಮಸಾಲೆ ಪೂರಿ

|

ಪೂರಿ ಮಿಶ್ರಣಕ್ಕೆ ಸ್ವಲ್ಪ ಮಸಾಲೆ ಸಾಮಾಗ್ರಿಗಳನ್ನು ಹಾಕಿ ಮಾಡಿದರೆ ಪೂರಿ ಮತ್ತಷ್ಟು ರುಚಿಕರವಾಗಿರುತ್ತದೆ. ಇದನ್ನು ಚಟ್ನಿ, ಆಲೂ ಸಬ್ಜಿ, ಗ್ರೇವಿ ಈ ರೀತಿಯ ಆಹಾರ ಪದಾರ್ಥಗಳ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

ಮಸಾಲೆ ಪೂರಿ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Stuffed Masala Kachori

ಬೇಕಾಗುವ ಸಾಮಾಗ್ರಿಗಳು
ಮೈದಾ 2 ಕಪ್
ಮೊಸರು ಎರಡು ಚಮಚ
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಅಜ್ವೈನ್
ಬಿಸಿ ಎಣ್ಣೆ 2 ಚಮಚ
ನೀರು

ಮಸಾಲೆ ಸಾಮಾಗ್ರಿಗಳು

ಸ್ವಲ್ಪ ಶುಂಠಿ
4-5 ಎಸಳು ಬೆಳ್ಳುಳ್ಳಿ
ಸ್ವಲ್ಪ ಪುದೀನಾ
ಕೊತ್ತಂಬರಿ ಬೀಜ 1 ಚಮಚ
ಹಸಿ ಮೆಣಸಿನಕಾಯಿ 2-3
ಅರಿಶಿಣ ಪುಡಿ ಅರ್ಧ ಚಮಚ
ಕಡಲೆ ಹಿಟ್ಟು 2 ಚಮಚ
ಗರಂ ಮಸಾಲ 1/2 ಚಮಚ
ಆಮ್ ಚೂರು ಅರ್ಧ ಚಮಚ
ಎಣ್ಣೆ

ತಯಾರಿಸುವ ವಿಧಾನ:

* ಮಸಾಲೆ ಸಾಮಾಗ್ರಿಗಳಲ್ಲಿ ಎಣ್ಣೆಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಈಗ ದೊಡ್ಡ ಬಟ್ಟಲಿಗೆ ಮೈದಾ ಹಾಕಿ ಅದಕ್ಕೆ ಅಜ್ವೈನ್, ಮೊಸರು, ರುಚಿಗೆ ತಕ್ಕ ಉಪ್ಪು, ಹಾಗೂ ರುಬ್ಬಿದ ಮಸಾಲೆ, 2 ಚಮಚ ಬಿಸಿ ಎಣ್ಣೆ ಹಾಕಿ , ಸ್ವಲ್ಪ ನೀರು ಹಾಕಿ ಪೂರಿ ಹದಕ್ಕೆ ಕಲೆಸಿ. ಈಗ ಪೂರಿಗೆ ತಟ್ಟುವಂತೆ ತಟ್ಟಿ.

* ಬಾಣಲಿಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ. ಈಗ ಕಾದ ಎಣ್ಣೆಗೆ ತಟ್ಟಿದ ಹಿಟ್ಟನ್ನು ಹಾಕಿ, ಅದು ಉಬ್ಬಿ ಬಂದು ಸ್ವಲ್ಪ ಕಂದು ಬಣ್ಣ ಬರುವಾಗ ಒಮ್ಮೆ ಮಗುಚಿ ಹಾಕಿ ನಂತರ ತೆಗೆಯಿರಿ. ಈ ರೀತಿ ಉಳಿದ ಮಸಾಲೆ ಪೂರಿಗಳನ್ನು ಮಾಡಿ.

ಬಿಸಿ- ಬಿಸಿ ಮಸಾಲೆ ಪೂರಿಯನ್ನು ಪುದೀನಾ ಚಟ್ನಿ ಜೊತೆ ಸವಿಯಿರಿ.

English summary

Stuffed Masala Kachori | Variety Of Poori Recipe | ಮಸಾಲೆ ಪೂರಿ ರೆಸಿಪಿ | ಅನೇಕ ಬಗೆಯ ಪೂರಿ ರೆಸಿಪಿ

Stuffed masala kachoris or poori are served with hot aloo ki sabzi. Want to try this filling and delicious masala kachori recipe this Holi? Check out...
X
Desktop Bottom Promotion